Advertisement

ಶೇ. 100 ತೆರಿಗೆ ಸಂಗ್ರಹ: ದ.ಕ. ಜಿಲ್ಲೆಯ ಸಾಧಕ ಗ್ರಾ.ಪಂ.ಗಳ ಸಂಖ್ಯೆಯಲ್ಲಿ ಏರಿಕೆ

02:45 AM Apr 22, 2019 | Team Udayavani |

ಬಜಪೆ: ನೂರಕ್ಕೆ ನೂರರಷ್ಟು ತೆರಿಗೆ ವಸೂಲಾತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ನಾಲ್ಕು ಗ್ರಾ.ಪಂ.ಗಳು ಈ ಸಾಧನೆ ಮಾಡಿವೆ. ಒಟ್ಟು ತೆರಿಗೆ ಸಂಗ್ರಹದಲ್ಲಿ ಜಿಲ್ಲೆಯಲ್ಲಿ ಸ್ವಲ್ಪ ಪ್ರಮಾಣದ ಹೆಚ್ಚಳ ಕಂಡುಬಂದಿದೆ.

Advertisement

ಕಳೆದ ವರ್ಷ 7 ಗ್ರಾ.ಪಂ.ಗಳು ಶೇ.100ರಷ್ಟು ತೆರಿಗೆ ವಸೂಲಿ ಮಾಡಿದ್ದು, 2018-19ನೇ ಸಾಲಿನಲ್ಲಿ ಈ ಸಂಖ್ಯೆ 11ಕ್ಕೆ ಏರಿದೆ. ವಿಶೇಷವೆಂದರೆ ಕಡಿಮೆ ಕಟ್ಟಡಗಳಿರುವ ಗ್ರಾ.ಪಂ.ಗಳ ತೆರಿಗೆ ಸಂಗ್ರಹ‌ ಶೇಕಡಾವಾರು ಪ್ರಮಾಣ ಹೆಚ್ಚಳವಾಗಿದೆ.

ಈ ಬಾರಿ 230 ಗ್ರಾ.ಪಂ.ಗಳಲ್ಲಿ 143 ಗ್ರಾ. ಪಂ.ಗಳು ಶೇ. 80ಕ್ಕಿಂತ ಹೆಚ್ಚು ಮತ್ತು 85 ಶೇ. 80ಕ್ಕಿಂತ ಕಡಿಮೆ, ಮಂಗಳೂರು ತಾಲೂಕಿನ 2 ಗ್ರಾ.ಪಂ.ಗಳು ಶೇ. 40ಕ್ಕಿಂತ ಕಡಿಮೆ ಸಾಧನೆ ತೋರಿವೆ. 4,32,646 ಆಸ್ತಿಗಳಿಗೆ 23,99,22,180 ರೂ. ತೆರಿಗೆ ಸಂಗ್ರಹ ಆಗಬೇಕಿತ್ತು. ಆದರೆ, 18,21,92,000 ರೂ. ಸಂಗ್ರಹವಾಗಿ ಶೇ. 75.93 ಸಾಧನೆ ಆಗಿದೆ.

ಕಳೆದ ವರ್ಷ 104 ಗ್ರಾ.ಪಂ.ಗಳು ಶೇ. 80ಕ್ಕಿಂತ ಹೆಚ್ಚು, 111 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ, 11 ಗ್ರಾ.ಪಂ.ಗಳು ಶೇ. 60ಕ್ಕಿಂತ ಕಡಿಮೆ, 4 ಗ್ರಾ.ಪಂ.ಗಳು ಶೇ. 40ಕ್ಕಿಂತ ಕಡಿಮೆ ತೆರಿಗೆ ಸಂಗ್ರಹಿಸಿದ್ದವು. 4,24,830 ಆಸ್ತಿಗಳಿಗೆ 22,09,68,720 ರೂ. ಸಂಗ್ರಹ ಆಗಬೇಕಿದ್ದು, 16,43,78,250 ರೂ. ಸಂಗ್ರಹವಾಗಿ ಶೇ. 74.38 ಸಾಧನೆ ಅಗಿತ್ತು.

