Advertisement

ಅನ್‌ಲಾಕ್‌: ಕೋವಿಡ್ ಮರೆತ ಜನ

03:02 PM Jul 06, 2021 | Team Udayavani |

ತುಮಕೂರು: ಕೋವಿಡ್ 2ನೇ ಅಲೆಯ ಪಾಸಿಟಿವಿಟಿ ದರ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಕಲ್ಪತರು ನಾಡು ಸಂಪೂರ್ಣ ಅನ್‌ಲಾಕ್‌ ಆಗಿರುವುದರಿಂದ ಜಿಲ್ಲಾದ್ಯಂತ ಜನ ಕೊರೊನಾ ಮರೆತು ಸೋಮವಾರ ಎಂದಿನಂತೆ ಸಂಚರಿಸಿದರು.

Advertisement

3ನೇ ಅಲೆಯ ಕೋವಿಡ್ ಸೋಂಕಿನ ಭೀತಿ ನಡುವೆಯೇ ಜಿಲ್ಲೆ 2ನೇ ಅಲೆಯ 3ನೇ ಅನ್‌ ಲಾಕ್‌ ಆಗಿದೆ. ಈಗ 3ನೇಅಲೆ ಭೀತಿಯಿದ್ದರೂ ಜಿಲ್ಲೆಯಲ್ಲಿ ಜನ ಕೋವಿಡ್  ಮರೆತು ಮಾಸ್ಕ್ಧರಿಸದೇ ಸಂಚರಿಸಿದರು. ಬಹುತೇಕ ಎಲ್ಲಾ ಅಂಗಡಿಗಳು ತೆರೆದಿದ್ದ ಹಿನ್ನೆಲೆಯಲ್ಲಿ ನಗರಸೇರಿದಂತೆ ಜಿಲ್ಲಾದ್ಯಂತ ಜನ ಕೋವಿಡ್ ನಿಯಮ ಮೀರಿ ಓಡಾಡಿದರು.

ನಿಯಮ ಪಾಲಿಸಿ: ಕೋವಿಡ್‌ ನಿಯಮವನ್ನು ತಪ್ಪದೇ ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಜಿಲ್ಲೆಯಲ್ಲಿ ಕೋವಿಡ್‌ ನಿಯಮ ಪಾಲನೆ ಆಗುತ್ತಿಲ್ಲ. ಜಿಲ್ಲೆಯಲ್ಲಿ ಜನ ಮುಂದೆ 3ನೇ ಅಲೆ ಬರುತ್ತದೆ ಎನ್ನುವುದನ್ನೂ ಮರೆತು ಜನರು ಮಾಸ್ಕ್ ಧರಿಸದೇ ದೈಹಿಕ ಅಂತರ ಕಾಯ್ದು ಕೊಳ್ಳದೇ ಅಡ್ಡಾಡುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ನಿಯಂತ್ರಣಕ್ಕೆ ಮುಂದಾಗಿಲ್ಲ.ಜಿಲ್ಲೆಯಲ್ಲಿ ಕಡಿಮೆಯಾಗಿರುವ ಕೊರೊನಾಹೀಗೇ ಮುಂದುವರಿಯಬೇಕಾದರೆ ತಪ್ಪದೇ ಪ್ರತಿಯೊಬ್ಬರೂ ಕೋವಿಡ್‌ ನಿಯಮ ಪಾಲಿಸಬೇಕಿದೆ.

ರಸ್ತೆಗಳು ಎಲ್ಲೆಲ್ಲೂ ಜಾಮ್‌ ಜಾಮ್‌: ಕೋವಿಡ್ 3ನೇ ಅನ್‌ಲಾಕ್‌ ಆಗಿರುವ ಹಿನ್ನೆಲೆಯಲ್ಲಿ ಸೋಮವಾರ ತುಮಕೂರು ನಗರದ ತುಂಬಾ ವಾಹನಗಳು ತೀವ್ರವಾಗಿ ಸಂಚಾರ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿದ್ದವು. ವಾಹನಗಳು ಅಧಿಕವಾಗಿ ಬೀದಿಗೆ ಬಂದಿದ್ದರಿಂದ ನಗರದ ಬಹುತೇಕ ರಸ್ತೆಗಳು ಜಾಮ್‌ ಆಗಿದ್ದವು. ಒಂದೊಂದು ರಸ್ತೆಗಳಲ್ಲಿ ಅರ್ಧ ಗಂಟೆ ಕಾಯಬೇಕಾದ ಪರಿಸ್ಥಿತಿ ಕಂಡು ಬಂದಿತು.

ತುಮಕೂರು ನಗರದೆಲ್ಲೆಡೆ ನಿರ್ಲಕ್ಷ್ಯದ ಓಡಾಟ :

Advertisement

ಲಾಕ್‌ ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಸೋಂಕು ಮರೆತು ಬೀದಿಗೆ ಬಂದು ನಿರ್ಲಕ್ಷ್ಯದಿಂದ ಜನರ ಓಡಾಟ ಹೆಚ್ಚಿದೆ. ಜಿಲ್ಲೆಯ ಜನ ಸೋಂಕು ಮರೆತು ಎಂದಿನಂತೆ ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಸಾವಿರಾರು ವಾಹನಗಳು ರಸ್ತೆಗಿಳಿದಿವೆ. ಈ ವೇಳೆ ಕೆಲವರು ಮಾಸ್ಕ್ ಧರಿಸದೇ ಕೊರೊನಾ ನಿಯಮ ಬಿಟ್ಟು ಅಡ್ಡಾಡುತ್ತಿದ್ದಾರೆ. ಇವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕದಿದ್ದರೆ ಮತ್ತೆ ಜಿಲ್ಲೆಯಲ್ಲಿ ಸೋಂಕು ಹೆಚ್ಚುವ ಸಾಧ್ಯತೆ ನಿಶ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next