Advertisement

ಗುತ್ತಿಗೆದಾರರ ಶೇ. 40 ಕಮಿಷನ್ ಆರೋಪದ ಬಗ್ಗೆ ತನಿಖೆ ಮಾಡುತ್ತೇವೆ : ಸಿಎಂ

06:49 PM Nov 25, 2021 | Team Udayavani |

ಬೆಂಗಳೂರು : ಗುತ್ತಿಗೆದಾರರು ಪ್ರಧಾನಿಗೆ ಜನರಲ್ ಆಗಿ ಪತ್ರ ಬರೆದಿದ್ದು ಯಾರ ಹೆಸರನ್ನು ನಿರ್ಧಿಷ್ಟವಾಗಿ ಉಲ್ಲೇಖ ಮಾಡಿಲ್ಲವಾದರೂ ನಾವು ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಮ್ಮ ಅವಧಿಯಲ್ಲಿ ಯಾವುದಾದರೂ ಟೆಂಡರ್ ಪ್ರಕ್ರಿಯೆಯಲ್ಲಿ ಏನಾದರೂ ದೋಷ ಆಗಿದ್ದರೂ ಪರಿಷ್ಕರಣೆ ಮಾಡುತ್ತೇವೆ. ನನ್ನ ಅವಧಿಯಲ್ಲಿ ಅಥವಾ ಅದಕ್ಕಿಂತ ಮೊದಲು ಆಗಿದ್ದರೂ ಪರಿಷ್ಕರಣೆ ಮಾಡುತ್ತೇವೆ. ನಮ್ಮದು ಪಾರದರ್ಶಕ ಸರಕಾರ ಎಂದರು.

ರಾಜ್ಯ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದು, ಗುತ್ತಿಗೆಗಳಿಗೆ ಶೇ. 40 ರಷ್ಟು ಕಮಿಷನನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನೀಡಬೇಕಾಗಿದ್ದು,ಇಷ್ಟು ಪ್ರಮಾಣದ ಕಮಿಷನ್​ ಕೊಟ್ಟು ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next