Advertisement

ಜನರ ಸಮಸ್ಯೆ: ನಿರ್ಲಕ್ಷ್ಯವಹಿಸಿದರೆ ಶಿಸ್ತುಕ್ರಮ

12:40 PM Jun 19, 2019 | Suhan S |

ರಾಮನಗರ: ಜನರ ಸೇವೆಗೆಂದೇ ಸರ್ಕಾರಿ ಉದ್ಯೋಗದಲ್ಲಿದ್ದೀರಿ, ಜನರ ಗುಲಾಮರಾಗಿ ಕೆಲಸ ಮಾಡಿ, ನಿರ್ಲಕ್ಷ್ಯವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಶಾಸಕ ಎ.ಮಂಜುನಾಥ್‌ ಎಚ್ಚರಿಸಿದರು.

Advertisement

ತಾಲೂಕಿನ ಬಿಡದಿ ಹೋಬಳಿ ಬೈರಮಂಗಲ ಗ್ರಾಮದ ಸರ್ಕಾರಿ ಕಾಲೇಜಿನ ಆವರಣದಲ್ಲಿ ಬೈರಮಂಗಲ ಗ್ರಾಪಂ ವ್ಯಾಪ್ತಿಯ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಳಂಬ, ನಿರ್ಲಕ್ಷ್ಯ ಬೇಡ ಎಂದರು.

ಸರ್ಕಾರ ಮತ್ತು ಜನರ ನಡುವೆ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಇಬ್ಬರು ಸೇರಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪರಿಹಾರ ಕಂಡುಕೊಳ್ಳಬೇಕು. ಆದರೆ ಕೆಲವು ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಅಂತಹವರನ್ನು ತಾವು ಸಹಿಸುವುದಿಲ್ಲ ಎಂದರು.

ತಾಲೂಕು ಮತ್ತು ಗ್ರಾಮಪಂಚಾಯ್ತಿ ಮಟ್ಟದಲ್ಲಿ ಅಧಿಕಾರಿಗಳು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿದರೆ. ಜನಸಂಪರ್ಕ ಸಭೆಗಳ ಅವಶ್ಯಕತೆಯೇ ಇರೋಲ್ಲ ಎಂದ ಅವರು ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕು ಪಂಚಾಯ್ತಿ ಅಧ್ಯಕ್ಷ ನಟರಾಜು ಮಾತನಾಡಿ, ಜನಸಂಪರ್ಕ ಸಭೆಗಳಲ್ಲಿ ಜನರ ಮುಂದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಬ್ಬರೂ ಹಾಜರಾಗುವುದರಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದು ಸಾಧ್ಯ. ಮುಗ್ದ ನಾಗರಿಕರು ಕಚೇರಿಗಳನ್ನು ಅಲೆಯುವುದನ್ನು ತಪ್ಪಿಸಬೇಕಾ ಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

Advertisement

ವಿದ್ಯುತ್‌ ಮತ್ತು ಸೊಳ್ಳೆ ಕಾಟ ತಪ್ಪಿಸಲು ಮನವಿ: ಜನಸಂಪರ್ಕ ಸಭೆಯಲ್ಲಿ ಹಾಜರಿದ್ದ ಬೈರಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಮಾತನಾಡಿ, ಪಂಚಾಯ್ತಿ ವ್ಯಾಪಿಯಲ್ಲ ಸೊಳ್ಳೆ ಕಾಟ ಮತ್ತು ವಿದ್ಯುತ್‌ ಕೊರತೆ ಕಾಡುತ್ತಿದೆ ಎಂದು ಸಭೆಯ ಗಮನ ಸೆಳೆದರು. ಸೊಳ್ಳೆ ಕಾಟದಿಂದ ಈ ಭಾಗದ ನಾಗರಿಕರು ಹೈರಾಣಾಗಿದ್ದಾರೆ. ಜರೂರಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು. ಗ್ರಾಮಪಂಚಯ್ತಿಗಳ ಮೂಲಕ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದರು. ಜಿಪಂ ಸದಸ್ಯ ಮಂಜುನಾಥ್‌, ಕಂಚುಗಾರನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀದೇವರಾಜು, ಬನಿಕುಪ್ಪೆ (ಬಿ) ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಮಂಚನಾಯ್ಕನ ಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಪ್ರಭಾಆನಂದ್‌, ಜಿಪಂ ಸದಸ್ಯ ಮಂಜುನಾಥ್‌, ತಾಪಂ ಸದಸ್ಯರಾದ ಪ್ರಕಾಶ್‌ ಮತ್ತು ನೀಲಾ, ಇಒ ಎಂ.ಬಾಬು, ಎಡಿ ರೂಪೇಶ್‌ಕುಮಾರ್‌, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಎಇಇ ಶಂಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next