Advertisement

ಆತ್ಮವಿಶ್ವಾಸದಿಂದ ಸಾಧನೆ

03:39 PM May 17, 2019 | Team Udayavani |

ಬೆಳಗಾವಿ: ಮಕ್ಕಳಲ್ಲಿ ಆತ್ಮವಿಶ್ವಾಸವಿರಬೇಕು. ಅದರಿಂದ ಏನನ್ನಾದರೂ ಸಾಧಿಸಬಹುದು. ಇಂತಹ ಆತ್ಮವಿಶ್ವಾಸವನ್ನು ಮೂಡಿಸುವ ತಳಪಾಯವನ್ನು ಶಿಕ್ಷಕರು, ಪಾಲಕರು ಹಾಕಬೇಕು ಎಂದು ಹೈದರಾಬಾದದ ಉಪಜಿಲ್ಲಾಧಿಕಾರಿ ವೆಂಕಟೇಶ ಧೋತ್ರೆ ಹೇಳಿದರು.

Advertisement

ನಗರದ ಸಾಲೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಖಾಸಬಾಗ ತಾಳುಕರ ಚಿತ್ರಕಲಾ ಹಾಗೂ ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದ 9ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೊಲೀಸ್‌ ವೃತ್ತ ನಿರೀಕ್ಷಕ ವಿಜಯ ಶಿನ್ನೂರ ಮಾತನಾಡಿ, ಸಾಧನೆಯ ಛಲ ಹೊಂದಿದವನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದರು. ಉಪನ್ಯಾಸಕ ಪ್ರವೀಣ್‌ ದೇವಾಂಗ ಅವರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ನಂತರದ ಉಪಯುಕ್ತ ಕೋರ್ಸ್‌ಗಳು ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ವಸತಿ ನಿಲಯ ಮೇಲ್ವಿಚಾರಕರಾದ ಅಜಯ ಹಜೇರಿ ಮಾತನಾಡಿ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪೊಲೀಸ್‌ ಉಪ ನಿರೀಕ್ಷಕ ವೀರಭದ್ರ ಕಾಮಕರ ಅವರಿಗೆ ದೇವಾಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುಲಕೇಶಿ ತಾಳೂಕರ ಅಧ್ಯಕ್ಷತೆ ವಹಿಸಿದ್ದರು. ತಾಳೂಕರ ಪ್ರತಿಷ್ಠಾನದ ಲಕ್ಷ್ಮಣ ತಾಳೂಕರ, ಪಾಂಡುರಂಗ ಕಾನಡೆ, ಚಂದ್ರಶೇಖರ ತಾಳೂಕರ,‌ ರಾಘವೇಂದ್ರ ತಾಳೂಕರ, ಅಮೃತ ತಾಳೂಕರ. ಶ್ರೀನಿವಾಸ ತಾಳೂಕರ, ಪ್ರವಿಣ ಕಾಮಕರ, ವಿಶ್ವನಾಥ ತಾಳೂಕರ, ಸಂಜು ಹಜೇರಿ, ಅಮರ ಢವಳೆ ಇದ್ದರು. ಕೃಷ್ಣರಾಜೇಂದ್ರ ತಾಳೂಕರ ಸ್ವಾಗತಿಸಿದರು. ಚಂದ್ರಗುಪ್ತ. ತಾಳೂಕರ ನಿರೂಪಿಸಿದರು. ಕಾರ್ಯದರ್ಶಿ ಸುಭಾಷ್‌ ತಾಳೂಕರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next