Advertisement

ಜ. 30ರಿಂದ ಕಂಬಳ ನಡೆಸಲು ಅನುಮತಿ

02:13 AM Jan 27, 2021 | Team Udayavani |

ಮಂಗಳೂರು: ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಈ ಬಾರಿ ಕಂಬಳ ಆಯೋಜನೆಗೆ ಜಿಲ್ಲಾಡಳಿತ ಅನುಮತಿ ನೀಡಿದ್ದು ಜ. 30ರಿಂದ ಆರಂಭಗೊಳ್ಳುವ ಸಾಧ್ಯತೆಗಳಿವೆ.

Advertisement

2020-21ನೇ ಸಾಲಿನ ಕಂಬಳ ಕ್ರೀಡೆಯನ್ನು ಆಯೋಜಿಸುವ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಂಸದರು ಮಾತನಾಡಿ, ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು ಈ ಬಾರಿ ಕೋವಿಡ್‌ ಸೋಂಕಿನಿಂದಾಗಿ ಆರಂಭಿಸಲು ಸಾಧ್ಯವಾಗಿಲ್ಲ. ಆಯೋಜಕರು ಕೋವಿಡ್‌ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸುವುದರೊಂದಿಗೆ ಜನವರಿ 30ರಿಂದ ಜಿಲ್ಲೆಯಲ್ಲಿ ಕಂಬಳ ಏರ್ಪಡಿಸಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ಕೋವಿಡ್‌ ಸಂದರ್ಭ ವಾದ ಈ ದಿನಗಳಲ್ಲಿ ಅತೀ ಹೆಚ್ಚು ಜಾಗ್ರತೆ ವಹಿಸಬೇಕು, ಹೆಚ್ಚು ಜನರು ಸೇರ ದಂತೆ ನೋಡಿಕೊಳ್ಳಬೇಕು. ರಾತ್ರಿ 10 ಗಂಟೆಯ ಒಳಗೆ ಪೂರ್ಣ ಗೊಳಿಸ ಬೇಕು. ವಯಸ್ಸಾ ದವರು ಮತ್ತು ಮಕ್ಕಳು ಭಾಗವಹಿಸ ದಂತೆ ಎಚ್ಚರ ವಹಿಸ ಬೇಕು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು  ಕೊಳ್ಳು ವುದು ಸೇರಿದಂತೆ ಕೋವಿಡ್‌ ನಿಯಮ ಗಳನ್ನು ಪಾಲಿಸ ಬೇಕು ಎಂದರು.

ಎಲ್ಲ ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಶಿಸ್ತುಬದ್ಧವಾಗಿ ಜರಗಿಸಲು ಹೆಚ್ಚಿನ ಕಾರ್ಯಕರ್ತರನ್ನು ತೊಡಗಿಸಿಕೊಳ್ಳಲಾಗುವುದು ಎಂದು ಕಂಬಳ ಸಮಿತಿಯ ಪದಾಧಿಕಾರಿ ಗಳು ಭರವಸೆ ನೀಡಿದರು.

Advertisement

ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ| ಟಿ.ಜಿ. ಪ್ರಸನ್ನ, ಶಾಸಕರಾದ ಉಮಾನಾಥ ಕೋಟ್ಯಾನ್‌, ಯು.ಟಿ. ಖಾದರ್‌, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಜಿಲ್ಲಾ ಕಂಬಳ ಸಮಿತಿಯ ಭಾಸ್ಕರ್‌ ಕೋಟ್ಯಾನ್‌, ಗುಣಪಾಲ ಕಡಂಬ ಹಾಗೂ ವಿವಿಧ ಕಂಬಳಗಳ ವ್ಯವಸ್ಥಾಪಕರು, ಮಂಗಳೂರು ನಗರ ಉಪ ಪೊಲೀಸ್‌ ಆಯುಕ್ತ ವಿನಯ್‌ ಗಾಂವ್ಕ‌ರ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ಬಿ.ಎಂ. ಪ್ರಸಾದ್‌ ಉಪಸ್ಥಿತರಿದ್ದರು.

ಕಂಬಳಕ್ಕೆ ಸಿದ್ಧತೆ :

ಕಂಬಳಕ್ಕೆ ಸಿದ್ಧತೆ ನಡೆದಿದ್ದು ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯಲ್ಲಿ ಜ. 30ರಂದು ಈ ಸಾಲಿನ ಪ್ರಥಮ ಕಂಬಳ ನಡೆಯಲಿದೆ. ಪ್ರಸ್ತುತ ಹೊಕ್ಕಾಡಿಗೋಳಿ, ಐಕಳ, ವಾಮಂಜೂರು, ಮೂಡುಬಿದಿರೆ, ಮೀಯಾರು, ಮಂಗಳೂರು ಹಾಗೂ ವೇಣೂರು ಸೇರಿದಂತೆ 7 ಕಂಬಳಗಳ ಪಟ್ಟಿ ಸಿದ್ಧ ವಾಗಿದೆ. ಇದಕ್ಕೆ ಇನ್ನಷ್ಟು ಕಂಬಳಗಳು ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಕಂಬಳ ಸಮಿತಿಯ ಭಾಸ್ಕರ ಕೋಟ್ಯಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next