ರಾಣಿಬೆನ್ನೂರ: ಹರಿಹರ ತಾಲೂಕಿನ ಬನ್ನಿಕೋಡ ಗ್ರಾಮದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೀನು ಮತ್ತು ಕೋಳಿ ಮಾಂಸ ಮಾರಾಟ ಬಂದ್ ಮಾಡಲಾಗಿತ್ತು. ಅದಕ್ಕೆ ನಗರದ ಎಲ್ಲ ಮಾಂಸ ಮಾರಾಟಗಾರರು ಸ್ವಯಂ ಪ್ರೇರಣೆಯಿಂದ ಈ ವರೆಗೂ ಬಂದ್ ಮಾಡಿ ಲಾಕ್‌ಡೌನ್‌ಗೆ ಸಹಕರಿಸಿದ್ದರು. ಈಗ ಮೀನು ಮತ್ತು ಕೋಳಿ ಮಾಂಸ ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ತಹಶೀಲ್ದಾರ್ ಬಸನಗೌಡ ಕೋಟೂರು ಹೇಳಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೋವಿಡ್ 19 ಸೋಂಕು ತಡೆಗಟ್ಟುವ ಟಾಸ್ಕ್ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಅಗತ್ಯ ಸೇವೆಗಳ ಅಡಿಯಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದರು. ಮಾಂಸ ಮಾರಾಟಗಾರರು ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಬೇಕು. ತರಕಾರಿ ಮತ್ತು ದಿನಸಿ ಪದಾರ್ಥಕ್ಕಿಂತ ಒಂದು ಗಂಟೆ ಸಮಯ ಹೆಚ್ಚಿಸಲಾಗಿದೆ. ಇಷ್ಟು ಬಿಟ್ಟರೆ ಯಾವುದೇ ವ್ಯವಹಾರಕ್ಕೆ ಅನುಮತಿ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಮಾಂಸ ಕತ್ತರಿಸುವಾಗ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸೋಪಿನ ನೀರು ಬಳಸಬೇಕು. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂತರ ಕಾಯ್ದುಕೊಳ್ಳಬೇಕೆಂದು ಸೂಚಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮೇ 3ರ ವರೆಗೆ ಲಾಕ್ ಡೌನ್ ಮುಂದುವರಿಸಿ ಕೆಲವೊಂದು ವಿನಾಯಿತಿ ನೀಡಿದೆ. ನಗರದ ಹೋಟೆಲ್ ಮಾಲೀಕರು ಕೂಡ ಸ್ವಯಂ ಪ್ರೇರಣೆಯಿಂದ ಈ ವರೆಗೂ ಹೋಟೆಲ್ ಬಂದ್ ಮಾಡಿ ಲಾಕ್‌ಡೌನ್‌ಗೆ ಸಹಕಾರ ನೀಡಿದ್ದಾರೆ.
ಕೆಲವೊಬ್ಬರು ಸರ್ಕಾರದ ನಿಯಮಗಳನ್ನು ಪಾಲಿಸಿ ಫುಢ್ ಪಾರ್ಸಲ್ ಕೊಡುತ್ತಿದ್ದಾರೆ. ಹೋಟೆಲ್ ಮತ್ತು ತಿಂಡಿ ತಿನಿಸು ಮಾರಾಟಗಾರರು ಹೋಟೆಲ್ ಪ್ರಾರಂಭಿಸಿ ಪಾರ್ಸಲ್ ಮಾತ್ರ ಕೊಡಬಹುದು. ಟೇಬಲ್‌ನಲ್ಲಿ ಕುಳಿತು ತಿನ್ನಲು ಸರ್ಕಾರದ ಪರವಾನಗಿ ಇರುವುದಿಲ್ಲ ಎಂದು ಸÒಷ್ಟಪಡಿಸಿದರು.
ಜಿಪಂ, ತಾಪಂ ಮತ್ತು ಗ್ರಾಪಂ ಸೇರಿದಂತೆ ಸರ್ಕಾರಿ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲು ಸ್ಟೀಲ್, ಸಿಮೆಂಟ್ ಮಾರಾಟಕ್ಕೆ ಅನುಮತಿ ನೀಡಿದೆ. ಸಿಮೆಂಟ್ ಮತ್ತು ಸ್ಟೀಲ್ ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ಶಾಸಕ ಅರುಣಕುಮಾರ ಪ್ರಜಾರ, ಇಒ ಎಸ್.
ಎಂ. ಕಾಂಬಳೆ, ಡಿವೈಎಸ್‌ಪಿ ಟಿ.ವಿ. ಸುರೇಶ್, ಆರೋಗ್ಯ ಅಧಿಕಾರಿ ಡಾ| ಸಂತೋಷಕುಮಾರ, ಡಾ| ಮಹಾಂತೇಶ್ ಎನ್., ಡಾ| ಗಿರೀಶ್ ಕೆಂಚಪ್ಪನವರ, ಸಿಪಿಐ ಲಿಂಗನಗೌಡ ನೆಗಳೂರು, ಸಿಪಿಐ ಸುರೇಶ್ ಸಗರಿ, ಪಿಎಸ್‌ಐ ಪ್ರಭು ಕೆಳಗಿನಮನಿ, ಬಸವರಾಜ ಶಿಡೇನೂರು ಇದ್ದರು.