Advertisement

ಧಾರ್ಮಿಕ ಅಲ್ಪಸಂಖ್ಯಾಕರ ಮೇಲಿನ ನಿರಂತರ ದೌರ್ಜನ್ಯ : ಪಾಕ್‌ಗೆ ಛೀಮಾರಿ

10:03 AM Dec 17, 2019 | sudhir |

ಹೊಸದಿಲ್ಲಿ: ಧಾರ್ಮಿಕ ಅಲ್ಪಸಂಖ್ಯಾಕರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿರುವ ಪಾಕಿ ಸ್ಥಾನಕ್ಕೆ ವಿಶ್ವಸಂಸ್ಥೆಯ ಆಯೋಗವೊಂದು ಛೀಮಾರಿ ಹಾಕಿದೆ. ಈ ಬೆಳವಣಿಗೆಯಿಂದಾಗಿ ಭಾರತದ ಪೌರತ್ವ ಕಾಯ್ದೆ ಕುರಿತು ಮೂಗು ತೂರಿಸಿ, ಅಲ್ಪ ಸಂಖ್ಯಾಕರ ದಮನಕ್ಕೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದ ಇಮ್ರಾನ್‌ ಖಾನ್‌ಗೆ ತೀವ್ರ ಮುಖಭಂಗ ಉಂಟಾಗಿದೆ.

Advertisement

ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾಕ ರಾಗಿರುವ ಕ್ರಿಶ್ಚಿಯನ್‌ ಮತ್ತು ಹಿಂದೂ ಸಮುದಾಯಗಳಿಗೆ ತಾರತಮ್ಯ ಎಸಗಲಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ಹೆಚ್ಚುತ್ತಿದೆ ಎಂದು ಮಹಿಳೆಯರ ಸ್ಥಿತಿಗತಿ ಪರಿಶೀಲನೆ ನಡೆಸುವ ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಗೆ ಸಂಬಂಧಿಸಿದ ಆಯೋಗ ಟೀಕಿಸಿದೆ.

ಒಟ್ಟು 47 ಪುಟಗಳಿರುವ ಈ ವರದಿಯಲ್ಲಿ ಪಾಕಿಸ್ಥಾನದ ತೆಹ್ರೀಕ್‌- ಇ- ಇನ್ಸಾಫ್ ಸರಕಾರವು ಜಾರಿ ಮಾಡಿರುವಂಥ ಕೆಲವು ಕಾನೂನುಗಳು, ತೀವ್ರಗಾಮಿ ಮನಃಸ್ಥಿತಿ ಇರುವವರಿಗೆ ಧಾರ್ಮಿಕ ಅಲ್ಪಸಂಖ್ಯಾಕರ ಮೇಲೆ ದಾಳಿ ನಡೆಸಲು ಅವಕಾಶ ನೀಡಿದೆ. ನಂಬಿಕೆಯ ನಿಂದನೆ ವಿಚಾರವನ್ನು ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯಗೊಳಿಸಲಾಗುತ್ತಿದೆ. ಈ ಕಾನೂನು ಮೂಲಕ ಧಾರ್ಮಿಕ ಅಲ್ಪ ಸಂಖ್ಯಾಕರನ್ನು ಶಿಕ್ಷೆಗೆ ಗುರಿಪಡಿಸಲು ಬಳಸಲಾಗುತ್ತಿದೆ ಎಂದೂ ವರದಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಮಹಿಳೆಯರನ್ನು ಅಪಹರಿಸಿ ಮತಾಂತರಗೊಳಿಸಿ ಮದುವೆ ಆಗುತ್ತಾರೆ. ಮತ್ತೆ ಅವರಿಗೆ ಕುಟುಂಬದ ಜತೆ ಸಂಪರ್ಕ ಬೆಳೆಸಲು ಅವಕಾಶ ನಿರಾಕರಿಸಲಾಗುತ್ತದೆ ಎಂದಿದೆ ವರದಿ.

Advertisement

Udayavani is now on Telegram. Click here to join our channel and stay updated with the latest news.

Next