ಬೆಂಗಳೂರು: ಸರಕಾರಿ ನೌಕರರು ಕೆಲಸದ ವೇಳೆಯಲ್ಲಿ ಕಾಲಹರಣ ಮಾಡು ವುದನ್ನು ನಿಯಂತ್ರಿಸಲು ಆಡಳಿತ ಮತ್ತು ಸಿಬಂದಿ ಸುಧಾರಣೆ ಇಲಾಖೆ ಮುಂದಾಗಿದೆ.
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸಹಿತ ಜಿಲ್ಲಾ, ತಾಲೂಕು ಸರಕಾರಿ ಕಚೇರಿಗಳಲ್ಲಿ ಅಧಿ ಕಾರಿಗಳು ಮತ್ತು ಸಿಬಂದಿ ತಮ್ಮ ಸ್ಥಾನಗಳಲ್ಲಿ ಇರುವುದಿಲ್ಲ. ಟೀ, ಕಾಫಿ ಎಂದು ಕೆಲಸದ ವೇಳೆಯಲ್ಲಿ ಹೊರಗೆ ಹೋಗಿ ಅನಗತ್ಯ ಕಾಲಹರಣ ಮಾಡುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಚೇರಿಗಳಲ್ಲಿ ಅಧಿಕಾರಿ ಅಥವಾ ಸಿಬಂದಿ ಹೊರಗೆ ಹೋಗಬೇಕಾದ ಸಂದರ್ಭ ಮೇಲಧಿ ಕಾರಿಗಳ ಪೂರ್ವಾನುಮತಿ ಪಡೆಯಬೇಕು. ಹೊರಗೆ ಹೋಗುವ ವೇಳೆ ಉದ್ದೇಶ ಮತ್ತು ಹಿಂದಿ ರುಗಿ ಬಂದ ವೇಳೆ ಸಹಿ ಮತ್ತು ದಿನಾಂಕದೊಂದಿಗೆ ಕಚೇರಿ ಪುಸ್ತಕದಲ್ಲಿ ನಮೂದು ಮಾಡಬೇಕು.
ಚಲನವಲನ ವಹಿಯಲ್ಲಿ ನಮೂದಿ ಸದೆ ಹೋದ ಅಧಿಕಾರಿ ಅಥವಾ ನೌಕರರು ಕಚೇರಿಯಿಂದ ಅನಧಿಕೃತ ಗೈರು ಹಾಜ ರಾದಂತೆ ಭಾವಿಸಲಾಗುವುದು. ಜತೆಗೆ ಕ್ರಮ ಕೈಗೊಳ್ಳಲಾಗುವುದು. ಮೇಲಧಿ ಕಾರಿಗಳು ಈ ಬಗ್ಗೆ ನಿಗಾ ವಹಿಸ ಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮೇಲಧಿಕಾರಿಗಳು ಸಹ ವಿರಾಮ ವೇಳೆ ಹೊರತುಪಡಿಸಿ ಇತರ ವೇಳೆಯಲ್ಲಿ ಅಧಿಕಾರಿ, ಸಿಬಂದಿ ಅವರ ಸ್ಥಾನದಲ್ಲಿ ಕುಳಿತು ಕೆಲಸ ಮಾಡದಿರುವುದು ಗಮನಿಸಿದಾಗ ಸಂಬಂಧಪಟ್ಟ ಉನ್ನತ ಅಧಿಕಾರಿ ಗಮನಕ್ಕೆ ತರಬೇಕು. ಚಲನವಲನ ವಹಿಯಲ್ಲಿ ಬರೆಯದೆ, ಪೂರ್ವಾನುಮತಿ ಪಡೆಯದೆ ಹೋಗುವವರ ವಿರುದ್ಧ ನಿಗಾ ವಹಿಸಬೇಕು ಎಂದು ತಿಳಿಸಲಾಗಿದೆ.