Advertisement
ನಗರ ಪ್ರದೇಶಗಳ ಶಾಲೆ-ಕಾಲೇಜು ವ್ಯಾಪ್ತಿಯಲ್ಲೇ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತಿರುವುದು ಗಮನಾರ್ಹ. ಗ್ರಾಮೀಣ ಭಾಗದಲ್ಲಿ ಈ ವಲಯವನ್ನು ತಂಬಾಕು ಮುಕ್ತಗೊಳಿ ಸುವುದಕ್ಕೆ ಬಹ್ವಂಶ ಸಾಧ್ಯವಾಗಿದೆ.
Related Articles
ಬಿ-ಕೋಟಾ³ ಕಾಯಿದೆಯಡಿ ಬರುವ ಸೆಕ್ಷನ್ 6ಬಿ ಪ್ರಕಾರ, “ಈ ವಿದ್ಯಾಸಂಸ್ಥೆಯಲ್ಲಿ ಧೂಮಪಾನ ಮಾಡಬಾರದು’ ಎಂಬುದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೂಚನಾಫಲಕ ಅಳವಡಿಸಬೇಕು. ಆದರೆ ಶೇ.80.33ರಷ್ಟು ಶಾಲೆ ಮತ್ತು ಶೇ. 47.5ರಷ್ಟು ಶಾಲೆಗಳಲ್ಲಿ ಮಾತ್ರ ಇದು ಅಳವಡಿಕೆಯಾಗಿದೆ. ಕಾಲೇಜುಗಳಲ್ಲಿ ಅರ್ಧದಷ್ಟೂ ಕಾರ್ಯ ಸಾಧನೆಯಾಗದಿರುವುದು ವಾಸ್ತವ. ಸೆಕ್ಷನ್-4 ಪ್ರಕಾರ, “ಈ ಪ್ರದೇಶದಲ್ಲಿ ಧೂಮಪಾನ ಮಾಡಿದರೆ ದಂಡ ವಿಧಿಸಲಾಗುತ್ತದೆ’ ಎಂಬ ಜಾಗೃತಿ ಫಲಕ ಅಳವಡಿಸಬೇಕು. ಆದರೆ ಶೇ.73.77ರಷ್ಟು ಶಾಲೆಗಳ ಮತ್ತು ಶೇ. 60ರಷ್ಟು ಕಾಲೇಜುಗಳ ವ್ಯಾಪ್ತಿಯಲ್ಲಷ್ಟೇ ಇದು ಇದೆ.
Advertisement
ನೋ ಸ್ಮೋಕಿಂಗ್ ವಲಯಶೇ. 98.36ರಷ್ಟು ಶಾಲೆ ಮತ್ತು ಶೇ. 97.5ರಷ್ಟು ಕಾಲೇಜುಗಳಲ್ಲಿ ನೋ ಸ್ಮೋಕಿಂಗ್ ವಲಯವನ್ನು ಮಾಡಲಾಗಿದ್ದು, ಮಟ್ಟಿಗೆ ಸ್ವಲ್ಪ ಭರವಸೆ ಮೂಡಿಸಿದೆ. ಘಟಕವು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ತಂಬಾಕು ನಿಯಂತ್ರಣ ಕಾರ್ನರ್ ಮಾಡುವ ನಿಟ್ಟಿನಲ್ಲಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿದೆ. ವಿನೂತನವಾಗಿ ಡಿಸೈನ್ ಮಾಡಲಾದ ತಂಬಾಕು ಸೇವನೆ ಪರಿಣಾಮಗಳ ಕುರಿತು ಕಿರುಚಿತ್ರಗಳನ್ನು ತೋರಿಸುವುದು, ಜಾಗೃತಿ ಮೂಡಿಸುವುದು ಈ ಕಾರ್ನರ್‌ನ ಉದ್ದೇಶ. ನಗರದಲ್ಲೇ ಹೆಚ್ಚು!
ಜಿಲ್ಲಾ ತಂಬಾಕು ನಿಯಂತ್ರಣ ಘಟಕವು 800ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಸರ್ವೆ ನಡೆಸಿದ್ದು, ಈ ಪೈಕಿ ತಂಬಾಕು ಉತ್ಪನ್ನ ಮಾರಾಟ ಸೇರಿದಂತೆ ಎಲ್ಲವೂ ಮಂಗಳೂರು ನಗರ ಭಾಗದ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲೇ ಕಂಡುಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದ್ದು, ಅಲ್ಲೆಲ್ಲ ತಂಬಾಕು ಮುಕ್ತ ಪರಿಸರವಿದೆ ಎನ್ನುತ್ತಾರೆ ಘಟಕದ ಅಧಿಕಾರಿಗಳು. ನೋಟಿಸ್ ನೀಡಿದ್ದೇವೆ
2003ರಲ್ಲೇ ಕೋಟ್ಪಾ ಕಾಯಿದೆ ಜಾರಿಗೆ ಬಂದರೂ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಷ್ಠಾನ ಶೂನ್ಯವಿತ್ತು. ಘಟಕದ ನಿರಂತರ ಶ್ರಮದ ಬಳಿಕ ಬಹುತೇಕ ಸಾಧನೆಯಾಗಿದೆ. ಸರ್ವೆ ಮಾಡಿದ ವೇಳೆ ಬಹುತೇಕ ಶಾಲೆಗಳ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತಿಲ್ಲ. ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ನೋಟಿಸ್ ನೀಡಿದ್ದೇವೆ. ಉತ್ತರಿಸದಿದ್ದಲ್ಲಿ ಅವರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗುತ್ತದೆ.
- ಡಾ| ಪ್ರೀತಾ, ಜಿಲ್ಲಾ ಸಲಹೆಗಾರರು,
ತಂಬಾಕು ನಿಯಂತ್ರಣ ಘಟಕ, ದ.ಕ. ಜಿಲ್ಲೆ - ಧನ್ಯಾ ಬಾಳೆಕಜೆ