Advertisement

ನೈತಿಕ ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ

12:31 PM May 16, 2017 | |

ಮೈಸೂರು: ನೈತಿಕ ಶಿಕ್ಷಣ ದೊರೆಯದೆ ದಿಕ್ಕು ತಪ್ಪುತ್ತಿರುವ ವಿದ್ಯಾರ್ಥಿಗಳನ್ನು ಸರಿ ದಾರಿಗೆ ತರುವ ಪ್ರಯತ್ನ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಮಾಡಬೇಕಿದೆ ಎಂದು ಕುವೆಂಪು ವಿವಿಯ ಪ್ರಾಧ್ಯಾಪಕ ಪ್ರೊ.ಪಿ ವೆಂಕಟರಾಮಯ್ಯ ಹೇಳಿದರು.

Advertisement

ಮೈಸೂರು ವಿವಿ ಗಾಂಧಿಭವನದ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಕುವೆಂಪುನಗರದ ಬಿಜಿಎಸ್‌ ಬಿ.ಇಡಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಗಾಂಧೀಜಿ ಮತ್ತು ನೈತಿಕ ಶಿಕ್ಷಣ ವಿಷಯ ಕುರಿತ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೈತಿಕ ಶಿಕ್ಷಣದಿಂದ ಮಾತ್ರವೇ ವ್ಯಕ್ತಿತ್ವ ವಿಕಸನ ಸಾಧ್ಯ. ಇಲ್ಲವಾದರೆ ಯಾವುದೇ ವ್ಯಕ್ತಿ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ಅಂತೆಯೇ ಮಹಾತ್ಮ ಗಾಂಧೀಜಿ ಸತ್ಯ ಹರಿಶ್ಚಂದ್ರ ನಾಟಕವನ್ನು ನೋಡಿ ಸತ್ಯದ ಪ್ರತಿಪಾದನೆ ಮಾಡಿದರು. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯಕವಾಗಿದೆ.  

ಹಾಗಾಗಿ ನೈತಿಕ ಶಿಕ್ಷಣ ಕೊಡುವ ದಿಕ್ಕಿನಲ್ಲಿ ನಾವಿಂದು ಸಂಪೂರ್ಣವಾಗಿ ಸೋತಿದ್ದೇವೆ. ಇದು ನಿಜಕ್ಕೂ ದುರಂತವಾಗಿದೆ. ಆದರೆ, ಗಾಂಧೀಜಿ ನೈತಿಕ ಶಿಕ್ಷಣವನ್ನು ಪ್ರತಿಪಾದಿಸಿದ್ದು, ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗೆ ತಲುಪಿಸುವ ಕೆಲಸವನ್ನು ಇಂದಿನ ಶಿಕ್ಷಕರು ಮಾಡುವ ಮೂಲಕ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಹೇಳಿದರು.

ಈ ನಿಟ್ಟಿನಲ್ಲಿ ಮಾನಸ ಗಂಗೋತ್ರಿಯ ಗಾಂಧಿ ಭವನ ಎಲ್ಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣದ ಮಹತ್ವವನ್ನು ಪರಿಚಯಿಸಿ ವಿದ್ಯಾರ್ಥಿಗಳಲ್ಲಿ ಜಾnನಾರ್ಜನೆ ಮೂಡಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಈ ಕಾರ್ಯಕ್ರಮಗಳ ಇತರರಿಗೂ ಪೂರಕವಾಗಿದೆ. ಇದನ್ನು ಎಲ್ಲಾ ಶಿಕ್ಷಕರು, ವಿದ್ಯಾಲಯಗಳು ನಡೆಸುವ ಔಚಿತ್ಯವಿದೆ ಎಂದು ಹೇಳಿದರು.

Advertisement

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಎನ್‌ಸಿಆರ್‌ಟಿಇ ಮೈಸೂರು ಹಿರಿಯ ಪ್ರಾಧ್ಯಾಪಕ ಡಾ.ಎನ್‌.ಎನ್‌ ಪ್ರಹ್ಲಾದ್‌ ಗಾಂಧೀಜಿ ಮತ್ತು ನೈತಿಕ ಶಿಕ್ಷಣ  ಕುರಿತು ವಿಶೇಷ ಉಪನ್ಯಾಸ ನೀಡಿದರು. ಗಾಂಧಿಭವನದ ನಿರ್ದೇಶಕ ಡಾ.ಎಸ್‌ ಶಿವರಾಜಪ್ಪ ಅಧ್ಯಕ್ಷತೆವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ನಾಗರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next