Advertisement

ಪೇರಡ್ಕ ಸೇತುವೆ ಪರ್ಯಾಯ ಬಳಕೆ

03:43 PM May 27, 2019 | Team Udayavani |

ಅರಂತೋಡು: ಅರಂತೋಡು – ತೊಡಿಕಾನ ಸಂಪರ್ಕದ ಪಯಸ್ವಿನಿ ಹೊಳೆಯ ಸೇತುವೆ ಶಿಥಿಲಗೊಂಡಿದ್ದು, ವಾಹನ ಸಂಚಾರಕ್ಕೆ ಅಸಾಧ್ಯವಾದರೆ ಸಮೀಪದ ಪೇರಡ್ಕ ಸೇತುವೆಯನ್ನು ಬಳಸಿಕೊಳ್ಳಬಹುದಾಗಿದೆ.

Advertisement

ಸುಮಾರು 25 ವರ್ಷಗಳ ಹಿಂದೆ ಅರಂತೋಡು ಸಮೀಪದ ಪಯಸ್ವಿನಿ ಹೊಳೆಗೆ ಅರಂತೋಡು-ತೊಡಿಕಾನ ಸಂಪರ್ಕ ಹೊಳೆಗೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಸೇತುವೆ ಶಿಥಿಲಗೊಂಡಿದ್ದು ಸ್ಥಳೀಯರಿಗೆ ಮುಂದಿನ ಕೆಲ ವರ್ಷದಲ್ಲಿ ಸೇತುವೆ ಮುರಿದು ಬಿದ್ದರೆ ಸಂಪರ್ಕ ಅಸಾಧ್ಯವಾಗಬಹುದು ಎನ್ನುವ ಭೀತಿ ಎದುರಾಗಿದೆ. ಅರಂತೋಡು- ತೊಡಿಕಾನ ಸಂಪರ್ಕದ ಅರಂತೋಡು ಸಮೀಪ ನಿರ್ಮಿಸಲಾದ ಸೇತುವೆ ತೊಡಿಕಾನ ಗ್ರಾಮದವರಿಗೆ ವರದಾನವಾಗಿ ಪರಿಣಮಿಸಿತು.

ದೇಗುಲ ಸಂಪರ್ಕದ ಸೇತುವೆ
ತೊಡಿಕಾನದಲ್ಲಿ ಸುಳ್ಯ ಸೀಮೆ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಇದ್ದು, ಈ ಸೇತುವೆಯ ಮೂಲಕ ಸಂಪರ್ಕ ಮಾಡುತ್ತಾರೆ. ಇದೀಗ ಸೇತುವೆಯಲ್ಲಿ ಪ್ರಯಾಣ ಅಸಾಧ್ಯವಾದರೆ ಪರ್ಯಾಯ ಮಾರ್ಗಗಳು ಇವೆ. ಪಯಸ್ವಿನಿ ಹೊಳೆಗೆ ಪೇರಡ್ಕ ಎನ್ನುವಲ್ಲಿ ಕೆಲವು ವರ್ಷಗಳ ಹಿಂದೆ ದೊಡ್ಡ ಸೇತುವೆ ನಿರ್ಮಾಣ ಮಾಡಲಾಗಿದೆ. ಇದು ತೊಡಿಕಾನವನ್ನು ಸಂಪರ್ಕಿಸುತ್ತಿದ್ದು ಈ ಮಾರ್ಗವನ್ನು ಬಳಸಿಕೊಳ್ಳಬಹುದು.

ರಸ್ತೆ ಅಭಿವೃದ್ದಿಗೊಂಡಿಲ್ಲ
ಪೇರಡ್ಕ ಸೇತುವೆ ನಿರ್ಮಾಣ ಸಮಯದಲ್ಲಿ ಗೂನಡ್ಕದಿಂದ ಪೇರಡ್ಕ ತನಕ ರಸ್ತೆ ಅಭಿವೃದ್ಧಿ ಮಾಡಲಾಗಿದೆ.ಅಲ್ಲಿಂದ ತೊಡಿಕಾನಕ್ಕೆ ಸಂಪರ್ಕ ಮಾಡಲು ಅಡ್ಯಡ್ಕ ತನಕ ರಸ್ತೆ ಅಭಿವೃದ್ಧಿ ಮಾಡಬೇಕಾಗಿದೆ. ರಸ್ತೆ ಅಭಿವೃದ್ಧಿ ಮಾಡಿದರೆ ಇದು ಒಂದು ಪರ್ಯಾಯ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ.

ಶೀಘ್ರ ಕ್ರಮ

ಪಯಸ್ವಿನಿ ಹೊಳೆಯ ಸೇತುವೆ ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದ್ದು ಈ ವಿಷಯದ ಕುರಿತು ಸಾಮಾನ್ಯಸಭೆಯಲ್ಲಿ ಚರ್ಚಿಸಿ ಸಂಬಂಧ ಪಟ್ಟ ಇಲಾಖೆಯ ಕ್ರಮ ಕೈಗೊಳ್ಳಲು ತಿಳಿಸಲಾಗುವುದು.ಸಮೀಪದ ಪೇರಡ್ಕ ಸೇತುವೆಯು ಸುಸಜ್ಜಿತವಾಗಿದ್ದು ತುರ್ತು ಸಂದರ್ಭದಲ್ಲಿ ಈ ಸೇತುವೆಯನ್ನು ಬಳಸಿಕೊಳ್ಳಬಹುದಾಗಿದೆ.
ನೀಲಾವತಿ ಕೊಡಂಕೇರಿ ಅಧ್ಯಕ್ಷರು, ಗಾ.ಪಂ ಅರಂತೋಡು

ದುರಸ್ತಿ ಮಾಡಬೇಕು

ಪೇರಡ್ಕ ಸೇತುವೆ ಉತ್ತಮ ವಾಗಿದ್ದು, ಇದನ್ನು ತೊಡಿಕಾನ ಸಂಪರ್ಕದ ಪರ್ಯಾಯ ಮಾರ್ಗ ವಾಗಿ ಉಪಯೋಗ ಮಾಡಬಹುದು. ಈ ಭಾಗ ದಲ್ಲಿ ರಸ್ತೆ ಹದಗೆಟ್ಟಿದ್ದು ಅದನ್ನು ದುರಸ್ತಿ ಮಾಡಬೇಕು. ರಸ್ತೆ ಅಭಿವೃದ್ಧಿ ಯಾದರೆ ದೊಡ್ಡ ವಾಹನಗಳು ಕೂಡ ಸಂಚರಿಸಬಹುದು.
– ವಸಂತ್‌ ಭಟ್ ತೊಡಿಕಾನ, ಸೇತುವೆಗಾಗಿ ಹೋರಾಟ ಮಾಡುತ್ತಿರುವವರು

Advertisement

ತೇಜೇಶ್ವರ್‌ ಕುಂದಲ್ಪಾಡಿ
Advertisement

Udayavani is now on Telegram. Click here to join our channel and stay updated with the latest news.

Next