Advertisement
ವೈದ್ಯಕೀಯ ಸಾಮಗ್ರಿಗಳು ಮತ್ತು ಔಷಧಗಳಲ್ಲಿ ಆಗಿರುವ ಅಭಿವೃದ್ಧಿಯಿಂದಾಗಿ ಈ ಅಂತರ್ನಿವೇಶಕಗಳಿಗೆ ದೇಹದಲ್ಲಿ ಉಂಟಾಗುವ ತಿರಸ್ಕಾರ ಮತ್ತು ಅಲರ್ಜಿ ಪರಿಣಾಮಗಳನ್ನು ಪರಿಹರಿಸಿಕೊಳ್ಳುವುದು ನಮಗೆ ಸಾಧ್ಯವಾಗಿದೆ. ಆದರೆ ದೇಹದ ಒಳಗಿರುವ ಪರವಸ್ತುಗಳನ್ನು ದೇಹದ ರೋಗ ನಿರೋಧಕ ಶಕ್ತಿಯು ರಕ್ಷಿಸುವುದಿಲ್ಲ. ಹೀಗಾಗಿ ಇವು ದೇಹವನ್ನು ಪ್ರವೇಶಿಸುವ ಸೂಕ್ಷ್ಮಜೀವಿಗಳ ದಾಳಿಗೆ ತುತ್ತಾಗುವುದು ಸಾಧ್ಯ. ಇಂತಹ ಕೃತಕಾವಯವ ಸಂಬಂಧಿ ಸೋಂಕು (ಪೆರಿ-ಪ್ರೋಸ್ಥೆಟಿಕ್ ಇನ್‌ಫೆಕ್ಷನ್) ಗಳು ಗಂಭೀರ ಪರಿಣಾಮಗಳನ್ನು ಉಂಟುಮಾಡುವುದು ಸಾಧ್ಯ.
Related Articles
Advertisement
ಅಳವಡಿಸಲಾದ ಕೃತಕ ಅವಯವಗಳನ್ನು ತೆಗೆದುಹಾಕದ ವಿನಾ ಈ ಸೋಂಕು ನಿವಾರಣೆಯಾಗದು. ಮೂಳೆಮುರಿತಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೃತಕ ಅವಯವಗಳನ್ನು ಜೋಡಿಸಲಾದ ಸಂದರ್ಭದಲ್ಲಿ, ಅವುಗಳ ಪಾತ್ರವು ಮುರಿದ ಮೂಳೆಗಳು ಮರುಜೋಡಣೆಗೊಳ್ಳುವವರೆಗೆ ಮಾತ್ರವಿರುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಲೋಹೀಯ ಕೃತಕ ಅವಯವವನ್ನು ತೆಗೆದುಹಾಕಿದ ಬಳಿಕ ಹೆಚ್ಚು ತೀವ್ರವಲ್ಲದ ಸೋಂಕು ದೀರ್ಘಕಾಲಿಕ ಪರಿಣಾಮ ಇಲ್ಲದೆ ಬಗೆಹರಿಯಬಹುದು ರೋಗ ನಿರೋಧಕ ಶಕ್ತಿ ಅಥವಾ ಔಷಧವಾಗಿ ನೀಡಲಾದ ಆ್ಯಂಟಿಬಯಾಟಿಕ್‌ಗಳಿಂದ ನಿವಾರಿಸಲಾಗದ ಭಿತ್ತಿಯನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ಆದ್ದರಿಂದ ಅವು ಹಾಗೆಯೇ ಉಳಿದುಕೊಂಡು ಸುತ್ತಲಿನ ಅಂಗಾಂಶಗಳನ್ನು ನಾಶ ಮಾಡುವ ಮೂಲಕ ಕೃತಕ ಅವಯವ ಜೋಡಣೆ ಸಡಿಲಗೊಳ್ಳಲು ಅಥವಾ ಕಾಲಕ್ರಮೇಣ ಕೀವು ಉಂಟಾಗಲು ಕಾರಣವಾಗಬಹುದು. ಅಳವಡಿಸಲಾದ ಕೃತಕ ಅವಯವಗಳನ್ನು ತೆಗೆದುಹಾಕದ ವಿನಾ ಈ ಸೋಂಕು ನಿವಾರಣೆಯಾಗದು. ಮೂಳೆಮುರಿತಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೃತಕ ಅವಯವಗಳನ್ನು ಜೋಡಿಸಲಾದ ಸಂದರ್ಭದಲ್ಲಿ, ಅವುಗಳ ಪಾತ್ರವು ಮುರಿದ ಮೂಳೆಗಳು ಮರುಜೋಡಣೆಗೊಳ್ಳುವವರೆಗೆ ಮಾತ್ರವಿರುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಲೋಹೀಯ ಕೃತಕ ಅವಯವವನ್ನು ತೆಗೆದುಹಾಕಿದ ಬಳಿಕ ಹೆಚ್ಚು ತೀವ್ರವಲ್ಲದ ಸೋಂಕು ದೀರ್ಘಕಾಲಿಕ ಪರಿಣಾಮ ಇಲ್ಲದೆ ಬಗೆಹರಿಯಬಹುದು
–ಡಾ| ಯೋಗೀಶ್ ಕಾಮತ್, ಕನ್ಸಲ್ಟಂಟ್ ಸ್ಪೆಶಲಿಸ್ಟ್, ಹಿಪ್ ಮತ್ತು ನೀ ಆರ್ಥೋಪೆಡಿಕ್ ಸರ್ಜನ್, ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೋಪೆಡಿಕ್ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)