Advertisement
ಈ ಹಿಂದೆ ವಿ.ವಿ.ಯ ಕೇಂದ್ರ ಕಚೇರಿಯಲ್ಲಿ ಮಾತ್ರ ಉತ್ತರ ಪತ್ರಿಕೆ ಸ್ಕ್ಯಾನಿಂಗ್ ನಡೆಯುತ್ತಿತ್ತು. ಇದರಿಂದ ಫಲಿತಾಂಶ ವಿಳಂಬವಾಗುತ್ತಿತ್ತು. ಇನ್ನು ಮುಂದೆ ಪರೀಕ್ಷಾ ಕೇಂದ್ರದಲ್ಲೇ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ನಡೆದು, ಕೆಲವೇ ತಾಸುಗಳಲ್ಲಿ ಫಲಿತಾಂಶ ಪ್ರಕಟಿಸಲಿದ್ದೇವೆ ಎಂದು ವಿ.ವಿ.ಯ ಉನ್ನತ ಮೂಲ ತಿಳಿಸಿದೆ.
ಎಲ್ಲ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ, ಡಿಜಿಟಲ್ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಫೆರಿಫರಲ್ ಸ್ಕ್ಯಾನಿಂಗ್ ಪರೀಕ್ಷಾ ಕೇಂದ್ರ ದಲ್ಲೇ ಮಾಡುವುದರಿಂದ ಲೋಪ ಅಥವಾ ಕನಿಷ್ಠ ಗೊಂದಲ ಇಲ್ಲದೆ ಮೌಲ್ಯಮಾಪನ ನಡೆಯಲಿದೆ. ಪರೀಕ್ಷಾ ಕೇಂದ್ರದಲ್ಲೇ ಸ್ಕ್ಯಾನಿಂಗ್ ಯಂತ್ರ ಅಳವಡಿಸಲಾಗುತ್ತದೆ. ಅಲ್ಲೇ ಎಲ್ಲ ಉತ್ತರಪತ್ರಿಕೆ ಸ್ಕ್ಯಾನ್ ಮಾಡ ಲಾಗುತ್ತದೆ. ಬಳಿಕ ವಿ.ವಿ. ಸರ್ವರ್‌ಗೆ ಅಂಕ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಕುಲಪತಿ ಡಾ| ಎಸ್. ಸಚ್ಚಿದಾನಂದ ತಿಳಿಸಿದ್ದಾರೆ. ಇದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಕೂಡಲೇ ಫಲಿತಾಂಶ ದೊರೆಯುತ್ತದೆ. ಸಾಮಾನ್ಯವಾಗಿ ಒಂದು ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ಗೆ 35 ರೂ. ವೆಚ್ಚವಾದರೆ, ಇದರಲ್ಲಿ 100 ರೂ. ವೆಚ್ಚವಾಗಲಿದೆ. ಇದರಿಂದ ವಿ.ವಿ.ಗೆ ಆರ್ಥಿಕ ಹೊರೆ ಆಗಲಿದೆ. ಆದರೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.