Advertisement

ಪೆಪ್ಸೊಡೆಂಟ್ ಟ್ಯೂಬ್‌ಗಳು ಮರುಬಳಕೆಗೆ ಸಿದ್ಧ!

01:40 PM May 23, 2021 | Team Udayavani |

ನವದೆಹಲಿ: ಪ್ಲಾಸ್ಟಿಕ್‌ ಜಗತ್ತಿಗೆ ಅತ್ಯಂತ ಅಪಾಯಕಾರಿಯಾದಂತಹ ಒಂದು ವಸ್ತು. ಅದು ಎಲ್ಲಕಡೆ ಆವರಿಸಿಕೊಂಡು ಕಾಡುತ್ತಿದೆ. ಜಗತ್ತನ್ನುಪ್ಲಾಸ್ಟಿಕ್‌ಮುಕ್ತ ಮಾಡುವ ದೃಷ್ಟಿಯಿಂದ ಯುನಿಲಿವರ್‌ ಒಂದು ಕ್ರಾಂತಿಕಾರಕ ಕ್ರಮ ತೆಗೆದುಕೊಂಡಿದೆ.

Advertisement

 ಪೆಪ್ಸೊಡೆಂಟ್, ಕ್ಲೋಸ್‌ಅಪ್‌ನಂತಹ ಜನಪ್ರಿಯ ಟೂಥ್‌ಪೇಸ್ಟ್‌ಗಳನ್ನು ಉತ್ಪಾದಿಸುವ ಯುನಿಲೆವರ್‌, ಇನ್ನು ಮುಂದೆ ಮರುಬಳಕೆ ಮಾಡಬಹುದಾದ ಟ್ಯೂಬ್‌ಗಳಲ್ಲಿ ಪೇಸ್ಟ್‌ ಅನ್ನು ತುಂಬಿ ಮಾರಲಿದೆ. ಇಲ್ಲಿಯವರೆಗೆ ಪೇಸ್ಟ್‌ ಟ್ಯೂಬ್‌ಗಳನ್ನು ಪ್ಲಾಸ್ಟಿಕ್‌ಮತ್ತು ಅಲ್ಯುಮಿನಿಯಂ ಮಿಶ್ರಣದೊಂದಿಗೆ ತಯಾರಿಸಲಾಗುತ್ತಿತ್ತು. ಇದರಿಂದ ಈ ಟ್ಯೂಬ್‌ಗಳ ಸಂಸ್ಕರಣೆ ಮತ್ತು ಮರುಬಳಕೆ ಸಾಧ್ಯವಾಗುತ್ತಿರಲಿಲ್ಲ. ಇನ್ನು ಟ್ಯೂಬ್‌ಗಳನ್ನು ಹೆಚ್ಚು ಸಾಂದ್ರವಾಗಿರುವ ಪಾಲಿಥೈಲಿನ್‌ನಿಂದ ತಯಾರಿಸಲಾಗುತ್ತದೆ.

ಇದನ್ನು ಯಾವಾಗಲೂ ಸಂಸ್ಕರಣೆಗೊಳಪಡಿಸಬಹುದು. ಈಗಾಗಲೇ ಫ್ರಾನ್ಸ್‌ನಲ್ಲಿ ಇದನ್ನು ಜಾರಿ ಮಾಡಲಾಗಿದೆ. ಇದೇ ವರ್ಷ ಭಾರತದ ಮಾರುಕಟ್ಟೆಗೆ ಈ ರೀತಿಯ ಟ್ಯೂಬ್‌ಗಳು ಪ್ರವೇಶಿಸಲಿವೆ.2025ರ ಹೊತ್ತಿಗೆ ಜಗತ್ತಿನ ಎಲ್ಲ ದೇಶಗಳಲ್ಲಿ ಮರುಬಳಕೆ ಮಾಡಬಹುದಾದ ಟ್ಯೂಬ್‌ಗಳಲ್ಲಿ ಪೇಸ್ಟ್‌ ಮಾರುವುದು ಯುನಿಲಿವರ್‌ ಯೋಜನೆ.

Advertisement

Udayavani is now on Telegram. Click here to join our channel and stay updated with the latest news.

Next