Advertisement
ತಾಲೂಕಿನ ಡ.ಸ.ಹಡಗಲಿ ಗ್ರಾಮದಲ್ಲಿ 20 ಲಕ್ಷ ರೂ. ಅನುದಾನದಲ್ಲಿ 2021-22ನೇ ಸಾಲಿನ ಡ.ಸ. ಹಡಗಲಿ ಗ್ರಾಮದ ಬಳಿಯ ಹಳ್ಳಕ್ಕೆ ಚೆಕ್ ಡ್ಯಾಂ ಮತ್ತು ಬ್ರಿಡ್ಜ್ ನಿರ್ಮಾಣ ಕಾಮಗಾರಿ, 50 ಲಕ್ಷ ರೂ. ವೆಚ್ಚದ ಡ.ಸ. ಹಡಗಲಿ ಹೊನ್ನಾಪುರ ರಸ್ತೆ ಕಾಮಗಾರಿ, 45 ಲಕ್ಷ ರೂ. ವೆಚ್ಚದ ಡ.ಸ. ಹಡಗಲಿ-ಸವಡಿ ಒಳ ರಸ್ತೆ ಕಾಮಗಾರಿ, 20 ಲಕ್ಷ ರೂ. ವೆಚ್ಚದ ಆಶ್ರಯ ಕಾಲೋನಿ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ, 8 ಲಕ್ಷ ರೂ. ವೆಚ್ಚದ ಡ.ಸ. ಹಡಗಲಿ ಗ್ರಾಮದ ಎಸ್‌ಸಿ ಕಾಲೋನಿ ಶಾಲಾ ರಸ್ತೆಯಿಂದ ಹೊಸ ಗ್ರಾಪಂ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, 5 ಲಕ್ಷ ರೂ. ವೆಚ್ಚದ ಗ್ರಾಮದ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ, 5 ಲಕ್ಷ ರೂ. ವೆಚ್ಚದ ಗ್ರಾಮದ ಶ್ರೀ ಮಾರುತಿ ಭಜನಾ ಸಂಘ ಸಮುದಾಯ ಭವನ ನಿರ್ಮಾಣ ಕಾಮಗಾರಿ ಹಾಗೂ ಗುಜಮಾಗಡಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಿಂದ ಹೊಸಮನಿಯವರ ಮನೆ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, 5 ಲಕ್ಷ ರೂ. ವೆಚ್ಚದ ದ್ಯಾಮವ್ವದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
Related Articles
Advertisement
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಹುಲ್ಲೂರ, ಮೀನಾಕ್ಷಮ್ಮ ಚಲವಾದಿ, ವಸಂತ ಮೇಟಿ, ಶಿವಲೀಲಾ ರಂಗಾಪುರ, ರೇಣಮ್ಮ ಕಪ್ಲಿ, ಗಂಗಾದರ ಕಮ್ಮಾರ, ಬಿ.ಎಫ್.ಚೇಗರೆಡ್ಡಿ, ನಿಂಗಪ್ಪ ಮನ್ನೂರ, ಪ್ರದೀಪ ನವಲಗುಂದ. ಎಸ್.ಬಿ. ಮೇಟಿ, ಶರಣಪ್ಪ ಪಟ್ಟೇದ, ಚಿದಾನಂದ ದಾನರೆಡ್ಡಿ, ಗುರಶಾಂತ ಸೂಡಿ, ಸುರೇಶ ಹೂಗಾರ ಇತರರು ಪಾಲ್ಗೊಂಡಿದ್ದರು.
ಬಿಜೆಪಿಗೂ ಮಳೆಗೂ ಅವಿನಾಭಾವ ಸಂಬಂಧ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರವಾಹ ಉಂಟಾಗುತ್ತದೆ. ಅದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಉಂಟಾಗುತ್ತದೆ. -ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವರು