Advertisement
ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಧ್ಯಕ್ಷತೆಯಲ್ಲಿ ಪೆರಾಜೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಸ್ಥಳೀಯ ಪೆರಾಜೆ ಮಠದ ಸನಿಹ ವೈನ್‌ಶಾಪ್ ತೆರೆಯುವ ಯತ್ನದ ಬಗ್ಗೆ ಪ್ರಸ್ತಾಪಿಸಿ “ನೆಮ್ಮದಿಯಿಂದ ಬದುಕುವ ಗ್ರಾಮಕ್ಕೆ ಸಮಸ್ಯೆಯನ್ನು ತಂದು ಶಾಂತಿಯನ್ನು ಕದಡಬೇಡಿ. ನಮ್ಮ ಗ್ರಾಮದಲ್ಲಿ ಅಮಲು ಪದಾರ್ಥ ಮಾರಾಟಕ್ಕೆ ಅವಕಾಶ ನೀಡಬೇಡಿ. ಒಳ್ಳೆಯ ಊರಿನಲ್ಲಿ ಅನಪೇಕ್ಷಿತ ವಿಚಾರಕ್ಕೆ ಅನುಮತಿ ಬೇಡ’ ಎಂದು ಒತ್ತಾಯಿಸಿದರು. “ವೈನ್‌ಶಾಪ್ ಉದ್ದೇಶಕ್ಕೆ ಅನುಮತಿ ನೀಡುವುದಿಲ್ಲ’ ಎಂದು ನಿರ್ಣಯಿಸಲಾಯಿತು.
ಪೆರಾಜೆ ಗ್ರಾಮದ ಕೆಲವು ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಶಾಲಾ ಮಕ್ಕಳಿಗೆ ಇನ್ನೂ ಕೂಡ ಪಠ್ಯ ಪುಸ್ತಕ ಸಿಗದೇ ಮಕ್ಕಳು ತೊಂದರೆಗೊಳಪಟ್ಟಿದ್ದಾರೆ ಎಂದು ಶಿಕ್ಷಣ ಇಲಾಖೆಯ ಬಗ್ಗೆ ಆರೋಪ ವ್ಯಕ್ತಪಡಿಸಿದರು. ಪಾಲ್ಗೊಳ್ಳುವಿಕೆ ಮುಖ್ಯ
ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಮಾತನಾಡಿ, ಇಲ್ಲಿನ ಗ್ರಾಮದ ಹಿರಿಯ ವ್ಯಕ್ತಿಗಳಿಗೆ ಸಾಕಷ್ಟು ಅನುಭವವಿದೆ. ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಜನರು ಮಾಡುತ್ತಿದ್ದಾರೆ. ಗ್ರಾಮಸಭೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಮುಖ್ಯವಾಗಿರುತ್ತದೆ. ಕಾನೂನಿಗೆ ವಿರೋಧವಾಗಿರುವಂತಹ ಯಾವುದೇ ಕೆಲಸಗಳನ್ನು ಗ್ರಾಮದಲ್ಲಿ ಮಾಡುವುದಿಲ್ಲ. ಪ್ರತಿ ಮನೆಯವರು ಸ್ವತ್ಛತೆಯ ಬಗ್ಗೆ ಹೆಚ್ಚು ನಿಗಾ ವಹಿಸಿದರೆ ಸ್ವತ್ಛ ಗ್ರಾಮವಾಗುವುದಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಗ್ರಾಮ ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು ಎಂದರು.
Related Articles
Advertisement