Advertisement

ದೊಡ್ಡಬಳ್ಳಾಪುರ: ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗಡೆ

12:20 PM Oct 23, 2021 | Team Udayavani |

 ದೊಡ್ಡಬಳ್ಳಾಪುರ: ಬಾಲನಟಿ ಭೈರವಿ ಹುಟ್ಟುಹಬ್ಬದ ಪ್ರಯುಕ್ತ ಭೈರವಿ ಅಭಿನಯಿಸಿರುವ ಹುಲಿಕುಂಟೆ ಮಹೇಶ್‌ ನಿರ್ಮಾಣದ ಚಂಪಾ ಮತ್ತು ಮೋಹನ್‌ ಕುಮಾರ್‌ ನಿರ್ಮಾಣದ ಶವಸಂಸ್ಕಾರ ಚಲನಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮ ನಗರದ ದರ್ಗಾಜೋಗಿಹಳ್ಳಿ ಅನ್ನದಾಸೋಹ ಸಮಿತಿಯಲ್ಲಿ ನಡೆಯಿತು.

Advertisement

ಇದೇ ಸಂದರ್ಭದಲ್ಲಿ ವಾದ್ಯಗೋಷ್ಠಿ ಕಲಾವಿದರಿಗೆ ದಿನಸಿ ಕಿಟ್‌ ವಿತರಣೆ ಹಾಗೂ ದರ್ಗಾಜೋಗಿಹಳ್ಳಿ ಅನ್ನದಾಸೋಹ ಸಮಿತಿಯಿಂದ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಶೆಟ್ಟಿ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಬಾಲನಟಿ ಭೈರವಿ ಪ್ರತಿಭಾನ್ವಿತೆ ಯಾಗಿದ್ದು, ಮುಂದೆ ಈಕೆಗೆ ಉಜ್ವಲ ಭವಿಷ್ಯವಿದೆ. ಸಮಾಜದಿಂದ ಪಡೆದುಕೊಂಡಿದ್ದರಲ್ಲಿ ಒಂದಿಷ್ಟನ್ನು ಮತ್ತೆ ಸಮಾಜಕ್ಕೆ ಮರಳಿ ನೀಡಿದರೆ ಮಾತ್ರ ನಾವು ಸಮಾಜದಲ್ಲಿ ಸ್ಥಿರವಾಗಿರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ:- ”ಮುತ್ಯಾ ಆರಾಮ ಅದಾನೂ…” ವಿಜಯೇಂದ್ರ ಬಳಿ ಬಿಎಸ್ ವೈ ಯೋಗಕ್ಷೇಮ ವಿಚಾರಿಸಿದ ಪೋರ

ಈ ನಿಟ್ಟಿನಲ್ಲಿ ಬಾಲ ನಟಿ ಭೈರವಿ ಕಾರ್ಯ ಶ್ಲಾಘನೀಯ. ಕೋವಿಡ್‌ ಸಂಕಷ್ಟದಲ್ಲಿ ಆಕೆಯ ತಂದೆ ಪತ್ರಿಕಾ ವಿತರಕ ಮತ್ತು ನಿರ್ಮಾಪಕ ಹುಲಿಕುಂಟೆ ಮಹೇಶ್‌ ದಿನಸಿ ಕಿಟ್‌ ನೀಡುವ ಮೂಲಕ ನೆರವಾಗಿದ್ದರು ಎಂದರು.

 ಪೋಸ್ಟರ್‌ ಬಿಡುಗಡೆ: ಶವಸಂಸ್ಕಾರ ಚಿತ್ರದ ನಿರ್ಮಾಪಕ ಮೋಹನ್‌ ಕುಮಾರ್‌ ಮಾತನಾಡಿ, ಭೈರವಿಯಲ್ಲಿ ವಿಶೇಷವಾದ ಪ್ರತಿಭೆ ಇದೆ. ಶವಸಂಸ್ಕಾರ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾಳೆ. ಯಾವುದೇ ರೀತಿ ಆಡಂಬರವಿಲ್ಲದೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕಾರಣ, ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿಯೇ ನಮ್ಮ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಮಾಡ ಬೇಕೆಂದು ತೀರ್ಮಾನಿಸಿ ಭೈರವಿ ಕೈಯಲ್ಲೇ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿಸಿದೆವು.

Advertisement

ಶವ ಸಂಸ್ಕಾರ ಚಿತ್ರವು ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿಗೆ ಅರ್ಹವಾಗಿದೆ. ಹೀಗಾಗಿ ಸಿನಿಮಾವನ್ನು ಎಲ್ಲಾ ವರ್ಗದ ಜನತೆ ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದರು. ಪತ್ರಿಕಾ ವಿತರಕ ಮತ್ತು ನಿರ್ಮಾಪಕ ಹುಲಿಕುಂಟೆ ಮಹೇಶ್‌, ರಾಧಾಮಣಿ ಮಹೇಶ್‌, ಸಂಗೀತ ನಿರ್ದೇಶಕ ಸುಪ್ರೀತ್‌ ಗಾಂಧಾರ್‌, ಕಿರುತೆರೆ ಚಿತ್ರನಟಿ ಎಂ.ಟಿ.ಅರುಣಾ, ರಾಜೇಶ್ವರಿ, ವಾದ್ಯಗೋಷ್ಠಿ ಕಲಾವಿದರ ಸಂಘದ ಅಧ್ಯಕ್ಷ ಅಶೋಕ್‌, ರಾಜ್ಯ ವಿಷ್ಣು ಸೇವಾ ಸಮಿತಿ ರಾಜ್ಯಾಧ್ಯಕ್ಷ ನೆಲಮಂಗಲ ಕುಮಾರ್‌, ದರ್ಗಾಜೋಗಿಹಳ್ಳಿ ಅನ್ನದಾಸೋಹ ಸಮಿತಿ ಮುಖ್ಯಸ್ಥ ಎಲ್‌.ಮಲ್ಲೇಶ್‌, ಕರವೇ ತಾ ಅಧ್ಯಕ್ಷ ಹಮಾಮ್‌ ಎಸ್‌.ವೆಂಕಟೇಶ್‌, ಕನ್ನಡ ಜಾಗೃತ ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next