ಉಳ್ಳಾಲ: ಮಳೆಗಾಲದ ಪ್ರಮುಖ ಸಮಸ್ಯೆಯಾಗಿದ್ದ ತೊಕ್ಕೊಟ್ಟು ಜಂಕ್ಷನ್‌ನ ಚರಂಡಿ ಅವ್ಯವಸ್ಥೆಗೆ ಶಾಶ್ವತ ಕಾಯಕಲ್ಪ ದೊರೆತಿದೆ. ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆ ಸಮೀಪದ ಚರಂಡಿಗೆ ಉಳ್ಳಾಲ ನಗರಸಭೆಯಿಂದ ಮಂಜೂರಾದ 5 ಲಕ್ಷ ರೂ. ಅನುದಾನದಲ್ಲಿ ತ್ವರಿತ ಕಾಮಗಾರಿ ಆರಂಭವಾಗಿದೆ.
ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಅಧಿಕ ವಸತಿ ಹಾಗೂ ವಾಣಿಜ್ಯ ಸಂಕೀರ್ಣ, ಅಂಗಡಿ ಗಳಿದ್ದರೂ ಸಮರ್ಪಕ ಚರಂಡಿ ವ್ಯವಸ್ಥೆ ಇರಲಿಲ್ಲ. ಚೆಂಬುಗುಡ್ಡೆ ಭಾಗದಿಂದ ಬರುತ್ತಿದ್ದ ಚರಂಡಿ ನೀರಿನಿಂದಾಗಿ ರಿûಾ ಚಾಲಕರು, ಅಂಗಡಿ ಮಾಲಕರು ಬಹಳ ತೊಂದರೆ ಅನುಭವಿಸಿದ್ದರು. ಹಲವು ವರ್ಷಗಳಿಂದ ಸಮಸ್ಯೆ ಪರಿಹಾರಕ್ಕಾಗಿ ನಗರಸಭೆಗೆ ಮನವಿ ನೀಡಿದ್ದರು.
ಮನವಿಗೆ ಸ್ಪಂದಿಸಿದ ನಗರಸಭೆ, ಸ್ಥಳೀಯ ಅಂಗಡಿ ಮಾಲಕರ ಮನ ವೊಲಿಸಿ, ಚರಂಡಿ ಅಗೆಯಲು ಜಾಗ ಪಡೆದು ತಾತ್ಕಾಲಿಕ ಚರಂಡಿ ವ್ಯವಸ್ಥೆಯನ್ನು ತಿಂಗಳ ಹಿಂದೆ ನಗರಸಭೆಯ ಸದಸ್ಯ ಬಾಝಿಲ್ ಡಿ’ಸೋಜಾ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು. ಸಚಿವ ಖಾದರ್ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.
ಅದರಂತೆ ನಗರಸಭೆಗೆ ಶಾಶ್ವತ ಚರಂಡಿ ವ್ಯವಸ್ಥೆಗೆಂದು 5 ಲಕ್ಷ ರೂ. ಅನುದಾನ ನಗರಸಭೆಯಿಂದ ನೀಡಲಾಗಿದೆ. ಬುಧವಾರ ಶಾಶ್ವತ ಕಾಮಗಾರಿ ಆರಂಭ ಗೊಂಡಿದ್ದು, ಗಣೇಶ ಚತುರ್ಥಿ ಹಬ್ಬದ ಮುನ್ನ ಕಾಮಗಾರಿ ಪೂರ್ತಿಗೊಳಿಸುವಂತೆ ರಿûಾ ಚಾಲಕ ಹಾಗೂ ಮಾಲಕರ ಸಂಘ ಮನವಿ ಮಾಡಿದ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ.
ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಸದಸ್ಯರಾದ ಬಾಝಿಲ್ ಡಿ’ಸೋಜಾ, ನಾಮ ನಿರ್ದೇ ಶಿತ ಸದಸ್ಯರಾದ ರವಿ ಕಾಪಿಕಾಡ್, ರಿಚರ್ಡ್ ವೇಗಸ್, ಕಿಶೋರ್ ಮತ್ತು ರಾಜು ಬಂಡಸಾಲೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು.