Advertisement

ಕನ್ನಡ ಭಾಷೆ ಬೆಳವಣಿಗೆಗೆ ಜನರ ಸಹಕಾರ ಅಗತ್ಯ: ಫುಲಾರಿ

09:43 AM Mar 10, 2022 | Team Udayavani |

ಅಫಜಲಪುರ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇದರ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕಸಾಪ ಅಧ್ಯಕ್ಷ ಪ್ರಭು ಫುಲಾರಿ ಹೇಳಿದರು.

Advertisement

ತಾಲೂಕಿನ ಗಡಿ ಗ್ರಾಮವಾಗಿರುವ ಅರ್ಜುಣಗಿಯಲ್ಲಿ ಬೆಂಗಳೂರು ಗಡಿ ಪ್ರದೇಶಾಭಿವೃದ್ಧಿ ಪ್ರಾಧಿ ಕಾರ, ಮಲ್ಲಾಬಾದ್‌ನ ಸಾಮ್ರಾಟ್‌ ಅಶೋಕ ಚಾರಿಟೇಬಲ್‌ ಟ್ರಸ್ಟ್‌ ಆಶ್ರಯದಲ್ಲಿ ನಡೆದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಗಡಿನಾಡು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಡಿ ಭಾಗಗಳಲ್ಲಿ ಕನ್ನಡ ಭಾಷೆ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ. ಗಡಿ ಭಾಗಗಳಲ್ಲಿ ಸಾಕಷ್ಟು ಕನ್ನಡದ ಪ್ರತಿಭೆಗಳಿವೆ. ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಉತ್ತಮ ಕಾರ್ಯ ಮಾಡುತ್ತಿವೆ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಸವರಾಜ ಚಾಂದಕವಟೆ ಮಾತನಾಡಿ, ಗಡಿಭಾಗದ ಕನ್ನಡ ಭಾಷೆ ಸೊಗಸಾಗಿದೆ. ಆದರೆ ಸೌಲಭ್ಯ, ಪ್ರೋತ್ಸಾಹದ ಕೊರತೆಯಿಂದ ಕಳೆಗುಂದುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿಕ್ಷಕಿ ಸಂಧ್ಯಾ ಗೊಡಗೋಲೆ ಮಾತನಾಡಿ, ನಾನು ಹುಬ್ಬಳ್ಳಿಯಿಂದ ಮೊದಲ ಸಲ ಇಲ್ಲಿಗೆ ಶಿಕ್ಷಕಿಯಾಗಿ ಬಂದಾಗ ಇಲ್ಲಿನ ಜನ ಹೇಗಿದ್ದಾರೋ? ಊರು ಹೇಗಿದೆಯೋ ಎನ್ನುವ ಆತಂಕವಿತ್ತು. ಈ ಊರಿಗೆ ರಸ್ತೆ ಇಲ್ಲ, ಮೂಲಭೂತ ಸೌಕರ್ಯಗಳಿಲ್ಲ. ಆದರೆ ಇಲ್ಲಿನ ಜನರ ಪ್ರೀತಿ, ಆತಿಥ್ಯಕ್ಕೆ ಮನಸೋತಿದ್ದೇನೆ. ಈಗ ಇಲ್ಲಿಂದ ಹೋಗಲು ಮನಸ್ಸಿಲ್ಲ ಎಂದರು.

Advertisement

ಟ್ರಸ್ಟ್‌ ಅದ್ಯಕ್ಷ ಯಲ್ಲಪ್ಪ ದೊಡ್ಮನಿ ಮಾತನಾಡಿ, ಟ್ರಸ್ಟ್‌ ವತಿಯಿಂದ ತಾಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ನರೇಗಾ, ಭಿûಾಟನೆ ನಿರ್ಮೂಲನೆ, ಮಹಿಳಾ ಶೋಷಣೆ ವಿರುದ್ಧ ಬೀದಿ ನಾಟಕಗಳನ್ನು ಮಾಡಿದ್ದೇವೆ. ಈಗ ಗಡಿನಾಡು ಸಾಂಸ್ಕೃತಿಕ ಉತ್ಸವ ಆಯೋಜಿಸಿ ಗಡಿ ಭಾಗದ ಸಮಸ್ಯೆಗಳು, ಬೇಡಿಕೆಗಳನ್ನು ಸರ್ಕಾರದ ಗಮನ ಸೆಳೆಯುತ್ತಿದ್ದೇವೆ ಎಂದು ಹೇಳಿದರು.

ಪತ್ರಕರ್ತರಾದ ರಾಹುಲ್‌ ದೊಡ್ಮನಿ, ಸಿದ್ಧು ಶಿವಣಗಿ, ಶಿಕ್ಷಕರಾದ ಕಾಳಿಂಗ ತಳವಾರ, ನಿಂಗಣ್ಣ ಪೂಜಾರಿ, ಜಗದೇವಪ್ಪ ಕೊರಳ್ಳಿ ಮಾತನಾಡಿದರು. ಮುಖಂಡರಾದ ಸಿದ್ಧರಾಮ ಮಲ್ಲಾಬಾದ, ಯಲ್ಲಪ್ಪ ವಾಡೇಕರ, ಸುಶೀಲಕುಮಾರ ನವಲಗಿರಿ, ಚಿದಾನಂದ ಅರ್ಜುಣಗಿ, ನೀಲಕಂಠ ದೊಡ್ಮನಿ, ಶರಣಗೌಡ ಬಿರಾದಾರ, ಶೌಕತ ಅಲಿ ಮಡ್ಡಿ, ಮಡಿವಾಳಪ್ಪ ಕಟ್ಟಿ, ಸಿದ್ಧು ಕರ್ಜಗಿ ಹಾಗೂ ಇನ್ನಿತರರು ಇದ್ದರು. ಭೀಮರಾವ್‌ ಅರ್ಜುಣಗಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next