Advertisement
ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಜು.31ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರ 1.50 ರೂ.ಗೆ ಹೆಚ್ಚಿಸಲಾಗಿದೆ. ಆದರೆ ಖರೀದಿ ದರ ಹೆಚ್ಚಿಸಿಲ್ಲ ಎಂದು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ನುಡಿದರು.
Related Articles
Advertisement
2018-19ನೇ ಸಾಲಿನಲ್ಲಿ ಸಿನಕ್ಕೆ 6,71,712 ಲೀಟರ್ ಹಾಲು ಶೇಖರಣೆಯಾಗಿತ್ತು. ಜೂ.18 ರಂದು 8,01,313 ಲೀಟರ್ ಹಾಲು ಶೇಖರಿಸಿ ಸಾರ್ವಕಾಲಿಕ ದಾಖಲೆ ನಿರ್ಮಿ ಸಲಾಗಿದೆ. ರಾಜ್ಯದ ಇತರ ಹಾಲು ಒಕ್ಕೂಟ ಗಳು ನೀಡುತ್ತಿರುವ ದರಗಳಿಗಿಂತ ಇದು ಹೆಚ್ಚಿನದಾಗಿದೆ. ಹಾಗೂ ಬೆಂಗಳೂರು ಹಾಲು ಒಕ್ಕೂಟದ ದರಕ್ಕೆ ಸಮಾನಾಂತರವಾಗಿದೆ ಎಂದರು. ಒಕ್ಕೂಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿಕೊಂಡಿರುವುದರಿಂದ ಮತ್ತು ಮಾರುಕಟ್ಟೆ ವಿಸ್ತರಿಸಿರುವುದರಿಂದ ಅಧಿಕ ಹಾಲು ಶೇಖರಣೆಯಾದರೂ ಡೇರಿಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿ ರುವುದಿಲ್ಲ. ಹಾಲು ಉತ್ಪಾದಕರಿಗೆ ಕಾಲಕಾಲಕ್ಕೆ ದೊರೆಯಬಹುದಾದ ಎಲ್ಲಾ ಸೌಲಭ್ಯ ಒದಗಿ ಸಲಾಗುತ್ತಿದ್ದು, ಹಾಲು ಉತ್ಪಾದಕರು ಈ ಸೌಲಭ್ಯ ಸಮರ್ಪಕವಾಗಿ ಬಳಸಿ ಆರ್ಥಿಕವಾಗಿ ಸದೃಢವಾಗಬೇಕು ಎಂದು ತಿಳಿಸಿದರು.
70 ಸಾವಿರ ರಾಸುಗಳಿಗೆ ವಿಮೆ: ಹಾಲು ಉತ್ಪಾದಕ ಸದಸ್ಯರ 70 ಸಾವಿರ ರಾಸುಗಳಿಗೆ 5ಕೋಟಿ ರೂ. ವೆಚ್ಚದಲ್ಲಿ ವಿಮಾ ಸೌಲಭ್ಯ ಮತ್ತು ಒಟ್ಟು 70 ಸಾವಿರ ಸದಸ್ಯರಿಗೆ ಗುಂಪು ವಿಮಾ ಯೋಜನೆಯಡಿ 6 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಸದಸ್ಯರು ಮತ್ತು ಸಿಬ್ಬಂದಿಗೆ 1ಲಕ್ಷ ರೂ. ವಿಮಾ ಸೌಲಭ್ಯ ಮತ್ತು ರೈತರು ಮರಣ ಹೊಂದಿದಲ್ಲಿ ಕಲ್ಯಾಣ ಟ್ರಸ್ಟ್‌ನಿಂದ 25 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದರು. ಒಕ್ಕೂಟದ ಮಾಜಿ ಅಧ್ಯಕ್ಷ ಚಂದ್ರಶೇಖರ್, ನಿರ್ದೇಶಕ ಈಶ್ವರಯ್ಯ, ರೇಣುಕಾ ಪ್ರಸಾದ್, ಶ್ರೀನಿವಾಸ್, ವಿಶ್ವನಾಥ್, ಡಾ. ಸುಬ್ಬರಾಯ್‌ಭಟ್, ರಾಜೇಂದ್ರ, ಸತ್ಯಮೂರ್ತಿ ಮತ್ತಿತರರಿದ್ದರು.