ಇದೊಂದು ವಿಶೇಷ ಪ್ರಕರಣ ಎಂದು ಪರಿ ಗಣಿಸಿ ಸಮಿತಿಯು ಜು.18ರಂದು ತುರ್ತು ಸಭೆ ನಡೆಸಿ ಕಿಡ್ನಿ ದಾನ ಮಾಡಲು ವರ್ಷಾಶರ್ಮಾ ಅವರಿಗೆ ಅನುಮತಿ ನೀಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಅಲ್ಲದೆ, ಹೆಬ್ಟಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಪಂಕಜ್ ಭಾರ್ಗವ ಅವರಿಗೆ ಕಿಡ್ನಿ ಕಸಿ ನಡೆಸಬಹುದು ಎಂದೂ ಪ್ರಮಾಣಪತ್ರದಲ್ಲಿ ತಿಳಿಸಿದ್ದು, ಈ ಕುರಿತು ಅನುಮತಿ ಪತ್ರವನ್ನು ವರ್ಷಾ ಶರ್ಮಾ ಪರ ವಕೀಲರಿಗೆ ನೀಡಿದೆ.
Advertisement
ಭಾರತೀಯ ವಾಯುಸೇನೆಯ ನೈಋತ್ಯ ವಿಭಾಗದ ಕಮಾಂಡೆಂಟ್ ಪುಣೆಯ ಕೇಂದ್ರ ಕಚೇರಿಯಲ್ಲಿ ಮುಖ್ಯ ಅಭಿಯಂತರ ಹುದ್ದೆಯಲ್ಲಿರುವ 49 ವರ್ಷದ ಕರ್ನಲ್ ಪಂಕಜ್ ಭಾರ್ಗವ ಅವರಿಗೆ ಸ್ವಯಂ ಪ್ರೇರಿತವಾಗಿ ಕಿಡ್ನಿ ನೀಡಲು ಮುಂದೆ ಬಂದರೂ ಅನುಮತಿ ನೀಡಲು ಸಮಿತಿ ವಿಳಂಬ ಮಾಡುತ್ತಿದೆ ಎಂದು ಆಕ್ಷೇಪಿಸಿ ವರ್ಷಾ ಶರ್ಮಾ ಕೋರ್ಟ್ ಮೆಟ್ಟಿಲೇರಿದ್ದರು. ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು, ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ರಲ್ಲದೆ, ಕೂಡಲೆ ಸಮಿತಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಗಡುವು ವಿಧಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿ ಬುಧವಾರವೇ ಸಭೆ ನಡೆಸಿ ಕಿಡ್ನಿ ದಾನಕ್ಕೆ ಅನುಮತಿ ನೀಡಿದೆ.