Advertisement

ಪಾಲಿಕೆಯ ಲೀಸ್‌ ಆಸ್ತಿ ಮಾರಾಟ ವಿರೋಧಿಸಿ ಮನವಿ

02:56 PM Feb 22, 2022 | Shwetha M |

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 366 ಆಸ್ತಿಗಳನ್ನು ಲೀಸ್‌ ನೀಡಿದ್ದು, ಇದೀಗ ಈ ಆಸ್ತಿಗಳನ್ನು ಮಾರಾಟ ಮಾಡುವುದಾಗಿ ಮಹಾನಗರ ಪಾಲಿಕೆ ಲೀಜ್‌ದಾರರಿಗೆ ನೋಟಿಸ್‌ ನೀಡಿದೆ. ಹೀಗಾಗಿ ಕೂಡಲೇ ಇಂಥ ಪ್ರಯತ್ನದಿಂದ ಪಾಲಿಕೆ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

Advertisement

ಸೋಮವಾರ ಜಿಲ್ಲಾಧಿಕಾರಿ ಕಚೇರಿಗ ತೆರಳಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಪ್ರಮುಖರು, ಮಹಾನಗರ ಪಾಲಿಕೆ ಒಡೆತನದಲ್ಲಿರುವ 366 ಲೀಜ್‌ ಆಸ್ತಿಗಳನ್ನು ಮಾರಾಟಕ್ಕೆ ಮುಂದಾಗಿದೆ. ಇದರಿಂದ ಮಹಾನಗರ ಪಾಲಿಕೆಗೆ ತೆರಿಗೆಯಲ್ಲಿ ಅನ್ಯಾಯ ಮಾಡುವ ಹುನ್ನಾರ ನಡೆಸಿದೆ ಎಂದು ದೂರಿದರು.

ಪಾಲಿಕೆಯ ಈ ನಿರ್ಧಾರದಿಂದ ಪಾಲಿಕೆ ಒಡೆತನದ 366 ಆಸ್ತಿಗಳ ಲೀಜ್‌ ಪಡೆದಿರುವ ವ್ಯಾಪಾರಿಗಳಿಗೆ ಅನ್ಯಾಯ ಮಾಡಿದಂತಾಗುತ್ತಿದೆ. ಹೀಗಾಗಿ ಸರ್ಕಾರ ಮಟ್ಟದ ಆಸ್ತಿಗಳನ್ನು ಮಾರಾಟ ಮಾಡಬಾರದು. ಈ ನಿಟ್ಟಿನಲ್ಲಿ ವಿಜಯಪುರ ನಗರ ಶಾಸಕರು ಪ್ರಧಾನ ಮಂತ್ರಿಯವರು ಕೈಗೊಂಡ 23 ಸೆಕ್ಟರ್‌ ಗಳನ್ನು ಖಾಸಗೀಕರಣಗೊಳಿಸಿದ ರೀತಿಯಲ್ಲಿ ನಗರ ಶಾಸಕರು ಕ್ರಮ ಕೈಗೊಳ್ಳುತ್ತಿರುವುದು ಖಂಡನೀಯ. ಆದ್ದರಿಂದ ಮಹಾನಗರ ಪಾಲಿಕೆ 366 ಲೀಸ್‌ ಆಸ್ತಿಗಳನ್ನು ಮಾರಾಟ ಮಾಡದೇ ಲೀಜ್‌ ಪ್ರಕ್ರಿಯೆ ಮುಂದುವರಿಸಬೇಕು ಎಂದು ಮನವಿ ಸಲ್ಲಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿ ವಿಜಯಪುರ ನಗರ ಅಧ್ಯಕ್ಷ ಅಬ್ದುಲ ಹಮೀದ್‌ ಇನಾಮದಾರ, ಸಚಿನ ತಳವಾರ, ರಾಕೇಶ, ಅಮೀತ್‌ ಹುದ್ದಾರ, ಸೊಹೆಲ್‌ ಇನಾಮದಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next