ನವದೆಹಲಿ : ದಿನದಿಂದ ದಿನಕ್ಕೆ ಪ್ರಾಣಿಗಳ ಮೇಲೆ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿವೆ. ಇವುಗಳನ್ನು ತಡೆಯಬೇಕೆಂದು ಪ್ರಾಣಿ ದಯಾ ಸಂಘಗಳು ಹೋರಾಟ ನಡೆಸುತ್ತಿವೆ. ಪ್ರಾಣಿಗಳ ಮೇಲೆ ಕ್ರೌರ್ಯ ತಡೆಗಟ್ಟುವ ಕಾಯ್ದೆ 1990ರ ಪ್ರಕಾರ ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡಿದವರನ್ನು ವಾರೆಂಟ್ ಇಲ್ಲದೇ ವಿಚಾರಣೆ ನಡೆಸಬಹುದು. ಈ ಕಾಯ್ಕೆಯನ್ನೇ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತದ ಪ್ರಾಣಿ ದಯಾ ಸಂಘ ಪೇಟಾ(PETA) ಪ್ರಧಾನಿ ಮೋದಿ ಮತ್ತು ಕೇಂದ್ರ ಮಂತ್ರಿ ಗಿರಿರಾಜ್ ಸಿಂಗ್ ಬಳಿ ಮನವಿಯೊಂದನ್ನು ಮಾಡಿಕೊಂಡಿದೆ.
ಪ್ರಾಣಿಗಳ ಮೇಲೆ ಯಾರೇ ದೌರ್ಜನ್ಯ, ಹಲ್ಲೆ ಮಾಡಿದರೆ ಅಂತಹ ಅಪರಾಧವನ್ನು ವಿಚಾರಣಾರ್ಹ ಅಪರಾಧ(Cognisable Offence) ಎಂದು ತೀರ್ಮಾನಿಸಿ ಶಿಕ್ಷೆ ನೀಡಬೇಕು ಎಂದು ಕೇಳಿಕೊಂಡಿದೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ 30 ಬೀದಿ ನಾಯಿಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಪೇಟಾ ಮನವಿ ಮಾಡಿದೆ. ಅಲ್ಲದೆ ಪ್ರಾಣಿಗಳನ್ನು ಹಿಂಸಿಸುವ ಜನರಿಗೆ ದೊಡ್ಡ ಮೊತ್ತದ ದಂಡ ಹಾಕುವಂತೆ ಕೇಳಿದೆ.
ಈ ಹಿಂದೆ ಕೂಡ ಅಂದರೆ 2018ರಲ್ಲೂ ಕೂಡ ಪರಿಸರ ಸಚಿವಾಲಯಕ್ಕೆ ಮನವಿಯನ್ನು ಮಾಡಲಾಗಿತ್ತು. ಆ ಸಮಯದಲ್ಲಿ ಹರಿಯಾಣದ ಮೆವತ್ ಪ್ರದೇಶದಲ್ಲಿ ಗರ್ಭಧರಿಸಿದ್ದ ಮೇಕೆ ಮೇಲೆ ಗುಂಪು ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಲಾಗಿತ್ತು.
Related Articles
ನಂತ್ರ 2019ರಲ್ಲಿ ಇದೇ ಪೇಟಾ ವ್ಯಕ್ತಿಯೊಬ್ಬನ ವಿರುದ್ಧ ಎಫ್ ಐ ಆರ್ ದಾಖಲಿಸಿತ್ತು. ವ್ಯಕ್ತಿಯು ಬೀದಿ ನಾಯಿಯ ಮೇಲೆ ಅತ್ಯಾಚಾರ ಮಾಡಿದ್ದ ಎಂಬ ಕಾರಣಕ್ಕೆ ದೂರು ದಾಖಲಾಗಿತ್ತು.
ಈ ಎಲ್ಲಾ ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಸದ್ಯ ಪೇಟಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಪ್ರಾಣಿಗಳನ್ನು ಹಿಂಸೆ ಮಾಡುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದೆ.