Advertisement
ಬಳಿಕ ಅವರು ಮಾತನಾಡಿ, ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಉಳಿಸುವ ಪ್ರಯತ್ನ ನಡೆದಿದೆ. ಇಂದು ಈ ಶಾಲೆಯಲ್ಲಿ ಏಳುನೂರು ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂಬುದು ವಿಶಿಷ್ಟ ಸಾಧನೆಯಾಗಿದ್ದು, ಅಭಿನಂದ ನೀಯ. ಆಂಗ್ಲ ಮಾಧ್ಯಮ ಕಲಿಕೆಗೆ ಸರಕಾರವೇ ಅವಕಾಶ ನೀಡಿದ್ದು, ದಡ್ಡಲ ಕಾಡು ಶಾಲೆಗೂ ಅನುಮತಿ ಸಿಕ್ಕಿರುವುದು ಸಂತೋಷ ನೀಡಿದೆ ಎಂದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆ ಮಂಜೂರುಗೊಳಿಸುವ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ಮಾತನಾಡಿ, ನಿರಂತರ ಹೋರಾಟ ಹಾಗೂ ಶ್ರಮದ ಫಲವಾಗಿ ಈ ಶಾಲೆ ಈ ಎತ್ತರಕ್ಕೆ ಬೆಳೆದು ನಿಂತಿದೆ. ಎಲ್ಲ ಅವಕಾಶ ಹಾಗೂ ಸೌಲಭ್ಯಗಳು ಈ ಶಾಲೆಯಲ್ಲಿದ್ದು, ಅದನ್ನು ವಿದ್ಯಾರ್ಥಿಗಳು ಹಾಗೂ ಹೆತ್ತವರು ಸದು ಪಯೋಗಪಡಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಪಂಜಿಕಲ್ಲು ಗ್ರಾ.ಪಂ. ಸದಸ್ಯರಾದ ಪೂವಪ್ಪ ಮೆಂಡನ್, ರೂಪಶ್ರೀ ಉಪಸ್ಥಿತರಿದ್ದರು.
Related Articles
Advertisement
ಇದೇ ಸಂದರ್ಭ ಶಾಸಕರು ಶಾಲಾ ಹೊಸ ಬಸ್ಸಿಗೆ ಚಾಲನೆ ನೀಡಿ, ಕೀಲಿ ಕೈಯನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರ ಜಿ.ಪಂ. ಅನುದಾನದಡಿ ಮಂಜೂರುಗೊಂಡ ಪೀಠೊಪಕರಣಗಳನ್ನು ಶಾಲೆಗೆ ಹಸ್ತಾಂತರಿಸಲಾುತು. ಬಂಟ್ವಾಳದ ಅಂಬಿಕಾ ಮೆಟಲ್ನಿಂದ ಉಚಿತವಾಗಿ ಕೊಡಮಾಡಿದ ಸ್ಟೀಲ್ ಬಟ್ಟಲನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಒಂದನೇ ತರಗತಿಗೆ ಸೇರಿದ 125 ವಿದ್ಯಾರ್ಥಿಗಳು ಸಹಿತ ಪ್ರಾಥಮಿಕ ಪೂರ್ವ ಹಾಗೂ ಇತರ ತರಗತಿಗಳಿಗೆ ದಾಖಲಾದ ಒಟ್ಟು 270 ಮಂದಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿಕೊಳ್ಳಲಾಯಿತು. ಶಾಲೆಯನ್ನು ತಳಿರು ತೋರಣ ಹಾಗೂ ಬಂಟಿಂಗ್ಸ್ ಗಳಿಂದ ಸಿಂಗರಿಸಲಾಗಿತ್ತು. ಹೊಸ ವಿದ್ಯಾರ್ಥಿಗಳನ್ನು ಶಾಲಾ ಅಂಗಣದಿಂದ ವಾದ್ಯ ಹಾಗೂ ಬ್ಯಾಂಡ್‌ಗಳ ಮೂಲಕ ಮರೆವಣಿಗೆಯಲ್ಲಿ ಕರೆ ತರಲಾಯಿತು. ಈ ವರ್ಷ ಒಂದನೇ ತರಗತಿಗೆ 125 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಎಲ್ಕೆಜಿ, ಯುಕೆಜಿ ಸೇರಿ ಒಟ್ಟು 270 ಮಂದಿ ಹೊಸ ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡಿದ್ದು, ವಿದ್ಯಾರ್ಥಿಳ ಒಟ್ಟು ಸಂಖ್ಯೆ 700 ಗಡಿ ದಾಟಿದೆ. ಮಕ್ಕಳ ದಾಖಲಾತಿಯಲ್ಲಿ ಏರಿಕೆಯಾಗಿರುವುದರಿಂದ ಒಂದನೇ ತರಗತಿಯಲ್ಲಿ ಎ, ಬಿ, ಸಿ ಎನ್ನುವ ಮೂರು ವಿಭಾಗಗಳನ್ನು ತೆರೆಯಲಾಗಿದೆ.
270 ವಿದ್ಯಾರ್ಥಿಗಳ ಸೇರ್ಪಡೆಒಂದನೇ ತರಗತಿಗೆ ಸೇರಿದ 125 ವಿದ್ಯಾರ್ಥಿಗಳು ಸಹಿತ ಪ್ರಾಥಮಿಕ ಪೂರ್ವ ಹಾಗೂ ಇತರ ತರಗತಿಗಳಿಗೆ ದಾಖಲಾದ ಒಟ್ಟು 270 ಮಂದಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿಕೊಳ್ಳಲಾಯಿತು. ಶಾಲೆಯನ್ನು ತಳಿರು ತೋರಣ ಹಾಗೂ ಬಂಟಿಂಗ್ಸ್ ಗಳಿಂದ ಸಿಂಗರಿಸಲಾಗಿತ್ತು. ಹೊಸ ವಿದ್ಯಾರ್ಥಿಗಳನ್ನು ಶಾಲಾ ಅಂಗಣದಿಂದ ವಾದ್ಯ ಹಾಗೂ ಬ್ಯಾಂಡ್‌ಗಳ ಮೂಲಕ ಮರೆವಣಿಗೆಯಲ್ಲಿ ಕರೆ ತರಲಾಯಿತು. ಈ ವರ್ಷ ಒಂದನೇ ತರಗತಿಗೆ 125 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಎಲ್ಕೆಜಿ, ಯುಕೆಜಿ ಸೇರಿ ಒಟ್ಟು 270 ಮಂದಿ ಹೊಸ ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡಿದ್ದು, ವಿದ್ಯಾರ್ಥಿಳ ಒಟ್ಟು ಸಂಖ್ಯೆ 700 ಗಡಿ ದಾಟಿದೆ. ಮಕ್ಕಳ ದಾಖಲಾತಿಯಲ್ಲಿ ಏರಿಕೆಯಾಗಿರುವುದರಿಂದ ಒಂದನೇ ತರಗತಿಯಲ್ಲಿ ಎ, ಬಿ, ಸಿ ಎನ್ನುವ ಮೂರು ವಿಭಾಗಗಳನ್ನು ತೆರೆಯಲಾಗಿದೆ.