Advertisement

Pernankila Temple: ಎ. 2ರ ವರೆಗೆ ಪುನಃಪ್ರತಿಷ್ಠೆ, ಬ್ರಹ್ಮಕಲಶ, ರಥೋತ್ಸವ

12:10 AM Mar 17, 2024 | Team Udayavani |

ಉಡುಪಿ: ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಪುನಃ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ, ಶ್ರೀಮನ್ಮಹಾರಥೋತ್ಸವ ಮೊದಲಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ಮಾ. 16ರಿಂದ ಎ. 2ರ ವರೆಗೆ ನಡೆಯಲಿದೆ.

Advertisement

ಮಾ. 22: ಜೀವಕುಂಭಾಭಿಷೇಕ
ಮಾ. 22ರಂದು ಬೆಳಗ್ಗೆ 7.30ರಿಂದ ಪುಣ್ಯಾಹವಾಚನ, ಗಣಪತಿ ಯಾಗ, 9.50ಕ್ಕೆ ಶ್ರೀಮಹಾಗಣಪತಿ ದೇವರಿಗೆ ಜೀವಕುಂಭಾಭಿಷೇಕ, ಮಹಾಪೂಜೆ, ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ, ಸಂಜೆ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿವೆ.

ಮಾ. 25: ಬ್ರಹ್ಮಕುಂಭಾಭಿಷೇಕ, ಬಿಂಬ ಪ್ರತಿಷ್ಠೆ
ಮಾ. 25ರಂದು ಬೆಳಗ್ಗೆ 6.44ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, 9.45ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 4ರಿಂದ ದಿಶಾ ಹೋಮ, ಅಧಿವಾಸ ಹೋಮ ಸಹಿತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿವೆ.

ಮಾ. 28: ಈಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕ
ಮಾ. 28ರಂದು ಬೆಳಗ್ಗೆ 7.30ರಿಂದ ಪುಣ್ಯಾಹವಾಚನ, 108 ಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗ, 11.20ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಮಹಾ ಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ರಾತ್ರಿಪೂಜೆ, ರಂಗಪೂಜೆ, ರಾತ್ರಿ 9ರಿಂದ ನಾಗ ದೇವರ ಸನ್ನಿಧಿಯಲ್ಲಿ ನಾಗ ಮಂಡಲೋತ್ಸವ ನಡೆಯಲಿದೆ.

ಮಾ. 31: ಶ್ರೀಮನ್ಮಹಾರಥೋತ್ಸವ
ಮಾ. 31ರಂದು ಬೆಳಗ್ಗೆ 10ಕ್ಕೆ ಮಹಾಪೂಜೆ, ರಥಬಲಿ, 11.30ಕ್ಕೆ ರಥಾರೋಹಣ, ಮಹಾ ಅನ್ನಸಂತರ್ಪಣೆ, ರಾತ್ರಿ 7ರಿಂದ ಪ್ರಾರ್ಥನೆ, ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವರಿಗೆ ಮಹಾರಥೋತ್ಸವ ಪ್ರಾರಂಭವಾಗಿ ಹಚ್ಚಡ ಸೇವೆ, ವಸಂತ ಪೂಜೆ, ರಾತ್ರಿ ಪೂಜೆ, ಭೂತ ಬಲಿ, ಕವಾಟ ಬಂಧನ ಜರಗಲಿದೆ.

Advertisement

ಎ. 1ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಧ್ವಜಾವರೋಹಣ, ಎ. 2ರಂದು ಪುಣ್ಯಾಹವಾಚನ, ಅಧಿವಾಸ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಶ್ರೀಕ್ಷೇತ್ರದಲ್ಲಿ ಮಾ. 17ರಿಂದ 31ರ ವರೆಗೆ ಸಂಜೆ 5.30ರಿಂದ ಧಾರ್ಮಿಕ ಸಭೆ ನಡೆಯಲಿದೆ. ಅನಂತರ ನಾಡಿನ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ| ಹರಿದಾಸ ಭಟ್‌, ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್‌ ಪೆರ್ಣಂಕಿಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾ. 17: ಹೊರೆಕಾಣಿಕೆ ಮೆರವಣಿಗೆ
ಮಾ. 17ರಂದು ಮಧ್ಯಾಹ್ನ 2.30ಕ್ಕೆ ಓಂತಿಬೆಟ್ಟಿನಲ್ಲಿ ಆ ಭಾಗದ ಎಲ್ಲ ವಾಹನಗಳು ಸೇರಿ ಪೆರ್ಣಂಕಿಲದ ಗಡಿಭಾಗವಾದ ವರ್ವಾಡಿ ಕ್ರಾಸ್‌ ಬಳಿ ಬಂದು ಅಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಪೂರ್ಣಕುಂಭ, ಕೀಲು ಕುದುರೆ, ಕೊಂಬುವಾದ್ಯ, ಭಜನೆ, ಚಂಡೆ, ತಟ್ಟಿರಾಯ, ನಾಸಿಕ್‌ ಬ್ಯಾಂಡ್‌ ಇನ್ನಿತರ ವೇಷಭೂಷಣದೊಂದಿಗೆ ದೇವಸ್ಥಾನ ತಲುಪಲಿದೆ. ಶ್ರೀಪಾದರನ್ನು ಬೆಳ್ಳಿಯ ರಥದಲ್ಲಿ ಕುಳ್ಳಿರಿಸಿ ದೇವಸ್ಥಾನಕ್ಕೆ ಕರೆತರಲಾಗುವುದು.

 

Advertisement

Udayavani is now on Telegram. Click here to join our channel and stay updated with the latest news.

Next