Advertisement

ಪಠ್ಯೇತರ ಚಟುವಟಿಕೆಯಿಂದ ವ್ಯಕಿತ್ವ ವಿಕಸನ

09:54 AM May 14, 2019 | Team Udayavani |

ಅರಸೀಕೆರೆ: ಪಠ್ಯ ಪುಸ್ತಕದ ವಿದ್ಯಾ ಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆ ಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಮಾಡಾಳು ಗ್ರಾಮದ ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ನಿರಂಜನ ಪೀಠದ ಆವರಣದಲ್ಲಿ ಆಯೋಜಿಸಿದ್ದ 37ನೇ ಮಾಸಿಕ ಶಿವಾನುಭವ ಹಾಗೂ ಬಸವ ಚೇತನ ಕಾನ್ವೆಂಟಿನ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ರಿಯಾತ್ಮಕ ಚಟುವಟಿಕೆ: ಸ್ವಾಮೀಜಿ ಮಕ್ಕಳಿಗೆ ಪಠ್ಯಪುಸ್ತಕದ ವಿದ್ಯಾಭ್ಯಾಸ ಎಷ್ಟು ಮುಖ್ಯವಾಗಿರುತ್ತದೆಯೋ ಅಷ್ಟೇ ಅವರಲ್ಲಿನ ಕ್ರಿಯಾತ್ಮಕ ಕಲಿಕೆಯಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಸಮ್ಮಿಲನ ಮಾಡಿಕೊಂಡು ಶಿಕ್ಷಕರು ಕಲಾತ್ಮಕವಾಗಿ ಕಲಿಸಿದರೆ ಮಕ್ಕಳ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಗಳು ಪ್ರೋತ್ಸಾಹದಾಯಕವಾಗಿದೆ. ನಗರ ಪ್ರದೇಶದಲ್ಲಿ ಮಕ್ಕಳಿಗೆ ಪೂರಕ ವಾದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಶಿಬಿರಗಳು ಜರುಗುತ್ತವೆ. ಇದರಿಂದ ಪೋಷಕರು ಮಕ್ಕಳಿಗಾಗಿ ದೂರದ ನಗರಗಳಿಗೆ ತೆರಳುತ್ತಾರೆ. ಇದೇ ಮೊದಲ ಬಾರಿಗೆ ಬಸವ ಚೇತನ ಕಾನ್ವೆಂಟಿನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು 18 ದಿನಗಳಿಂದ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡು ಅನೇಕ ರೀತಿ ಕಲಿತು ತಮ್ಮ ಪೋಷಕರ ಮುಂದೆ ಯಶಸ್ವಿ ಪ್ರದರ್ಶನ ನೀಡಿದ್ದಾರೆ ಎಂದರು.

ಸಮಾನತೆಯ ಹರಿಕಾರ: ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟು ಎಲ್ಲರೂ ಸಮಾನರೂ ಎಂದು ಸಾರಿದ 12ನೇ ಶತಮಾನದ ಅಣ್ಣ ಬಸವಣ್ಣನವರ ಚಿಂತನೆಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿದೆ. ಪ್ರತಿ ಯೊಬ್ಬರ ಕೆಲಸಕ್ಕೂ ತನ್ನದೇ ಆದ ಮಾನ್ಯತೆ ಇರುತ್ತದೆ. ಒಬ್ಬರನ್ನೊಬ್ಬರು ಗೌರವಿಸುತ್ತಾ ಪ್ರೀತಿಯಿಂದ ಕಾಣ ಬೇಕು. ಅಜ್ಞಾನವೆಂಬ ಕತ್ತಲನ್ನು ತೊಡೆದುಹಾಕಲು ಬಸವಣ್ಣ ಅನು ಸರಿಸಿದ ಮಾರ್ಗ ಮತ್ತು ತೋರಿದ ದಾರಿಯಿಂದ ಶತಮಾನಗಳು ಕಳೆದರೂ ಜನರ ಹೃದಯದಲ್ಲಿ ಬಸ ವಣ್ಣ ಪೂಜ್ಯ ಸ್ಥಾನವನ್ನು ಪಡೆದಿದ್ದಾರೆ ಎಂದು ಹೇಳಿದರು.

