Advertisement

ಕೈಗಾರಿಕಾ ಕ್ಷೇತ್ರಗಳಿಗೆ ಶೇ. 20ರಷ್ಟು ಆಮ್ಲಜನಕ ಬಳಸಲು ಅನುಮತಿ

12:55 PM Jun 05, 2021 | Team Udayavani |

ಪುಣೆ: ಪುಣೆ, ಪಿಂಪ್ರಿ-ಚಿಂಚಾÌಡ್‌ ನಗರಗಳು ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ರೋಗಿಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಲ್ಲಿ ವೈದ್ಯಕೀ ಯ ಆಮ್ಲಜನಕದ ಬೇಡಿಕೆ 200 ಮೆಟ್ರಿಕ್‌ ಟನ್‌ಗಳಿಗೆ ಇಳಿದಿದೆ. ಆದ್ದರಿಂದ ಕೈಗಾರಿಕಾ ಉದ್ದೇಶಗಳಿಗಾಗಿ ಶೇ. 20ರಷ್ಟು ಆಮ್ಲಜನಕ ಬಳಸಲು ಜಿಲ್ಲಾಡಳಿತ ಅನುಮತಿ ನೀಡಿದೆ.

Advertisement

ವಾಹನಗಳ ಉತ್ಪಾದನೆ ಮತ್ತು ಉಕ್ಕಿನ ಉದ್ಯಮಕ್ಕೆ ಹೆಚ್ಚಿನ ಆಮ್ಲಜನಕದ ಅಗತ್ಯವಿದೆ. ಅದರಂತೆ ಕೈಗಾರಿಕೆಗಳ ಜಂಟಿ ನಿರ್ದೇಶಕರ ಕಚೇರಿ, ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಶ್‌ ದೇಶು¾ಖ್‌ ಆದೇಶ ಹೊರಡಿಸಿದ್ದಾರೆ.

ಆಮ್ಲಜನಕ ಉತ್ಪಾದಿಸುವ ಕಂಪೆನಿಗಳು ಪೂರ್ಣ  ಸಾಮರ್ಥ್ಯದಲ್ಲಿ  ಸಾಧ್ಯವಾದಷ್ಟು ಆಮ್ಲಜನಕವನ್ನು ಉತ್ಪಾದಿಸಬೇಕು. ಉತ್ಪತ್ತಿಯಾಗುವ ಆಮ್ಲಜನಕದ ಸುಮಾರು ಶೇ. 80ರಷ್ಟು ವೈದ್ಯಕೀಯ ಉದ್ದೇಶಗಳಿಗಾಗಿ ಮತ್ತು ಆಸ್ಪತ್ರೆಗಳಿಗೆ ಸರಬರಾಜು ಮಾಡಬೇಕು. ಉಳಿದ ಶೇ.20ರಷ್ಟು ಆಮ್ಲಜನಕವನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಬೇಕು. ಆಮ್ಲಜನಕದ ಪೂರೈಕೆಯಲ್ಲಿ ಆಸ್ಪತ್ರೆಗಳಿಗೆ ಆದ್ಯತೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೊರೊನಾದ 2ನೇ ಅಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಆಮ್ಲಜನಕದ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಎಪ್ರಿಲ್‌ನಲ್ಲಿ ಅತಿ ಹೆಚ್ಚು 420 ಮೆಟ್ರಿಕ್‌ ಟನ್‌ಗಳಷ್ಟು ಆಮ್ಲಜನಕ ಬೇಡಿಕೆ ಇತ್ತು. ಈ ಬೇಡಿಕೆ ಈಗ 200 ಮೆಟ್ರಿಕ್‌ ಟನ್‌ಗೆ ಕಡಿಮೆಯಾಗಿದೆ. ಆದ್ದರಿಂದ ಆಮ್ಲಜನಕದ ಪೂರೈಕೆಯನ್ನು ಪುನಃಸ್ಥಾಪಿಸಲು ಕೈಗಾರಿಕ ಕ್ಷೇತ್ರಗಳು ಬೇಡಿಕೆ ಇರಿಸಿವೆ.

ಪುಣೆಯಲ್ಲಿ ಸಾಕಷ್ಟು ಆಮ್ಲಜನಕ ಉತ್ಪಾದನೆ

Advertisement

ಪುಣೆ ಜಿಲ್ಲಾಯಲ್ಲಿ ಸಾಕಷ್ಟು ಆಮ್ಲಜನಕದ ಉತ್ಪಾದನೆ ಆಗುತ್ತಿರುವ ಕಾರಣ ಬಳ್ಳಾರಿ ಮತ್ತು ಜಾಮ್ನಾನಗರದಿಂದ ಪುಣೆಗೆ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸಲಾಗಿದೆ. ಪುಣೆ ಮಹಾನಗರ ಪಾಲಿಕೆ ಪ್ರದೇಶದ ನಾಯ್ಡು ಆಸ್ಪತ್ರೆ ಪ್ರತಿನಿಮಿಷಕ್ಕೆ 1,850 ಲೀ. ಆಮ್ಲಜನಕ ಉತ್ಪಾದನೆ, ದಾಲ್ವಿ ಆಸ್ಪತ್ರೆ ಪ್ರತಿನಿಮಿಷಕ್ಕೆ 850 ಲೀ, ಬಾಣೇರ್‌ ಡೆಡಿಕೇಟೆಡ್‌ ಕೊರೊನಾ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 1,000 ಲೀ. ಮತ್ತು ಲೈಗುಡೆ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 250 ಲೀ. ಆಮ್ಲಜನಕ ಒಟ್ಟು ನಿಮಿಷಕ್ಕೆ 3,950 ಲೀ. ಆಮ್ಲಜನಕ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ಗ್ರಾಮೀಣ ಪ್ರದೇಶಗಳ ಪೈಕಿ ಔಂಧ್‌ ಜಿÇÉಾ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 100 ಲೀ., ವಾಡ್ಗಾಂವ್‌ ಮಾವಲ್‌ ಮತ್ತು ಚಂದೋಲಿ ಗ್ರಾಮೀಣ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 500 ಲೀ. ಮಂಚಾರ ಉಪ-ಜಿಲ್ಲಾ ಆಸ್ಪತ್ರೆ ಮತ್ತು ಹಿಂಜೇವಾಡಿ ಜಿÇÉಾ ಪರಿಷತ್‌ ಕೊರೊನಾ ಆಸ್ಪತ್ರೆ ಪ್ರತಿ ನಿಮಿಷಕ್ಕೆ 500 ಲೀ. ಗಳಂತೆ ಒಟ್ಟು 2,100 ಲೀ. ಆಮ್ಲಜನಕ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ಹೀಗಾಗಿ ಜಿಲ್ಲೆಯಲ್ಲಿ ನಿಮಿಷಕ್ಕೆ ಒಟ್ಟು 6,050 ಲೀಟರ್‌ ಸಾಮರ್ಥ್ಯದ ಯೋಜನೆಗಳನ್ನು ಜಾರಿಗೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next