Advertisement

ಶೂಟಿಂಗ್‌ನಲ್ಲಿ ಪೆಪ್ಪೆರೆರೆ ಪೆರೆರೆರೆ

07:18 AM Jan 03, 2019 | |

ಖ್ಯಾತ ನಟ ಶೋಭರಾಜ್‌ ಪಾವೂರು ಆ್ಯಕ್ಷನ್‌ ಕಟ್‌ ಹೇಳುವ ‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನೆಮಾ ಬಿರುಸಿನ ಶೂಟಿಂಗ್‌ನಲ್ಲಿದೆ. ತುಳು ರಂಗಭೂಮಿ, ಸಿನೆಮಾ, ಕನ್ನಡ ಸಿನೆಮಾ, ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಶೋಭರಾಜ್‌ ಈಗ ಪೆಪ್ಪೆರೆರೆ ಪೆರೆರೆರೆ ಸಿನೆಮಾವನ್ನು ಕೈಗೆತ್ತಿಕೊಂಡು ಶೂಟಿಂಗ್‌ ನಡೆಸುತ್ತಿದ್ದಾರೆ. ಸದ್ದು ಮಾಡದೆ ಶೂಟಿಂಗ್‌ ಮಾಡುತ್ತಿರುವ ಈ ಸಿನೆಮಾ ಈಗಾಗಲೇ 10 ದಿನಗಳ ಚಿತ್ರೀಕರಣ ಪೂರ್ಣಗೊಳಿಸಿದೆ. ಇನ್ನೂ ಹೆಚ್ಚಾ ಕಡಿಮೆ 15 ದಿನದ ಶೂಟಿಂಗ್‌ ಬಾಕಿ ಇದೆ. 

Advertisement

ಅಂದಹಾಗೆ ಕರಾವಳಿಯ ಸೂಪರ್‌ ಸ್ಟಾರ್‌ ಗಳಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ, ಸಾಯಿಕೃಷ್ಣ, ಜೆ.ಪಿ. ತೂಮಿನಾಡ್‌ ಸಹಿತ ಹಲವು ಕಲಾವಿದರು ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚೈತ್ರ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಶೋಭರಾಜ್‌ ಆ್ಯಕ್ಷನ್‌ ಕಟ್‌ ಹೇಳುವ ಜತೆಗೆ ಸಿನೆಮಾದಲ್ಲಿ ಬಣ್ಣಹಚ್ಚಿದ್ದಾರೆ. ಗುರು ಬಾಯಾರ್‌ ಸಿನೆಮಾಕ್ಕೆ ಸಂಗೀತ ಒದಗಿಸಿದ್ದಾರೆ.

ಸದ್ಯ ಎಕ್ಕೂರು ಭಾಗದಲ್ಲಿ ಸಿನೆಮಾದ ಶೂಟಿಂಗ್‌ ನಡೆಯುತ್ತಿದೆ. ಸಿನೆಮಾದ ಪೂರ್ಣ ಶೂಟಿಂಗ್‌ ಮುಗಿದ ಬಳಿಕವಷ್ಟೇ ಸಿನೆಮಾದ ಕುರಿತಂತೆ ಚಿತ್ರ ತಂಡ ಮಾತನಾಡಲು ನಿರ್ಧರಿಸಿದೆ. ಹೀಗಾಗಿ ಸಿನೆಮಾದ ಕಥೆ ಏನು? ಟೈಟಲ್‌ಗ‌ೂ ಸಿನೆಮಾದ ಕಥೆಗೂ ಸಂಬಂಧ ಹೇಗೆ? ಪಡೀಲ್‌, ಬೋಳಾರ್‌ ಕಾಂಬಿನೇಷನ್‌ ಹೇಗಿದೆ? ಈ ಎಲ್ಲ ವಿಚಾರಗಳಿಗೆ ಉತ್ತರ ಸದ್ಯಕ್ಕೆ ದೊರಕಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next