Advertisement
ಕನ್ನಡ ಬಿ.ಎ.ಯಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಶ್ರದ್ಧಾ ಎನ್.ಭಟ್ ಪ್ರಥಮ ಸ್ಥಾನವನ್ನು, ಇದೇ ಕಾಲೇಜಿನ ಫಾತಿಮತ್ ಫಸೀìನಾ ದ್ವಿತೀಯ ಸ್ಥಾನ ವನ್ನು ಪಡೆದುಕೊಂಡಿದ್ದಾರೆ. ತೃತೀಯ ಸ್ಥಾನವನ್ನು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಅನುಶ್ರೀ ಸಿ.ಎಚ್. ಪಡೆದಿದ್ದಾರೆ.
ಕನ್ನಡ ಎಂ.ಎ.ಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ರಾಜಾರಾಮ ಪಿ. ಅವರು ಮುಳಿಯಾರು ಸಮೀಪದ ಶ್ಯಾಮ ಭಟ್ ಕೆ. ಮತ್ತು ಮುಕಾಂಬಿಕ ಪಿ. ದಂಪತಿ ಪುತ್ರ. ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ ಸ್ನೇಹರಂಗದ ಕಾರ್ಯದರ್ಶಿಯಾಗಿ, ಎನ್ನೆಸ್ಸೆಸ್ ಸ್ವಯಂ ಸೇವಕರಾಗಿ ದುಡಿದಿದ್ದರು. ಕಣ್ಣೂರು ವಿ.ವಿ. ಕಲೋತ್ಸವ ಸ್ಪರ್ಧೆಯ ನಾಟಕದಲ್ಲಿ ಸತತ ಮೂರು ಬಾರಿ ಬಹುಮಾನ ಪಡೆದಿರುವ ಅವರು, ಕೆ.ಎ.ಎಲ್.ಪಿ. ಶಾಲೆ ಕೋಟೂರು, ಎ.ಯು.ಪಿ. ಶಾಲೆ ಬೋವಿಕಾನ, ಬಿ.ಎ.ಆರ್. ಹಿರಿಯ ಪ್ರೌಢ ಶಾಲೆ ಬೋವಿಕಾನ ಈ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ. ಓದು ಹಾಗೂ ನಾಣ್ಯ ಸಂಗ್ರಹವನ್ನು ಹವ್ಯಾಸ ವಾಗಿರಿಸಿಕೊಂಡಿರುವ ಅವರು ಮುಂದೆ ಬಿ.ಎಡ್. ಓದಲು ಉತ್ಸುಕರಾಗಿದ್ದಾರೆ. ಕನ್ನಡ ಎಂ.ಎ.ಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ವಿಶಾಲಾಕ್ಷಿ ಬಿ.ಕೆ. ಅವರು ಬೆದ್ರಡ್ಕ ಬಾಬು ಪೂಜಾರಿ ಮತ್ತು ಪುಷ್ಪ ದಂಪತಿಯ ಪುತ್ರಿ. ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ ಗಿಳಿವಿಂಡು ಮತ್ತು ಸ್ನೇಹರಂಗದ ಪದಾಧಿಕಾರಿಯಾಗಿ ದುಡಿದಿದ್ದರು. ಜಿ.ಎಲ್.ಪಿ.ಎಸ್. ಕಂಬಾರು, ಜಿ.ಯು.ಪಿ.ಎಸ್. ಮತ್ತು ಜಿ.ಎಚ್.ಎಸ್.ಎಸ್ ಮೊಗ್ರಾಲ್ ಪುತ್ತೂರು, ಬಿ.ಇ.ಎಂ.ಎಚ್.ಎಸ್.ಎಸ್. ಕಾಸರಗೋಡು ಹಾಗೂ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಹಳೆ ವಿದ್ಯಾರ್ಥಿ. ಓದು, ಬರಹವನ್ನು ಹವ್ಯಾಸವಾಗಿರಿಸಿಕೊಂಡ ಇವರು ಮುಂದೆ ಬಿ.ಎಡ್ ಓದುವ ಹಂಬಲ ವ್ಯಕ್ತಪಡಿಸಿದ್ದಾರೆ.
