Advertisement

ಜನರ ಮನಸ್ಥಿತಿ ಬದಲಾಗಬೇಕಿದೆ: ಮೋಹನ್‌ ಭಾಗವತ್‌

09:56 PM Oct 09, 2022 | Team Udayavani |

ಕಾನ್ಪುರ: ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಕೇವಲ ಕಾನೂನು ತಂದರೆ ಸಾಲದು. ಅವರ ಉನ್ನತಿ ಖಾತ್ರಿಪಡಿಸಿಕೊಳ್ಳಲು ಜನರ ಮನಸ್ಥಿತಿ ಬದಲಾಗಬೇಕಿದೆ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಪ್ರತಿಪಾದಿಸಿದರು.

Advertisement

ಕಾನ್ಪುರದ ನಾನಾರಾವ್‌ ಪಾರ್ಕ್‌ನಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಲೂ ವಾಲ್ಮೀಕಿ ಸಮುದಾಯ ಬಹಳ ಹಿಂದುಳಿದಿದೆ. ಸಮುದಾಯದ ಅಭಿವೃದ್ಧಿಗೆ ಸಂವಿಧಾನದಲ್ಲಿ ನಿಬಂಧನೆಗಳನ್ನು ಮಾಡಲಾಗಿದೆ. ಆದರೆ ಇದಕ್ಕಿಂತ ಮಿಗಿಲಾಗಿ ಜನರಲ್ಲಿ ಒಳಗೊಳ್ಳುವಿಕೆ ಭಾವನೆ ಮೂಡಬೇಕಿದೆ, ಎಂದರು.

ದಲಿತರ ಉದ್ಧಾರಕ್ಕಾಗಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಅನೇಕ ನಿಬಂಧನೆಗಳನ್ನು ತಂದರು. ಇದರಿಂದ ಎಲ್ಲರೊಂದಿಗೆ ಸಮನಾಗಿ ದಲಿತರು ಕೂರಬಹುದು. ಅವರಿಗೆ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ನೀಡಲಾಗಿದೆ ಎಂದು ಅಂಬೇಡ್ಕರ್‌ ಹೇಳಿದರು. ಆದರೆ ಇದರೊಂದಿಗೆ ಸಾಮಾಜಿಕ ಸ್ವಾತಂತ್ರ್ಯ ಸೇರಿದರೆ ಹೆಚ್ಚು ಅರ್ಥಪೂರ್ಣ. ಕೇವಲ ಕಾನೂನುಗಳು ಸಾಲದು. ನಮ್ಮ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಿದೆ. ಅವರ ಮನಸ್ಥಿತಿಯನ್ನು ಬದಲಿಸಬೇಕಿದೆ, ಎಂದು ಭಾಗವತ್‌ ಪ್ರತಿಪಾದಿಸಿದರು.

ದಲಿತ ಸಮುದಾಯಕ್ಕೆ ಸಾಮಾಜಿಕ ಸ್ವಾತಂತ್ರ್ಯ ದೊರಕಿಸಲು ಹಾಗೂ ಸಾಮಾಜಿಕ ಸಾಮರಸ್ಯ ಮತ್ತು ಒಳಗೊಳ್ಳುವಿಕೆ ಭಾವನೆ ಮೂಡಿಸಲು ಮತ್ತೂಬ್ಬ ಡಾ. ಸಾಹೇಬ್‌(ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ್‌ ಬಲಿರಾಮ್‌ ಹೆಡ್ಗೆವಾರ್) ಶ್ರಮಿಸಿದರು, ಎಂದರು.

Advertisement

Udayavani is now on Telegram. Click here to join our channel and stay updated with the latest news.

Next