ನವದೆಹಲಿ : ಇತ್ತೀಚಿನ ದಿನಗಳಲ್ಲಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ ಅದರಂತೆ ನೋಯ್ಡಾದಲ್ಲಿ ನಡೆದ ಘಟನೆ ಜನರನ್ನು ಬೆಚ್ಚಿ ಬೀಳಿಸುವಂತಿದೆ, ಇಲ್ಲಿನ ವಸತಿ ಸಮುಚ್ಚಯದಲ್ಲಿ ಶಾಲಾ ಬಾಲಕನಿಗೆ ಸಾಕು ನಾಯಿಯೊಂದು ಕಚ್ಚಿದ ಪ್ರಕರಣ ನಡೆದಿದೆ.
ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ತನ್ನ ತಾಯಿಯ ಜೊತೆ ವಸತಿ ಸಮುಚ್ಚಯದ ಲಿಫ್ಟ್ ನಲ್ಲಿ ನಿಂತಿದ್ದ ವೇಳೆ ಸಾಕು ನಾಯಿಯೊಂದು ಕಚ್ಚಿ ಗಾಯಗೊಳಿಸಿದೆ. ಈ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ.
ಸಾಮಾನ್ಯವಾಗಿ ಬೀದಿ ನಾಯಿಗಳಿಂದ ಮಕ್ಕಳಿಗೆ ಅಪಾಯವಾಗುತ್ತಿತ್ತು, ಆದರೆ ಈಗ ಸಾಕು ನಾಯಿಗಳು ಕೂಡ ಮಕ್ಕಳ ಮೇಲೆ ದಾಳಿ ಮಾಡಲು ಆರಂಭಿಸಿವೆ. ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಸಾಕು ನಾಯಿಗಳು ವಿಶೇಷವಾಗಿ ಹೆಚ್ಚು ಆಕ್ರಮಣಕಾರಿ ಆಗುತ್ತಿವೆ. ಇಂತಹ ಪ್ರಕರಣಗಳು ದೆಹಲಿ-ಎನ್‌ಸಿಆರ್‌ನಲ್ಲಿ ನಿರಂತರವಾಗಿ ಬರುತ್ತಿದ್ದು, ಸಾಕು ನಾಯಿಯು ಮಾಲೀಕರ ಮುಂದೆ ಮಕ್ಕಳು ಮತ್ತು ಹಿರಿಯರ ಮೇಲೆ ದಾಳಿ ಮಾಡಿದೆ. ಲಿಫ್ಟ್‌ನಲ್ಲೂ ಇಂತಹ ಹಲವು ಘಟನೆಗಳು ನಡೆದಿವೆ.
ಈ ಪ್ರಕರಣ ಬಿಸ್ರಖ್ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು. ನೋಯ್ಡಾ ಪ್ರದೇಶದ ಲಾ ರೆಸಿಡೆನ್ಸಿಯ ವಸತಿ ಸಮುಚ್ಚಯದ ಲಿಫ್ಟ್‌ನಲ್ಲಿ ಈ ಘಟನೆ ನಡೆದಿದೆ. ತನ್ನ ತಾಯಿ ಜೊತೆ ಬಾಲಕ ಶಾಲೆಗೆ ಹೊರಟಿದ್ದು ಈ ವೇಳೆ ನಾಯಿಯನ್ನು ಅದರ ಮಾಲಕ ಲಿಫ್ಟ್ ನೊಳಗೆ ತಂದಿದ್ದಾರೆ ಈ ವೇಳೆ ಬಾಲಕನ ಕೈಗೆ ನಾಯಿ ಕಚ್ಚಿ ಗಾಯಗೊಳಿಸಿದೆ, ಕೂಡಲೇ ಆಸ್ಪತ್ರೆಗೆ ಬಾಲಕನನ್ನು ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ ಇದುವರೆಗೆ ಒಟ್ಟು ನಾಲ್ಕು ಚುಚ್ಚುಮದ್ದುಗಳನ್ನು ನೀಡಲಾಗಿದೆ ಎಂದು ಪೋಷಕರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾಯಿ ಕಚ್ಚುವ ಅನೇಕ ಘಟನೆಗಳು ನಡೆಯುತ್ತಿವೆ. ಅಲ್ಲದೆ ಇತ್ತೀಚೆಗೆ ನಗರದಲ್ಲಿ ನಾಯಿ ಕಡಿತದಿಂದ 8 ತಿಂಗಳ ಮಗು ಸಾವನ್ನಪ್ಪಿತ್ತು. ಗಮನಾರ್ಹವಾದ ವಿಚಾರ ಏನೆಂದರೆ ಸಾಕು ನಾಯಿಗಳ ಕಾಟ ಹೆಚ್ಚುತ್ತಿರುವ ಬಗ್ಗೆ ನೋಯ್ಡಾದಲ್ಲಿ ಹೊಸ ನಾಯಿ ನೀತಿಯನ್ನು ಜಾರಿಗೆ ತರಲಾಗಿದೆ. ಅದರಂತೆ ಸಾಕುಪ್ರಾಣಿಗಳನ್ನು ಸಾಕಲು ನೋಯ್ಡಾ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಈಗ ಕಡ್ಡಾಯವಾಗಿದೆ. ಇದಲ್ಲದೆ ಸಾಕು ನಾಯಿ ಕಚ್ಚಿದರೆ ಅದರ ಮಾಲೀಕರಿಂದ ಚಿಕಿತ್ಸಾ ವೆಚ್ಚ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ :ಕೋಲಾರ ಕಡೆ ಮುಖಮಾಡಿದ ಸಿದ್ದುಗೆ ಸಿಕ್ಕಿದ್ದೇ ಶ್ರೀಪಾದ : ಯತ್ನಾಳ್