Related Articles
Advertisement
ಕನ್ನಡ ಬಿ.ಎ. ಫಲಿತಾಂಶ ಕನ್ನಡ ಬಿ.ಎ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಶ್ರದ್ಧಾ ಎನ್. ಭಟ್ ಅವರು ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿ. ಸಾಹಿತ್ಯ, ಸಂಗೀತ, ಹರಿಕತೆ ಮತ್ತು ಯಕ್ಷಗಾನ ತಾಳಮದ್ದಳೆಯಲ್ಲಿ ವಿಶೇಷ ಆಸಕ್ತಿಯಿರುವ ಇವರು ಈಗಾಗಲೇ ಈ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡಿದ್ದಾರೆ. ಕಾಸರಗೋಡು ಮಾತ್ರವಲ್ಲದೆ ಕರ್ನಾಟಕದ ಮಂಗಳೂರು ಉಡುಪಿ, ಕಾರ್ಕಳ, ಹಾಸನ, ಮೈಸೂರು ಈ ಮುಂತಾದ ಭಾಗಗಳಲ್ಲಿ ಹರಿಕಥೆ, ಕಾವ್ಯ ವಾಚನ ಮುಂತಾದ ಸಾಹಿತ್ಯ ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಿರಿಚಂದನ ಕನ್ನಡ ಯುವ ಬಳಗವು ನಡೆಸಿಕೊಂಡು ಬರುತ್ತಿರುವ ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನ ತಾಳಮದ್ದಳೆ ಕಾರ್ಯಕ್ರಮದ ಯುವ ಅರ್ಥಧಾರಿಗಳಲ್ಲಿ ಒಬ್ಬರಾಗಿದ್ದಾರೆ. ಬೇಲೂರಿನಲ್ಲಿ ನಡೆದ ಅಖೀಲ ಕರ್ನಾಟಕ ಮಕ್ಕಳ ಗಮಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸುರತರಂಗಿಣಿ ಎಂಬ ಕುಸುಮ ಷಟ³ದಿಯಲ್ಲಿ ರಚನೆಯಾದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಕಣ್ಣೂರು ವಿ.ವಿ. ಕಲೋತ್ಸವದ ಕವಿತಾ ರಚನೆ, ಕನ್ನಡ ಕಂಠಪಾಠ ಸ್ಪರ್ಧೆಗಳಲ್ಲಿ ಸತತ ಮೂರು ವರ್ಷಗಳಿಂದ ಬಹುಮಾನ ಪಡೆಯುತ್ತಾ ಬಂದಿದ್ದಾರೆ. ಸ್ನೇಹರಂಗದ ಮುಖವಾಣಿ ಪತ್ರಿಕೆ ಕನ್ನಡ ಧ್ವನಿಯ ಸಂಪಾದಕಿಯಾಗಿ ದುಡಿದ್ದಾರೆ. ಮುಂದೆ ಎಂ.