Advertisement

Padubidri: ಕಂಬಳ ಬಗ್ಗೆ ಅರಿಯದೇ ಪೆಟಾ ವಿವಾದ: ಡಾ| ದೇವಿಪ್ರಸಾದ್‌ ಶೆಟ್ಟಿ

01:54 AM Oct 25, 2024 | Team Udayavani |

ಪಡುಬಿದ್ರಿ: ರಾಜ್ಯ ಸರಕಾರದ ಸಂಪೂರ್ಣ ಬೆಂಬಲದೊಂದಿಗೆ ಗ್ರಾಮೀಣ ಭಾಗದ ಜನರ ಕ್ರೀಡೆಯಾದ, ರಾಷ್ಟ್ರವ್ಯಾಪಿ ಮನ್ನಣೆ ಗಳಿಸಿರುವ ಕಂಬಳ ಕ್ರೀಡೆಯ ಬಗೆಗೆ ಸರಿಯಾಗಿ ಮಾಹಿತಿ ಹೊಂದಿರದ ಪ್ರಾಣಿದಯಾ ಸಂಘ(ಪೆಟಾ) ವಿನಾಕಾರಣವಾಗಿ ವಿವಾದವನ್ನು ಸೃಷ್ಟಿಸುತ್ತಿದೆ ಎಂದು ಉಡುಪಿ, ದ.ಕ., ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ ಶೆಟ್ಟಿ ಹೇಳಿದ್ದಾರೆ.

Advertisement

ಕಂಬಳದ ಕೋಣಗಳನ್ನು ಹಿಂಸಿಸಲು ಕೋಣಗಳ ಯಜಮಾನರು ಸಾಕುತ್ತಿಲ್ಲ. ಅವುಗಳನ್ನು ಮಕ್ಕಳಿಂದಲೂ ಅಧಿಕ ಪ್ರೀತಿಯಿಂದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಾಕುತ್ತಿದ್ದಾರೆ.

ಬೆಂಗಳೂರು ಕಂಬಳಕ್ಕೆ ತೆರಳುವ ದಾರಿ ಮಧ್ಯೆ ಅವುಗಳ ಊಟೋಪಹಾರಗಳಿಗಾಗಿಯೇ ಪ್ರತ್ಯೇಕ ತಂಡವು ಬಹಳಷ್ಟು ಶ್ರಮಿಸಿದ್ದು ಜನಮನ್ನಣೆ ಪಡೆದಿದೆ.

ಹಾಗಾಗಿ ಕೇವಲ ಪ್ರಾಣಿ ಹಿಂಸೆ ಎಂಬ ಕಾರಣ ನೀಡಿ ಉಚ್ಚ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಯನ್ನು ಸಲ್ಲಿಸಿರುವುದು ಸರಿಯಲ್ಲ ಎಂದು ಡಾ| ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next