Advertisement
ನಗರದ ಬೆಣ್ಣೂರು ಕಲ್ಯಾಣ ಮಂಟಪದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಒಂಭತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎರಡು ಸಾವಿರ ರೈತರಿಗೆ ಎರಡು ಕೋ.ರೂ ಬಡ್ಡಿ ರಹಿತ ಬೆಳೆಸಾಲ ವಿತರಿಸಿ ಮಾತನಾಡಿದರು.
Related Articles
Advertisement
ಬೆಳೆಸಾಲ ಹತ್ತು ಪ್ರಮಾಣ ಯತ್ನ: ಬೇರೆ ಜಿಲ್ಲೆಗಳಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಸಾಲ ಸಿಕ್ತಾ ಇದೆ. ಹೀಗಾಗಿ ಜಿಲ್ಲೆಯಲ್ಲೂ ಈಗ ನೀಡಲಾಗುತ್ತಿರುವ ಸಾಲದ ಪ್ರಮಾಣ ಹತ್ತು ಪಟ್ಟು ದೊರಕುವಂತಾಗಲು ತಾವೂ ಯತ್ನಿಸುವುದಾಗಿ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ರೈತರಿಗೆ ಹೆಚ್ಚಿನ ಪ್ರಮಾಣದ ಸಾಲ ದೊರಬೇಕೆಂದರೆ ಬ್ಯಾಂಕ್ ಪುನಶ್ಚೇತನ ಗೊಳ್ಳಬೇಕು. ಹೀಗಾಗಿ ಪಡೆದ ಸಾಲ ಸಕಾಲಕ್ಕೆ ಮರುಪಾವತಿಸಬೇಕೆಂದರು.
ಈ ಹಿಂದೆ ರೈತರಿಗೆ ಸಾಲವನ್ನು ಅತ್ಯಂತ ಕನಿಷ್ಟ ( ಭೀಕ್ಷೆ ರೂಪದಲ್ಲಿ) ವಾಗಿ ನೀಡಲಾಗುತ್ತಿತ್ತು. ಈಗ ಹೆಚ್ಚಿಗೆ ನೀಡಲಾಗುತ್ತಿದೆ. ಇದು ಹೆಚ್ಚಿಸಲಾಗುತ್ಯಿದೆ. ಇದು ತಮ್ಮದು ರೈತಪರ ಎಂಬುದನ್ನು ನಿರೂಪಿಸುತ್ತದೆ ಎಂದರು.
ಉಪಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ, ಬ್ಯಾಂಕ್ ಈಗ ಸುಧಾರಣೆಯತ್ತ ಹೆಜ್ಜೆ ಹಾಕುತ್ತಿದೆ. ಹೀಗಾಗಿ ರೈತರಲ್ಲಿ ಮಂದಹಾಸ ಮೂಡಿದೆ. ಮುಂದಿನ ದಿನಗಳಲ್ಲಿ ಹಿರಿಯ ನಿರ್ದೇಶಕರಾಗಿರುವ ಶರಣಬಸಪ್ಪ ಪಾಟೀಲ್ ಅಷ್ಢಗಾ ಅಧ್ಯಕ್ಷರಾಗಲಿದ್ದಾರೆ ಎಂದರು.
ಯುಕೆಪಿ ಕಾಡಾದ ಆಡಳಿತಾಧಿಕಾರಿ ಶರಣಬಸಪ್ಪ ಬೆಣ್ಣೂರು ಮಾತನಾಡಿ, ಸಹಕಾರಿ ಕ್ಷೇತ್ರದ ಬಲವರ್ಧನೆಯಲ್ಲಿ ಪ್ರಮಾಣಿಕತೆಯೇ ಮುಖ್ಯ ವಾಗಿದೆ. ಹೀಗಾಗಿ ಪಡೆದ ಸಾಲ ಸಕಾಲದಲ್ಲಿ ಮರು ಪಾವತಿಸುವುದು ಮುಖ್ಯವಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶರಣಬಸಪ್ಪ ಪಾಟೀಲ್ ಅಷ್ಠಗಾ ಮಾತನಾಡಿ, ರೈತರಿಗೆ ಸಾಲ ನೀಡದಿರುವ ಮಟ್ಟಿಗೆ ತಲುಪಿದ್ದ ಬ್ಯಾಂಕ್ ಪುನಶ್ಚೇತನ ಗೊಳ್ಳಲು ಹಿಂದಿನ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿ ಕಾರಣವಾಗಿದೆ. ಮಧ್ಯಾಮವಧಿ ಸಾಲ ಮನ್ನಾ ಮಾಡಿರುವುದು ಹಾಗೂ 10 ಕೋ. ರೂ ಷೇರು ನೀಡಿರುವುದು ಜತೆಗೆ ಪ್ರಮುಖ ವಾಗಿ 200 ಕೋ ರೂ ಅಪೆಕ್ಸ್ ದಿಂದ ಸಾಲ ದೊರಕಿಸುವಂತೆ ಮಾಡಿರುವುದೇ ಕಾರಣಗಳಾಗಿವೆ ಎಂದು ವಿವರಿಸಿದರು. ಮತ್ತೋರ್ವ ನಿರ್ದೇಶಕ ಅಶೋಕ ಸಾವಳೇಶ್ವರ ಸಹ ಮಾತನಾಡಿದರು.
ಡಿಸಿಸಿ ಬ್ಯಾಂಕ್ ಎಂಡಿ ಚಿದಾನಂದ ನಿಂಬಾಳ, ಜನರಲ್ ಮ್ಯಾನೇಜರ ಮುತ್ತುರಾಜ, ತಹಶಿಲ್ದಾರ ಪ್ರಕಾಶ ಕುದುರೆ, ಸಹಾಯಕ ಕೃಷಿ ನಿರ್ದೇಶಕ ಚಂದರಕಾಂತ ಜೀವಣಗಿ, ಪ್ರಮುಖರಾದ ರಾಜೇಂದ್ರ ಕರೇಕಲ್, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರುಗಳಾದ ಲಿಂಗರಾಜ ಧುಳಗೊಂಡ, ಸಂಗಮೇಶ್ವರ ಚೋರಗಸ್ತಿ, ಶಿವರಾಯ ಶಿವಮೂರ್ತಿ, ಶಿವರಾಜ ಎಸ್ ಸಿರಸಗಿ ಕೋಟನೂರ, ಪ್ರಭುಲಿಂಗ ಮೂಲಗೆ, ಗಂಗಾಧರ ಪೊಲೀಸ್ ಪಾಟೀಲ್, ಲಿಂಗಣಗೌಡ ಪಾಟೀಲ್, ಬ್ಯಾಂಕ್ ನ ಅಧಿಕಾರಿ ಗಳಾದ ಬಸವರಾಜ ಕಲ್ಲೂರ, ರುದ್ರಗೌಡ, ಸದಲಾಪುರ, ಪ್ರವೀಣ್, ಮಲ್ಲಿಕಾರ್ಜುನ, ಗಣಪುರ, ಪೂಜಾರಿ ಸೇರಿದಂತೆ ಮುಂತಾದವರಿದ್ದರು.