ಮುಂಗಟ್ಟು ತೆರೆದಿದ್ದು ವ್ಯಾಪಾರ ವಹಿವಾಟು ಆರಂಭವಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
Advertisement
ಕಳೆದ 40 ದಿನಗಳಿಂದ ಸ್ಥಬ್ದವಾಗಿದ್ದ ರಾಮ ನಗರ ಜಿಲ್ಲೆಯಲ್ಲಿ ವ್ಯಾಪಾರಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ. ಬಟ್ಟೆ, ಜ್ಯೂವೆಲ್ಲರಿ, ಎಲೆಕ್ಟ್ರಾನಿಕ್ಸ್, ಸ್ಟೇಷನರಿ ಸೇರಿದಂತೆ ಎಲ್ಲ ಬಗೆ ಅಂಗಡಿಗಳಿಗೂ ವ್ಯಾಪಾರಕ್ಕೆ ಅವಕಾಶ ಸಿಕ್ಕಿದೆ. ಹೋಟೆಲ್‌ಗಳು, ಟೀ ಅಂಗಡಿಗಳು, ಸಲೂನ್, ಬ್ಯೂಟಿ ಪಾರ್ಲರ್, ಜ್ಯೂಸ್ ಅಂಗಡಿ, ಸಮುದಾಯ ಭವನ, ಕಲ್ಯಾಣ ಮಂದಿರ, ಸಿನೆಮಾ ಮಂದಿರ ತೆರೆಯಲು ಅವಕಾಶ ನಿರಾಕರಿಸಲಾಗಿದೆ. ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸರ್ಕಾರಿ ರೇಷ್ಮೆಗೂಡು, ಮಾವು ಮಂಡಿ ಹಾಗೂ ಎಪಿಎಂಸಿ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ.
ಅಂಗಡಿಗಳು, ಒಂಟಿ ಅಂಗಡಿಗಳು ಮತ್ತು ವಸತಿ ಸಮುಚ್ಚಯದಲ್ಲಿರುವ ಅಂಗಡಿಗಳು ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮಾತ್ರ ತೆರೆಯಲು ಅವಕಾಶವಿದೆ. ಬಹುತೇಕ ಅಂಗಡಿಗಳಲ್ಲಿ ಮಾಲಿಕರು, ಸಿಬ್ಬಂದಿ, ಗ್ರಾಹಕರು ಮಾಸ್ಕ್ ಧರಿಸಿದ್ದು ಕಂಡು ಬಂತು. ಆದರೆ ಬಹುತೇಕ ಅಂಗಡಿಗಳಲ್ಲಿ ಸ್ಯಾನಿಟೈಸ್‌ರ್ ಬಳಕೆಯಾಗಲಿಲ್ಲ. ಬಸ್‌ನಲ್ಲಿ 30 ಮಂದಿಗೆ ಮಾತ್ರ ಅವಕಾಶ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ದ್ವಿಚಕ್ರ ವಾಹನಗಳ ಭರಾಟೆ ಹೆಚ್ಚಾಗಿತ್ತು. ಆಟೋ ರಿಕ್ಷಾಗಳು ರಸ್ತೆಗಿಳಿದಿದ್ದವು. ಬೆಂಗಳೂರು
ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಷ್ಟಾಗಿ ಕಾಣಲಿಲ್ಲ. ಜಿಲ್ಲೆ ಯಲ್ಲಿ ಕೆಎಸ್‌ಆರ್ ಟಿಸಿ ಬಸ್‌ಗಳು 30 ಬಸ್‌ಗಳು ಮಾತ್ರ ಸಂಚಾರ ಮಾಡಿದವು. ಖಾಸಗಿ ಬಸ್‌ಗಳು,
ಟ್ಯಾಕ್ಸಿ ಓಡಾಟ ಹೆಚ್ಚಾಗಿ ಕಾಣಲಿಲ್ಲ.
Related Articles
ಜಿಲ್ಲಾಡಳಿತ ವೈನ್ ಸ್ಟೋರ್‌ಗಳು, ಜ್ಯೂವೆಲ್ಲರಿ ಅಂಗಡಿ ತೆರೆಯಲು ಅವಕಾಶ ನೀಡಿತ್ತಾದರೂ, ಬಳೆ ಅಂಗಡಿ, ಕಾಸ್ಮೆಟಿಕ್ಸ್ ವ್ಯಾಪಾರಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದ
ರಿಂದ ಈ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಮೊರೆ ಹೋಗಿದ್ದರು. ನಂತರ ಈ ಅಧಿಕಾರಿಗಳ ಅನುಮತಿಯ ಮೇರೆಗೆ ಬಳೆ ಅಂಗಡಿಗಳು ವ್ಯಾಪಾರ ಆರಂಭಿಸಿದವು.
Advertisement