Advertisement

ಕಾಶ್ಮೀರಿ ಪಂಡಿತರ ಹತ್ಯಾಕಾಂಡ: ಮರು ತನಿಖೆಗೆ ಆಗ್ರಹ

12:26 AM Mar 25, 2022 | Team Udayavani |

ಹೊಸದಿಲ್ಲಿ: 1990ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಘಟನೆಗಳನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ಆಯೋಗದ ಮೂಲಕ ತನಿಖೆಗೊಳಪಡಿಸಬೇಕೆಂದು ರೂಟ್ಸ್‌ ಇನ್‌ ಕಾಶ್ಮೀರ್‌ ಎಂಬ ಕಾಶ್ಮೀರಿ ಪಂಡಿತರ ಸಂಘಟನೆಯೊಂದು ಸುಪ್ರೀಂ ಕೋರ್ಟ್‌ಗೆ ಕ್ಯುರೇಟಿವ್‌ ಅರ್ಜಿಯನ್ನು ಸಲ್ಲಿಸಿದೆ.

Advertisement

2017ರಲ್ಲಿ ಇದೇ ಮನವಿಯ ಅರ್ಜಿಯೊಂದು ಸಲ್ಲಿಕೆಯಾಗಿದ್ದು ಆ ವರ್ಷದ ಎ. 27ರಂದು ಸುಪ್ರೀಂ ಕೋರ್ಟ್‌ ಆ ಅರ್ಜಿ ಯನ್ನು ವಜಾಗೊಳಿಸಿತ್ತು. 1989-90ರಲ್ಲಿ ನಡೆದಿರುವ ಘಟನೆಗಳ ಬಗ್ಗೆ ಅರ್ಜಿಯಲ್ಲಿ ಉಲ್ಲೇಖೀಸಲಾಗಿದೆ. ಆ ಘಟನೆಗಳು ಜರಗಿ 27 ವರ್ಷಗಳೇ ಕಳೆದುಹೋಗಿವೆ. ಈಗ ಅಂದು ನಡೆದ ಘಟನೆಗಳ ಸಾಕ್ಷ್ಯಾಧಾರಗಳು ಉಳಿದಿರುವ ಭರವಸೆಯಿಲ್ಲ. ಹಾಗಾಗಿ ತನಿಖೆ ನಡೆಸಿದರೂ ಅದು ಫ‌ಲಪ್ರದವಾಗುವ ಸಾಧ್ಯತೆಗಳು ತೀರಾ ಕಡಿಮೆ” ಎಂದು ಆಗಿನ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಹೇಳಿತ್ತು. ಆ ಹಿನ್ನೆಲೆಯಲ್ಲಿ ಕ್ಯುರೇಟಿವ್‌ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಅರ್ಜಿಯಲ್ಲಿ, ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಪ್ರಕರಣಗಳಲ್ಲಿ, ಉಗ್ರವಾದಿಗಳ ಆರೋಪ ಸಾಬೀತುಪಡಿಸುವಂಥ ಸಾûಾÂಧಾರಗಳನ್ನು ಕಲೆಹಾಕುವಲ್ಲಿ ಜಮ್ಮು ಕಾಶ್ಮೀರ ಪೊಲೀಸ್‌ ಇಲಾಖೆ ವಿಫ‌ಲವಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಸುಪ್ರೀಂ ಕೋರ್ಟ್‌ ನ್ಯಾಯಪೀಠಕ್ಕೆ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದ ನೂರಾರು ಎಫ್ಐಆರ್‌ಗಳನ್ನು ಹಾಜರು ಪಡಿಸಲಾಗಿದ್ದು ಅವುಗಳನ್ನು ಸಿಬಿಐ ಅಥವಾ ಎನ್‌ಐಎಗೆ ವರ್ಗಾಯಿಸಿ ತನಿಖೆಗೆ ಸೂಚಿಸಬಹುದು ಎಂದು ಸಂಘಟನೆ ಕೇಳಿಕೊಂಡಿದೆ.

ದಿಲ್ಲಿಯ ಹೊಟೇಲೊಂದರಲ್ಲಿ ಕಾಶ್ಮೀರದ ವ್ಯಕ್ತಿಯೊಬ್ಬರಿಗೆ ಸೂಕ್ತ ಗುರುತು ಪತ್ರಗಳನ್ನು ತೋರಿಸಿದ ಮೇಲೂ ಹೊಟೇಲ್‌ನಲ್ಲಿ ಕೊಠಡಿ ನೀಡಲು ನಿರಾಕರಿಸಲಾಗಿದೆ ಎಂಬ ವರದಿಗಳು ಸದ್ದು ಮಾಡಿವೆ. ಕೆಲವು ಜಾಲ ತಾಣಗಳು ಇದರ ವೀಡಿಯೋ ಸಹಿತ ಸುದ್ದಿಗಳನ್ನು ಬಿತ್ತರಿಸಿವೆ. ದಿಲ್ಲಿ ಪೊಲೀಸರು ಕಾಶ್ಮೀರಿಗರಿಗೆ ಕೊಠಡಿ ನೀಡಬೇಡಿ ಎಂದು ಸೂಚಿಸಿದ್ದರಿಂದ ಹೀಗೆ ಮಾಡಲಾಗಿದೆ ಎಂದು ಹೊಟೇಲ್‌ ಸಿಬಂದಿ ವೀಡಿಯೋದಲ್ಲಿ ಕಾರಣ ನೀಡಿದ್ದಾರೆ. ಆದರೆ ದಿಲ್ಲಿ ಪೊಲೀಸರು, ಇದನ್ನು ಅಲ್ಲಗಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next