Advertisement

ಪೆರ್ಡೂರು: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

09:53 AM Dec 31, 2017 | Team Udayavani |

ಹೆಬ್ರಿ : ಕನ್ನಡದಿಂದ ಮನಸ್ಸನ್ನು ಒಟ್ಟುಗೂಡಿಸುವ ಕೆಲಸ ವಾಗಬೇಕು. ಕನ್ನಡದಿಂದ ನಮ್ಮ ಸಂಸ್ಕೃತಿ, ಸಂಸ್ಕಾರಗಳು ಉಳಿದಿವೆ. ಕನ್ನಡ ಹೃದಯದ ಭಾಷೆಯಾಗಿದ್ದು, ಕ.ಸಾ.ಪ. ಸಾಹಿತ್ಯ ಸಮ್ಮೇಳನಗಳನ್ನು ನಿರಂತರ ನಡೆಸುವುದರ ಮೂಲಕ ಕನ್ನಡದ ಕಂಪನ್ನು ಪಸರಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಕೆ. ನಾರಾಯಣ ಹೆಬ್ಟಾರ್‌ ಹೇಳಿದರು.

Advertisement

ಅವರು ಡಿ.29ರಂದು ಪೆರ್ಡೂರಿನ ಮಾಂಗಲ್ಯ ಸಭಾಭವನದಲ್ಲಿ ನಡೆದ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು. ಕಂಡು ಕೇಳರಿಯದ ಸಮ್ಮೇಳನ: ನನ್ನ ಜೀವನದಲ್ಲಿ ಇದುವರೆಗೆ ಕಾಣದ ಅದ್ಭುತ ಕ್ಷಣಗಳನ್ನು ಈ ಸಮ್ಮೇಳನದಲ್ಲಿ ಅನುಭವಿಸಿದೆ. ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇದರ ಅಧ್ಯಕ್ಷತೆ ನನ್ನ ಭಾಗ್ಯ ಎಂದು ಸಮ್ಮೇಳ ನಾಧ್ಯಕ್ಷ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಹೇಳಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಉಡುಪಿ ತಾ| ಕ.ಸಾ.ಪ. ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ವಹಿಸಿದ್ದರು. 

ಲಲಿತಾಂಬಾ, ಶಂಕರ ಶೆಟ್ಟಿ , ರಾಜು ಪೂಜಾರಿ, ಸತೀಶ ಆಚಾರ್ಯ, ಸಂಜೀವ ಹೆಗ್ಡೆ , ರಾಜು ಪೂಜಾರಿ, ನೆಂಪು ನರಸಿಂಹ ಭಟ್‌, ಶ್ರೀನಿವಾಸ ನಾಯ್ಕ, ಸೂರಿ ಶೆಟ್ಟಿ ಕಾಪು, ಗೋಪಾಲ ನಾಯ್ಕ, ರಾಮ ಮೊದಲಾದವರನ್ನು ಸಮ್ಮಾನಿಸಲಾಯಿತು.

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಮೋದ್‌ ರೈ ಪಳಜೆ, ಉಡುಪಿ ಜಿ.ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉದ್ಯಮಿ ಮುನಿ ಯಾಲು ಉದಯ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಕೆ. ಶಾಂತಾರಾಮ ಸೂಡ, ಕಾರ್ಯದರ್ಶಿ ಚಂದ್ರ ನಾಯ್ಕ, ಸುಬ್ರಹ್ಮಣ್ಯ ಭಟ್‌, ಬಾಲಕೃಷ್ಣ ಮುಧ್ದೋಡಿ, ವಿಲಾಸ ಕುಮಾರ್‌, ಎಚ್‌.ಎಸ್‌. ಗಣೇಶ್‌ ಭಟ್‌, ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ರಾಜಕುಮಾರ್‌ ಶೆಟ್ಟಿ ಸ್ವಾಗತಿಸಿ, ಶ್ರೀಧರ್‌ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರಭಾಕರ ಭಂಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next