ಎ. ಪದವಿ ಮಾಡಲು ಆಸಕ್ತರಾಗಿರುವ ಇವರು ಸರಕಾರಿ ಹಿರಿಯ ಪ್ರೌಢಶಾಲೆ ಕಾಯರ್‌ಕಟ್ಟೆ ಮತ್ತು ಸರಕಾರಿ ಹಿರಿಯ ಪ್ರೌಢಶಾಲೆ ಪೈವಳಿಕೆ ನಗರ ಇಲ್ಲಿನ ಹಳೆ ವಿದ್ಯಾರ್ಥಿ. ಕಾಯರ್‌ಕಟ್ಟೆ ಸಮೀಪದ ನಾಯರ್ಪಳ್ಳ ಗೋಪಾಲಕೃಷ್ಣ ಭಟ್‌ಹಾಗೂ ಮಾಲತಿ ಭಟ್ ದಂಪತಿ ಪುತ್ರಿ. ದ್ವಿತೀಯ ಸ್ಥಾನವನ್ನು ಪಡೆದ ಫಾತಿಮತ್ ಫಸೀìನ ಇವರು ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿ. ಪೆರ್ಲ ಬಳಿಯ ವರ್ಮುಡಿ ಶಾಹುಲ್ ಹಮೀದ್ ಮತ್ತು ಸೊಹರಾ ದಂಪತಿ ಪುತ್ರಿ. ಶ್ರೀ ಸತ್ಯನಾರಾ ಯಣ ಹೈಸ್ಕೂಲ್ ಪೆರ್ಲ, ಶ್ರೀ ಸುಬ್ರಹ್ಮಣ್ಯೇಶ್ವರ ಹಿರಿಯ ಪ್ರೌಢ ಶಲೆ ಕಾಟುಕುಕ್ಕೆ ಇಲ್ಲಿನ ಹಳೆ ವಿದ್ಯಾರ್ಥಿ. ಓದು ಬರಹ ಹಾಗೂ ಕರಕುಶಲ ವಸ್ತು ತಯಾರಿಯಲ್ಲಿ ಆಸಕ್ತಿಯಿರುವ ಇವರು ಮುಂದೆ ಬಿ.ಎಡ್ ಮಾಡುವ ಉದ್ದೇಶ ಹೊಂದಿದ್ದಾರೆ. ತೃತೀಯ ಸ್ಥಾನವನ್ನು ಪಡೆದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಅನುಶ್ರೀ ಅವರು ಮಂಗಲ್ಪಾಡಿ ಪ್ರತಾಪ್ ನಗರ್ ಇಲ್ಲಿನ ವಿಷ್ಣು ಭಟ್ ಮತ್ತು ಶ್ರೀದೇವಿ ದಂಪತಿ ಪುತ್ರಿ ಹಾಗೂ ವಿಶ್ವನಾಥ ಎ.ಬಿ. ಅವರ ಪತ್ನಿ. ಯಕ್ಷಗಾನ ಕಲಾವಿದೆಯಾಗಿರುವ ಇವರು ಕಣ್ಣೂರು ವಿ.ವಿ. ಕಲೋತ್ಸವ ಸ್ಪರ್ಧೆ ಯಲ್ಲಿ ಸತತ ಎರಡು ವರ್ಷ ಬಹು ಮಾನ ಪಡೆದಿದ್ದಾರೆ. ಎನ್ನೆಸ್ಸೆಸ್ ಸ್ವಯಂ ಸೇವಕಿ ಯಾಗಿದ್ದು, ಗಿಳಿವಿಂಡು ವೇದಿಕೆಯ ಅಧ್ಯಕ್ಷರಾಗಿ ದುಡಿದಿದ್ದರು. ಸಾಹಿತ್ಯ ರಚನೆ ಮತ್ತು ಕ್ರೀಡೆ ಯಲ್ಲಿ ಆಸಕ್ತರಾಗಿರುವ ಇವರು ಐಲ ಶ್ರೀ ಶಾರದಾ ಬೋವಿ ಅನುದಾನಿತ ಯು.ಪಿ. ಶಾಲೆ, ಜಿ.ಎಚ್.ಎಸ್.ಎಸ್. ಬೇಕೂರು, ಜಿ.ಎಚ್.ಎಸ್.ಎಸ್. ಪೈವಳಿಕೆ ನಗರ ಈ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ. ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ಇದರ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ. ಮುಂದೆ ಇವರು ಬಿಇಡಿ ಅಥವಾ ಎಂ.ಎ. ಅಧ್ಯಯನ ಮಾಡುವ ಇರಾದೆ ವ್ಯಕ್ತಪಡಿಸಿದ್ದಾರೆ.