Advertisement

ಶಿಕ್ಷಣ-ಕ್ರೀಡೆಯಲ್ಲೂ ಸಾಧನೆ ಅವಶ್ಯ

12:55 PM Feb 10, 2018 | Team Udayavani |

ಭಾಲ್ಕಿ: ಕ್ರೀಡೆ, ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ವಿದ್ಯಾರ್ಥಿಗಳು ಎರಡಲ್ಲೂ ಉತ್ತಮ ಸಾಧನೆ ಮಾಡಬೇಕು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚನ್ನವೀರ ಚಕ್ರಸಾಲಿ ಹೇಳಿದರು.

Advertisement

ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲ ಸಂಚಾಲಿತ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆಗಳು ತುಂಬಾ ಮಹತ್ವಪೂರ್ಣ ಪಾತ್ರ ವಹಿಸುತ್ತವೆ. ಹಾಗಾಗಿ, ಎಲ್ಲ ಶಿಕ್ಷಕರು ಮಕ್ಕಳಿಗೆ ಆಟಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಬೇಕು. ನೈಜ ಕ್ರೀಡಾಜ್ಞಾನ ನೀಡದ ಶಿಕ್ಷಣ ಅಪೂರ್ಣ ಎಂದು ಹೇಳಿದರು.

ಆಡಳಿತಾಧಿಕಾರಿ ಮೋಹನರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು, ವಿದ್ಯಾರ್ಥಿಗಳು ಕೇವಲ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇಂಟರ್‌ನೆಟ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದ ದೈಹಿಕ ಸದೃಢತೆ ಇಲ್ಲದೇ ಮಾನಸಿಕವಾಗಿ ಹಿನ್ನಡೆ ಅನುಭವಿಸಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. 

ಮುಖ್ಯಶಿಕ್ಷಕ ಬಸವರಾಜ ಪ್ರಭಾ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಲಕ್ಷ್ಮಣ ಮೇತ್ರೆ, ಪಂಡರಿನಾಥ ಪವಾರ್‌, ಬಸವಶ್ರೀ ಮಾಳಗೆ, ದೈಹಿಕ ನಿರ್ದೇಶಕ ಅನಿಲ್‌ಕುಮಾರ ಪಾಟೀಲ, ಸಚಿನ್‌ ಪೊಟ್ಲೆ, ಮಲ್ಲಿಕಾರ್ಜುನ, ಭರತ ನಂದನವರೆ, ಉತ್ತಮ ನಾಗೂರೆ, ಸಹಾದೇವ ಮಡಿವಾಳ, ವೀರೇಶ ಶೇರಿಕಾರ, ಮಹೇಶ ದೇಶಮುಖ್‌, ಜೈರಾಜ ದೊಡ್ಡೆ ಇದ್ದರು. ಮಹೇಶ ಬನ್ನಾಳೆ ನಿರೂಪಿಸಿದರು. ದೈಹಿಕ ಶಿಕ್ಷಕ ವಿರೇಶ ವಿವೇಕಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next