ತಾಲೂಕುವಾರು ವಿವರ
ಬೆಳ್ತಂಗಡಿ: 48 ಗ್ರಾ.ಪಂ.ಗಳ 81,202 ಆಸ್ತಿಯಲ್ಲಿ 4,09,60,150 ರೂ. ಬೇಡಿಕೆಯಲ್ಲಿ 3,29,50,940 ರೂ. (ಶೇ. 80.44) ವಸೂಲಾಗಿದೆ. 35 ಗ್ರಾ.ಪಂ.ಗಳು ಶೇ. 80ಕ್ಕಿಂತ ಹೆಚ್ಚು,13 ಗ್ರಾ.ಪಂ. ಶೇ. 80ಕ್ಕಿಂತ ಕಡಿಮೆ ಸಾಧನೆ ತೋರಿವೆ. ಕಳೆದ ಬಾರಿ 79,799 ಆಸ್ತಿ ತೆರಿಗೆಯಲ್ಲಿ 3,44,86,690 ರೂ. ಬೇಡಿಕೆಯಲ್ಲಿ 2,57,58,290 ರೂ. (ಶೇ.74.69) ಸಂಗ್ರಹವಾಗಿತ್ತು. 14 ಗ್ರಾ.ಪಂ.ಗಳು ಶೇ. 80ಕ್ಕಿಂತ ಹೆಚ್ಚು, 28 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ, 4 ಗ್ರಾ.ಪಂ.ಗಳು ಶೇ.60ಕ್ಕಿಂತ ಕಡಿಮೆ,2 ಗ್ರಾ.ಪಂ.ಗಳು ಶೇ. 40ಕ್ಕಿಂತ ಕಡಿಮೆ ತೆರಿಗೆ ವಸೂಲಾತಿ ಮಾಡಿದ್ದವು.

Advertisement

ಬಂಟ್ವಾಳ
58 ಗ್ರಾ.ಪಂ.ಗಳ 1,05,146 ಆಸ್ತಿಯ 4,51,04,650 ರೂ. ಬೇಡಿಕೆಯಲ್ಲಿ 3,62,60,550 ರೂ. (ಶೇ. 80.39) ವಸೂಲಾಗಿದೆ. 36 ಗ್ರಾ.ಪಂಗಳು ಶೇ. 80ಕ್ಕಿಂತ ಹೆಚ್ಚು, 22 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ ತೆರಿಗೆ ಸಂಗ್ರಹ ಮಾಡಿವೆ. ಕಳೆದ ಬಾರಿ 1,03,403 ಅಸ್ತಿಗಳ 4,15,06,450 ರೂ. ಬೇಡಿಕೆಯಲ್ಲಿ 3,21,45,340 ರೂ. (ಶೇ. 77.44) ವಸೂಲಾಗಿತ್ತು. 23 ಗ್ರಾ.ಪಂ.ಗಳು ಶೇ. 80ಕ್ಕಿಂತ ಹೆಚ್ಚು, 30 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ, 5 ಗ್ರಾ.ಪಂ.ಗಳು ಶೇ. 60ಕ್ಕಿಂತ ಕಡಿಮೆ ಸಂಗ್ರಹ ಮಾಡಿದ್ದವು.

ಮಂಗಳೂರು
55 ಗ್ರಾ.ಪಂ.ಗಳ 1,36,411 ಆಸ್ತಿಯ 10,72,90,290 ರೂ. ಬೇಡಿಕೆಯಲ್ಲಿ 7,35,29,300 ರೂ. (ಶೇ. 68.53) ಸಂಗ್ರಹವಾಗಿದೆ. 17 ಗ್ರಾ.ಪಂ.ಗಳು ಶೇ. 80ಕ್ಕಿಂತ ಹೆಚ್ಚು, 36 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ, 2 ಗ್ರಾ.ಪಂ.ಗಳು ಶೇ. 40ಕ್ಕಿಂತ ಕಡಿಮೆ ತೆರಿಗೆ ಸಂಗ್ರಹ ಮಾಡಿವೆ.

ಕಳೆದ ಬಾರಿ 1,33,152 ಅಸ್ತಿಗಳಲ್ಲಿ 10,28,49,370 ರೂ.ಗಳ ಬೇಡಿಕೆಯಲ್ಲಿ 7,11,55,780 ರೂ. (ಶೇ. 69.18) ವಸೂಲಾಗಿದೆ. 17 ಗ್ರಾ.ಪಂ.ಗಳು ಶೇ. 80ಕ್ಕಿಂತ ಜಾಸ್ತಿ, 34 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ, ಕ್ರಮವಾಗಿ 2 ಗ್ರಾ.ಪಂ.ಗಳು ಶೇ. 60ಕ್ಕಿಂತ ಹಾಗೂ ಶೇ. 40ಕ್ಕಿಂತ ಕಡಿಮೆ ತೆರಿಗೆ ಸಂಗ್ರಹ ಮಾಡಿದ್ದವು.

ಪುತ್ತೂರು
41 ಗ್ರಾ.ಪಂ.ಗಳ 71,854 ಆಸ್ತಿಯಲ್ಲಿ 2,50,27,600 ರೂ. ಬೇಡಿಕೆಯಲ್ಲಿ 2,12,33,240 ರೂ. (ಶೇ. 84.39) ವಸೂಲಾಗಿದೆ. 32 ಗ್ರಾ.ಪಂ.ಗಳು ಶೇ. 80ಕ್ಕಿಂತ ಜಾಸ್ತಿ, 9 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ ತೆರಿಗೆ ಸಂಗ್ರಹ ಮಾಡಿವೆ. ಕಳೆದ ಸಾಲಿನಲ್ಲಿ 70,907 ಅಸ್ತಿಯಲ್ಲಿ 2,35,63,330 ರೂ. ಬೇಡಿಕೆಯಲ್ಲಿ 1,96,85,740 ರೂ. (ಶೇ. 83.54) ವಸೂಲಾಗಿತ್ತು. 27 ಗ್ರಾ.ಪಂ.ಗಳು ಶೇ. 80ಕ್ಕಿಂತ ಜಾಸ್ತಿ, 14 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ ಸಂಗ್ರಹ ಮಾಡಿದ್ದವು.

