Advertisement

ವ್ಯಕ್ತಿತ್ವ ವಿಕಸನ ಶಿಬಿರಗಳು ಅವಶ್ಯ: ಡಾ|ಪ್ರಭಾಕರ ಜೋಶಿ

11:48 PM May 30, 2019 | Sriram |

ಮಹಾನಗರ: ಪಠ್ಯ ಶಿಕ್ಷಣದೊಂದಿಗೆ ಜೀವನಾನುಭವ ಕೊಡುವ ಕ್ಷಮತಾದಂತಹ ಶಿಬಿರ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಆವಶ್ಯಕವಾದುದು ಎಂದು ವಿದ್ವಾಂಸ ಡಾ| ಎಂ ಪ್ರಭಾಕರ ಜೋಶಿ ಹೇಳಿದರು.

Advertisement

ಮಂಗಳೂರು ವಿಶ್ವಕೊಂಕಣಿ ಕೇಂದ್ರದಲ್ಲಿ ಉಡುಪಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ಪದವಿ ಮುಗಿಸಿದ 101 ವಿದ್ಯಾರ್ಥಿಗಳಿಗೆ ಮೇ 23ರಿಂದ 29ರ ವರೆಗೆ ಜರಗಿದ ಕ್ಷಮತಾ ಯು. ಗೆಟಿನ್‌ ಸನಿವಾಸ ಶಿಬಿರದ ಸಮಾರೋಪದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಮಾತನಾಡಿ, ವಿದ್ಯಾಪೋಷಕ್‌ನ ಕಾರ್ಯವನ್ನು ಶ್ಲಾಘಿಸಿ ವಿದ್ಯಾರ್ಥಿಗಳು ಇಲ್ಲಿ ಪಡೆದ ಅನುಭವವನ್ನು ತಮ್ಮ ಜೀವನದಲ್ಲಿ ಅಳವಡಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿ ಶುಭ ಹಾರೈಸಿದರು.

ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಶಿಬಿರದ ನಿರ್ದೇಶಕ ಗುರುದತ್‌ ಬಾಳಿಗ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌, ಕಾರ್ಯದರ್ಶಿ ಮುರಲಿ ಕಡೆಕಾರ್‌ ಶಿಬಿರಾರ್ಥಿಗಳಿಗೆ ಮಾರ್ಗಸೂಚಿ ಮಾತುಗಳನ್ನಾಡಿ ಅಭಿನಂದಿಸಿದರು. ಪ್ರೊ| ನಾರಾಯಣ ಎಂ. ಹೆಗಡೆ, ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರಾಥಿ ವಿಶ್ವನಾಥ್‌ ನಿರೂಪಿಸಿದರು. ಶಿಬಿರಾಥಿಗಳ ಪರವಾಗಿ ನಳಿನಿ, ಶಬರಿ, ಸುಶ್ಮಿತಾ, ಸೂರಜ್‌ ಉಮಾ ಅನುಭವ ಹಂಚಿಕೊಂಡರು. ಅರ್ಪಿತಾ ಸ್ವಾಗತಿಸಿದರು. ಸಂಗಮೇಶ ವಂದಿಸಿದರು. ಶಿಬಿರದ ಸಹ ನಿರ್ದೇಶಕರಾಗಿ ಸಹನಾ ಕಾರ್ಯನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next