Advertisement

ಒಂದೇ ಕೊಠಡಿಯಲ್ಲಿ ಇಬ್ಬರು ಅಧಿಕಾರಿಗಳ ಕಾರ್ಯನಿರ್ವಹಣೆ

11:12 PM Jan 24, 2020 | Lakshmi GovindaRaj |

ಮಂಡ್ಯ: ಇಲ್ಲಿನ ಸುಭಾಷ್‌ನಗರದ ಸಹಕಾರ ಸಂಘಗಳ ಉಪ ನಿಬಂಧಕರ ಕುರ್ಚಿಗೆ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಏರ್ಪಟ್ಟಿದ್ದು, ಪರಸ್ಪರ ನಿಂದಿಸಿಕೊಳ್ಳುತ್ತಲೇ ಒಂದೇ ಕೊಠಡಿಯಲ್ಲಿ ಕುಳಿತು ಕಡತ ಪರಿಶೀಲಿಸುತ್ತಾ ಕರ್ತವ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.

Advertisement

ಸಹಕಾರ ಸಂಘಗಳ ಉಪ ನಿಬಂಧಕರ ಹುದ್ದೆಗೆ ಸರ್ಕಾರದಿಂದ ವರ್ಗಾವಣೆಯಾಗಿರುವ ವಿಕ್ರಮರಾಜೇ ಅರಸ್‌, ಅಧಿಕಾರ ಸ್ವೀಕರಿಸಿ ಕರ್ತವ್ಯಕ್ಕೆ ಹಾಜರಾಗಿದ್ದರೆ, ವರ್ಗಾವಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಬಿ.ಆರ್‌.ಕೃಷ್ಣಮೂರ್ತಿ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ.

ಆರೋಪವೊಂದರ ಹಿನ್ನೆಲೆಯಲ್ಲಿ ಇಲ್ಲಿನ ಸಹಾಯಕ ನಿಬಂಧಕ ಬಿ.ಆರ್‌.ಕೃಷ್ಣಮೂರ್ತಿ ಅವರನ್ನು ಚಾಮರಾಜನಗರಕ್ಕೆ ರಾಜ್ಯಸರ್ಕಾರ ವರ್ಗಾವಣೆ ಮಾಡಿತ್ತು. ಈ ಜಾಗಕ್ಕೆ ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘದಲ್ಲಿ ಸಹಾಯಕ ನಿಬಂಧಕರಾಗಿದ್ದ ವಿಕ್ರಮರಾಜೇ ಅರಸ್‌ ಅವರಿಗೆ ಬಡ್ತಿ ಜ.18ರಂದು ಆದೇಶ ಹೊರಡಿಸಿತ್ತು.

ವಿಕ್ರಮರಾಜೇ ಅರಸು ಜ.20ರಂದು ಕಚೇರಿಗೆ ಬಂದು ಅಧಿಕಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಲು ಆರಂಭಿಸಿದರು. ಈ ನಡುವೆ, 5 ತಿಂಗಳ ಅಂತರದಲ್ಲಿ ವರ್ಗಾವಣೆ ಪ್ರಶ್ನಿಸಿ ಬಿ.ಆರ್‌.ಕೃಷ್ಣಮೂರ್ತಿ ಕೋರ್ಟ್‌ ಮೊರೆ ಹೋಗಿದ್ದರಿಂದ, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿತ್ತು. ವರ್ಗಾವಣೆಗೆ ತಡೆಯಾಜ್ಞೆ ಸಿಕ್ಕಿರುವ ಕಾರಣ ಕೃಷ್ಣಮೂರ್ತಿ ಒಂದೇ ಕೊಠಡಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಕಚೇರಿಯೊಳಗೆ ಗೊಂದಲದ ವಾತಾವರಣ ಸೃಷ್ಠಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next