Advertisement

ಮಕ್ಕಳಿಗೆ ಚೈತನ್ಯ: ಜಿಪಂ ಸದಸ್ಯ ಮಾಡಾಳು ಎಂ.ಎಸ್‌.ವಿ. ಸ್ವಾಮಿ ಮಾತ ನಾಡಿ, ಬೇಸಿಗೆ ಶಿಬಿರಗಳು ಮಕ್ಕಳಿಗೆ ಚೈತನ್ಯ ತುಂಬುತ್ತವೆ ಮತ್ತು ವಿದ್ಯಾರ್ಥಿ ಗಳಲ್ಲಿರುವ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಬೇಸಿಗೆ ಶಿಬಿರದಿಂದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಹಾಗೂ ಮಕ್ಕಳು ವೇದಿಕೆಯ ಮೇಲೆ ನಿಂತು ನಿಂತು ಸುಲಲಿತವಾಗಿ ಮಾತನಾಡುವು ದನ್ನು ಕಲಿಯಲು ಇಂತಹ ವೇದಿಕೆ ಗಳಿಂದ ಅವಕಾಶ ಪಡೆದುಕೊಳ್ಳಿ.ಈ ವಯಸ್ಸಿನ ಮಕ್ಕಳು ಕಲಿತಿರುವ ಚಟುವಟಿಕೆಗಳ ಬಗ್ಗೆ ತಿಳಿಸಿ ಮುಂದಿನ ಭಾವಿ ಪ್ರಜೆಗಳಾಗಿ ನಿರ್ಮಿಸುವ ಶಕ್ತಿ ಬೇಸಿಗೆ ಶಿಬಿರದಲ್ಲಿ ಕಲಿಯುವುದು ಬಹಳಷ್ಟಿದೆ ಎಂದು ಹೇಳಿದರು.

ಇಂದಿನ ಯುವ ಪೀಳಿಗೆ ಟೀವಿ ಹಾಗೂ ಮೊಬೈಲ್ಗಳಿಗೆ ಮಾರು ಹೋಗಿರುವುದು ಆತಂಕದ ವಿಚಾರ. ಇದರಲ್ಲಿ ಒಳ್ಳೆಯದು ಕೆಟ್ಟದ್ದು ಎರಡು ಇದ್ದು ಒಳ್ಳೆಯದನ್ನು ತಮ್ಮ ಬದುಕಿಗೆ ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.ರಾಜ್ಯ ಪ್ರಶಸ್ತಿ ವಿಜೇತ ರಾಂಪುರ ಆರ್‌.ಎಸ್‌ತಮ್ಮಯ್ಯ ಹಾಡಿದ ಲಾವಣಿ ಮತ್ತು ಸುಜನ್ಯ ಜನಪದ ಗೀತೆ ಪ್ರೇಕ್ಷಕರನ್ನು ರಂಜಿಸಿತು.

ಇದೇ ವೇದಿಕೆಯಲ್ಲಿ ಸಿರಿಗೆರೆಯಿಂದ ಕಳೆದ 18 ದಿನಗಳಿಂದ ಮಲ್ಲಕಂಬ ಹಾಗೂ ಮಲ್ಲಿಹಗ್ಗ ತರಬೇತಿ ನೀಡಿ ಪೋಷಕರ ಎದುರಿಗೆ ಪ್ರದರ್ಶನ ನೀಡಿದ್ದು ಮಾತ್ರ ಪೋಷಕರಲ್ಲಿ ಮತ್ತು ಜನರಲ್ಲಿ ರೋಮಾಂಚನಗೊಳಿಸಿತು.

ಚಿತ್ರ ಕಲಾವಿದ ಹರೀಶ್‌, ಶೋಭಾರಾಣಿ ಮುಖಂಡರಾದ ಬಸವರಾಜ್‌, ತಿಪ್ಪೆರುದ್ರಸ್ವಾಮಿ,ಎಂ.ಜಿ. ಯೋಗೀಶ್‌, ಎಂ.ಸಿ. ಚಂದ್ರ ಶೇಖರ್‌, ಎಂಎಸ್‌.ಪುಟ್ಟಮಲ್ಲಪ್ಪ ವೈ.ಎಂ.ಚನ್ನಯ್ಯ, ದಿಬ್ಬೂರು ಪ್ರಕಾಶ್‌ಹರೆಳಕಟ್ಟೆ ರಾಜಯ್ಯ, ಮುಖ್ಯ ಶಿಕ್ಷಕ ಸತೀಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next