ಸುಳ್ಯ
28 ಗ್ರಾಮ ಪಂಚಾಯತ್‌ಗಳ 38,033 ಆಸ್ತಿಯ 2,15,39,490 ರೂ. ಬೇಡಿಕೆಯಲ್ಲಿ 1,82,17,960 ರೂ. (ಶೇ. 84.57) ವಸೂಲಾಗಿದೆ. 23 ಗ್ರಾ.ಪಂ.ಗಳು ಶೇ. 80ಕ್ಕಿಂತ ಹೆಚ್ಚು, 5 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ ತೆರಿಗೆ ಸಂಗ್ರಹಿಸಿವೆ. ಕಳೆದ ಸಾಲಿನಲ್ಲಿ 37,569 ಅಸ್ತಿಯ 1,85,62,880 ರೂ. ಬೇಡಿಕೆಯಲ್ಲಿ 1,56,33,100 ರೂ. (ಶೇ. 84.21) ವಸೂಲಾಗಿದೆ. 23 ಗ್ರಾ.ಪಂ.ಗಳು ಶೇ. 80ಕ್ಕಿಂತ ಹೆಚ್ಚು, 5 ಗ್ರಾ.ಪಂ.ಗಳು ಶೇ. 80ಕ್ಕಿಂತ ಕಡಿಮೆ ಸಂಗ್ರಹ ಮಾಡಿದ್ದವು.

ಜಿಲ್ಲೆಯಲ್ಲಿ 2017-18ರಿಂದ 2018-19ರ ನಡುವೆ ಆಸ್ತಿಯಲ್ಲಿ 7,816 ಜಾಸ್ತಿಯಾಗಿರುವುದು ಕಂಡು ಬಂದಿದೆ. ಕಳೆದ ಸಾಲಿಗಿಂತ ಈ ಬಾರಿ 1,89,53,460 ರೂಪಾಯಿ ತೆರಿಗೆಯಲ್ಲಿ ಬೇಡಿಕೆ ಜಾಸ್ತಿ ಇದ್ದು, 1,78,13,750 ರೂಪಾಯಿ ಹೆಚ್ಚು ವಸೂಲಾತಿಯಾಗಿದ್ದು ಕಂಡು ಬಂದಿದೆ. ಆಸ್ತಿಯ ಸಂಖ್ಯೆಯಲ್ಲಿ ಮಂಗಳೂರು ತಾಲೂಕಿನಲ್ಲಿ 3,259, ಬಂಟ್ವಾಳ ತಾಲೂಕಿನಲ್ಲಿ 1,743, ಬೆಳ್ತಂಗಡಿ ತಾಲೂಕಿನಲ್ಲಿ 1,403 ಕಟ್ಟಡ, ಪುತ್ತೂರಿನಲ್ಲಿ 947 ಮತ್ತು ಸುಳ್ಯದಲ್ಲಿ 464 ಗಣನೀಯ ಏರಿಕೆ ಆಗಿದೆ.

ಮತ್ತೆ ಸುಳ್ಯ-ಪುತ್ತೂರು ಗ್ರಾ.ಪಂ.ಗಳ ಮೇಲುಗೈ
ಸುಳ್ಯ ತಾಲೂಕಿನ ಕಲ್ಮಡ್ಕ, ಕಳಂಜ, ಕೊಡಿಯಾಲ, ದೇವಚಳ್ಳ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಪುತ್ತೂರಿನ ಕಾಡ್ಯ ಕೊಣಾಜೆ ಮತ್ತೆ ಶೇ. 100ರಷ್ಟು ಸಾಧನೆ ತೋರಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ. ಕಳೆದ ವರ್ಷವೂ ಈ ಎಲ್ಲ ಗ್ರಾ.ಪಂ.ಗಳು ನೂರಕ್ಕೆ ನೂರರಷ್ಟು ತೆರಿಗೆ ಸಂಗ್ರಹಿಸಿದ್ದವು. ಮಂಗಳೂರಿನ ಬಾಳ, ಮಲ್ಲೂರು, ಬಂಟ್ವಾಳದ ಕಾವಳಪಡೂರು, ಬೆಳ್ತಂಗಡಿಯ ಮುಂಡಾಜೆ ಗ್ರಾ.ಪಂ.ಗಳು ಈ ಬಾರಿ ಸಾಧಕರ ಪಟ್ಟಿಗೆ ಸೇರಿವೆ.

– ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next