Advertisement

‘ಟಿಪ್ಪು ನಿಜ ಕನಸು’ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ

01:07 PM Feb 02, 2023 | keerthan |

ವಿಜಯಪುರ: ಟಿಪ್ಪು ನಿಜ ಕನಸು ನಾಟಕದ ವಿರುದ್ಧ ದೂರು ಸಲ್ಲಿಸಿದ್ದ ಅರ್ಜಿದಾರ ದೂರು ಹಿಂಪಡೆದ ಕಾರಣ ನಮಗೆ ಜಯ ಸಿಕ್ಕಿದೆ. ಇದು ನಮ್ಮ ಪಾಲಿಗೆ ಸಂತಸ ಹಾಗೂ ಸಂಭ್ರಮದ ಸಂಗತಿ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರತಿಕ್ರಿಯಿಸಿದ್ದಾರೆ.

Advertisement

ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅಡ್ಡಂಡ ಕಾರ್ಯಪ್ಪ, ನಮ್ಮ ಬಳಿ ಅಗತ್ಯ ಐತಿಹಾಸಿಕ ಸಕ್ಷಾಧಾರ, ದಾಖಲೆಗಳಿದ್ದರೂ ಆರಂಭದಲ್ಲಿ ಹಿನ್ನಡೆಯಾಗಿತ್ತು. ಆದರೆ ನಮ್ಮ ಪರ ವಕೀಲರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು ಎಂದರು.

ಅಂತಿಮವಾಗಿ ಬೆಂಗಳೂರಿನ ಕೋರ್ಟಗೆ ಸೂಕ್ತ ದಾಖಲೆಗಳನ್ನು ನೀಡಿದಾಗ ತಡೆಯಾಜ್ಞೆ ತೆರವಾಗಿತ್ತು. ನಿನ್ನೆಯೂ ನ್ಯಾಯಾಲಯಕ್ಕೆ ಸಾಕ್ಷಾಧಾರಗಳನ್ನು ನೀಡಲು ನ್ಯಾಯಾಲಯಕ್ಕೆ ಹೋಗಿದ್ದೆವು. ನಮ್ಮ ವಕೀಲರು ಸಮರ್ಥ ವಾದ ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ದೂರುದಾರ ರಫಿವುಲ್ಲಾ ಅರ್ಜಿ ಹಿಂಪಡೆದಿದ್ದಾರೆ ಎಂಬುದು ಸಂತಸದ ಸಂಗತಿ ಎಂದು‌ ಅಡ್ಡಂಡ ಕಾರ್ಯಪ್ಪ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ

ತ್ರೀ ಸದಸ್ಯ ಪೀಠ ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ಅಭಿಪ್ರಾಯಪಟ್ಟಿದೆ. ಸರ್ಕಾರ ಇಂಥ ಅಂಶಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿ ಟಿಪ್ಪು ಹೆಸರಿನಲ್ಲಿ ಇರುವ ಎಲ್ಲ ವೃತ್ತ, ಉದ್ಯಾನವನ, ರಸ್ತೆ, ಕಟ್ಟಡಗಳಿಗೆ ದೇಶಕ್ಕಾಗಿ ಬಲಿದಾನಗೈದ ಹುತಾತ್ಮರ ಹೆಸರುಗಳನ್ನು ಮರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next