Advertisement

ಪೆರ್ಡೂರು: ಮಾಂಗಲ್ಯ ಸಭಾಭವನ ಉದ್ಘಾಟನೆ

01:10 PM Dec 08, 2017 | |

ಹೆಬ್ರಿ : ಪೆರ್ಡೂರು ಮೇಲ್ಪೇಟೆ ಯಲ್ಲಿ ನಿರ್ಮಾಣಗೊಂಡಿರುವ ಮಾಂಗಲ್ಯ ಸಭಾಭವನವನ್ನು ಗುರುವಾರ ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಉದ್ಘಾಟಿಸಿದರು.

Advertisement

ಈ ಸಂದರ್ಭ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು
ಆಶೀರ್ವಚನ ನೀಡಿದರು. ಮದುವೆ ಎನ್ನುವ ಪವಿತ್ರ ಸಂಬಂಧ ಬೆಸೆಯುವ ಕಾರ್ಯಕ್ರಮಕ್ಕೆ ಪೂರಕವಾಗಿ ಕದಳೀಪ್ರಿಯ ಪೆರ್ಡೂರು ಶ್ರೀ ಪದ್ಮನಾಭನ ಕ್ಷೇತ್ರದಲ್ಲಿ ಭವ್ಯವಾದ ಮಾಂಗಲ್ಯ ಹೆಸರಿನ ಸಭಾಭವನ ನಿರ್ಮಿಸಿರುವುದು ಶ್ಲಾಘನೀಯ; ಇಲ್ಲಿ ನಿರಂತರ ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು. 

ವಿನಯ ಕುಮಾರ್‌ ಸೊರಕೆ ಮಾತ ನಾಡಿ, ಹೊಸತನವಿದ್ದಾಗ ಅಭಿವೃದ್ಧಿ ಸಾಧ್ಯ. ಪೆರ್ಡೂರಿನಲ್ಲಿ ಅತ್ಯಾಧುನಿಕ ಸೌಲಭ್ಯ ಹಾಗೂ ಅತ್ಯಾಕರ್ಷಕ ಒಳಾಂಗಣ ವಿನ್ಯಾಸದೊಂದಿಗೆ ಸುಸಜ್ಜಿತ ಸಭಾಭವನ ಹಾಗೂ ಕುಟುಂಬ ಸಮೇತರಾಗಿ ಆಹಾರ ಸೇವಿಸಲು ಫಿಶ್‌ ಕಾರ್ನರ್‌ ಫ್ಯಾಮಿಲಿ ರೆಸ್ಟೋರೆಂಟ್‌ ನಿರ್ಮಿಸಿರುವುದು ಗ್ರಾಮೀಣ ಜನರಿಗೆ ಉಪಯುಕ್ತವಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಸಭಾಭವನದ ಆಡಳಿತ ಪಾಲುದಾರ ಕೆ. ಶಾಂತಾರಾಮ ಸೂಡ ಮಾತನಾಡಿ, ನಿರಂತರ ಜನರ
ಸಂಪರ್ಕದಲ್ಲಿರುವ ರಾಜ್‌ಕುಮಾರ್‌ ಶೆಟ್ಟಿ ಹೆಬ್ರಿಯಲ್ಲಿ ಸಂಭ್ರಮ ಸಭಾಭವನವನ್ನು ನಿರ್ಮಿಸಿ ಯಶಸ್ವಿಯಾಗಿದ್ದಾರೆ.
ಈಗ ಉದ್ಘಾಟನೆಗೊಂಡಿರುವ ಮಾಂಗಲ್ಯ ಸಭಾಭವನ ಯಶಸ್ಸಿಗೆ ಜನರ ಸಹಕಾರ ಅಗತ್ಯ ಎಂದರು.

ಸಮ್ಮಾನ ಸುಂದರ ಸಭಾಭವನ ನಿರ್ಮಾಣಕ್ಕೆ ಶ್ರಮಿಸಿದವರನ್ನು ಸಮ್ಮಾನಿಸಲಾಯಿತು. ಜಿ.ಪಂ. ಸದಸ್ಯ
ಸುಧಾಕರ ಶೆಟ್ಟಿ ಮೈರ್ಮಾಡಿ, ವಿಜಯ ಬ್ಯಾಂಕ್‌ ಪೆರ್ಡೂರು ಶಾಖೆಯ ಸೀನಿಯರ್‌ ಮ್ಯಾನೇಜರ್‌ ಬಿ. ಶಿವಪ್ರಸಾದ್‌, ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದ ಮಾಲಕ ರಘುಪ್ರಸಾದ ಅಡಿಗ, ದೊಡ್ಡಮನೆ ಶ್ರೀನಿವಾಸ ಶೆಟ್ಟಿ, ಬೊಮ್ಮಯ್ಯ ಶೆಟ್ಟಿ, ಪ್ರಮೋದ ಆರ್‌. ಶೆಟ್ಟಿ, ಉದಯ ಕುಮಾರ್‌ ಶೆಟ್ಟಿ ದೊಡ್ಡಮನೆ, ವೀಣಾ ಎಸ್‌. ಸೂಡ ಉಪಸ್ಥಿತರಿದ್ದರು. ಆಡಳಿತ ಪಾಲುದಾರ ರಾಜಕುಮಾರ್‌ ಶೆಟ್ಟಿ ಸ್ವಾಗತಿಸಿ, ಚಂದ್ರ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಶ್ರೀಧರ ಕೆ. ಶೆಟ್ಟಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next