Advertisement
ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ತೆಂಗಿಗೆ ಇಂತಹ ಕಾಯಿಲೆ ಕಾಣಿಸಿಕೊಂಡಿದೆ ಎಂದು ಬೆಳೆಗಾರರು ಹೇಳಿದರೆ, ಇದು ಕಪ್ಪುತಲೆ ಹುಳ ಬಾಧೆ ಇರಬಹುದೆನ್ನುವುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ.
ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಹಾಗೂ ಮೂವತ್ತುಮುಡಿ ಪರಿಸರದಲ್ಲಿ ಸುಮಾರು 5ರಿಂದ 6 ಸಾವಿರದಷ್ಟು ತೆಂಗಿನ ಮರಗಳಿದ್ದು, ನೂರಾರು ಮರಗಳಿಗೆ ರೋಗತಗಲಿದೆ. ಮರಗಳಲ್ಲಿ ಹೊಸ ದಾಗಿ ಗರಿ ಮೂಡುತ್ತಿಲ್ಲ. ಹೊಸ ಫಲದ ಲಕ್ಷಣವೂ ಕಾಣುತ್ತಿಲ್ಲ, ಹಸುರಿನ ಅಂಶ ಸಂಪೂರ್ಣ ಮಾಯವಾಗಿದೆ. ಇಲ್ಲಿನ ಬಹುಭಾಗ ಉಪ್ಪು ನೀರಿನ ಸಮಸ್ಯೆ ಬಾಧಿತವಾಗಿದೆ. ಆದ್ದರಿಂದ ಮುಂಗಾರಿನಲ್ಲಿ ಒಂದು ಭತ್ತದ ಬೆಳೆ ಬಿಟ್ಟರೆ ಬೇರೆ ಯಾವುದೇ ಕೃಷಿ ಸಾಧ್ಯವಾಗುವುದಿಲ್ಲ. ಆದ್ದರಿಂದ ರೈತರು ಆದಾಯಕ್ಕಾಗಿ ತೆಂಗಿನ ಮರಗಳನ್ನೇ ನೆಚ್ಚಿಕೊಂಡಿದ್ದಾರೆ. ಈಗ ಅದಕ್ಕೂ ರೋಗ ಬಾಧಿಸಿದ್ದು, ರೈತರನ್ನು ಕಂಗಾಲಾಗಿಸಿದೆ.
Related Articles
ನಿಖರವಾಗಿ ರೋಗವೇನೆಂಬು ದನ್ನು ಆದಷ್ಟು ಬೇಗ ಪತ್ತೆಹಚ್ಚಿ,ನಿಯಂತ್ರಿಸಬೇಕು. ಸಂಕಷ್ಟಕ್ಕೀಡಾಗಿರುವ ಬೆಳೆಗಾರರಿಗೆ ಸರಕಾರದಿಂದ ನಷ್ಟ ಪರಿ ಹಾರವನ್ನು ಸಹ ನೀಡಬೇಕು ಎಂದು ಸಂತ್ರಸ್ತ ಬೆಳೆಗಾರರು ಆಗ್ರಹಿಸಿದ್ದಾರೆ.
Advertisement
ಇದು ಕಪ್ಪು ತಲೆ ಹುಳದ ಬಾಧೆ ಇರಬೇಕು. ಆದರೆ ಅದೇ ಅಂತ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ರೈತರು ಗದ್ದೆ, ತೋಟಕ್ಕೆ ಕೀಟ ನಾಶಕ ಬಳಸಿದ್ದರೆ ಅದರ ಪರಿಣಾಮವೂ ಇರಬಹುದು. ಅಲ್ಲಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಬಳಿಕವಷ್ಟೇ ಈ ಬಗ್ಗೆ ಹೇಳಬಹುದು. ಇಡೀ ಮರಕ್ಕೆ ಇದರಿಂದ ಅಪಾಯ ಇದ್ದಂತೆ ಕಾಣುತ್ತಿಲ್ಲ.– ಡಾ| ರೇವಣ್ಣ ರೇವಣ್ಣನವರ್, ಕೀಟಶಾಸ್ತ್ರ ಪ್ರಾಧ್ಯಾಪಕ, ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ, ಬ್ರಹ್ಮಾವರ