Advertisement

ಜನರ ಆಲಸ್ಯ-ಹಠ ಕೋವಿಡ್ ಹೆಚ್ಚಳಕ್ಕೆ ಕಾರಣ: ರೇಣುಕಾಚಾರ್ಯ

04:33 PM Oct 27, 2020 | Suhan S |

ಹೊನ್ನಾಳಿ: ರಾಜ್ಯದಲ್ಲಿ ಕೋವಿಡ್ ಹೆಚ್ಚಳಕ್ಕೆ ಜನರಲ್ಲಿನ ಸೋಮಾರಿತನ, ಆಲಸ್ಯ, ಹಠವೇ ಕಾರಣ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ದಿಂದ ರಾಜ್ಯದಲ್ಲಿ ಸಾವು- ನೋವು ಸಂಭವಿಸುತ್ತಿದ್ದರೂ ಜನರಲ್ಲಿ ಇನ್ನೂ ಜಾಗೃತಿ ಮೂಡಿಲ್ಲ. ಇನ್ನು ಮುಂದಾದರೂ ಕೋವಿಡ್ ಬಗ್ಗೆ ಜಾಗರೂಕತೆಯಿಂದ ಇರಬೇಕು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋವಿಡ್ ಯಶಸ್ವಿಯಾಗಿ ಗೆಲ್ಲುತ್ತೇನೆಂದು ಸಂಕಲ್ಪ ಮಾಡಿದ್ದಾರೆ. ನಾವು ಕೂಡ ಅವರೊಂದಿಗೆ ಕೈಜೋಡಿಸೋಣ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಕೊರೊನಾ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡುತ್ತೇವೆಂದು ಹೇಳಿದ್ದಾರೆ. ಆದಿನ ಆದಷ್ಟು ಬೇಗ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ಹೇಳಿದರು.

ಗುಣಮುಖನಾಗಿರುವೆ: ಕೋವಿಡ್ ಪರೀಕ್ಷೆಯಲ್ಲಿ ಒಂಭತ್ತು ಬಾರಿ ನನಗೆ ನೆಗೆಟಿವ್‌ ಬಂದಿತ್ತು. ಹತ್ತನೇ ಸಲ ಪರೀಕ್ಷೆಗೆ ಒಳಪಟ್ಟಾಗ ಪಾಸಿಟಿವ್‌ ಬಂದಾಗ ಸ್ವಲ್ಪ ಗಾಬರಿಯಾದೆ. ಆದರೆ ನನ್ನಲ್ಲಿನ ಆತ್ಮವಿಶ್ವಾಸದಿಂದ ಇದೀಗ ಕೊರೊನಾದಿಂದ ಮುಕ್ತನಾಗಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದರು.

ನನಗೆ ಕೋವಿಡ್‌ ಬಂದಾಗ ಸಿಎಂ ಸೇರಿದಂತೆ ಸೇರಿದಂತೆ ಸಚಿವರು, ಸರ್ವ ಮಠಗಳ ಮಠಾಧಿಧೀಶರು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದರು. ಅಲ್ಲದೆ ಅವಳಿ ತಾಲೂಕಿನ ಜನರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ನನ್ನ ಚೇತರಿಕೆಗೆ ಪ್ರಾರ್ಥಿಸಿದ್ದರು. ಅವರೆಲ್ಲರ ಶುಭ ಹಾರೈಕೆಯಿಂದ ಇದೀಗ ಗುಣಮುಖನಾಗಿ ಬಂದಿದ್ದೇನೆ ಎಂದರು.

Advertisement

ನ್ಯಾಮತಿ ತಾ.ಪಂ ಅಧ್ಯಕ್ಷ ಎಸ್‌.ಪಿ.ರವಿಕುಮಾರ್‌, ಉಪಾಧ್ಯಕ್ಷ ಮರಿಕನ್ನಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್‌, ಮಾಜಿ ಅಧ್ಯಕ್ಷ ಡಿ.ಜಿ.ರಾಜಪ್ಪ ಇದ್ದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್‌ ಅನ್ನು ವಿರೋಧ ಪಕ್ಷದಲ್ಲಿ ಕೂರಿಸುತ್ತೇನೆಂದು ಸವಾಲು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ 150 ಶಾಸಕರನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದು, ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಎಂ.ಪಿ. ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next