Advertisement
ಕ್ವಾರಂಟೈನ್ ಸೆಂಟರ್ ಸ್ಥಾಪನೆ: ಬಹಳ ಶೀಘ್ರವಾಗಿ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ಕ್ವಾರಂಟೈನ್ ಸೆಂಟರ್ ಸ್ಥಾಪಿಸಲಾಯಿತು. ಅಂಬೇಡ್ಕರ್ ಭವನವನ್ನೇ 150 ವಾರ್ಡ್‌ಗಳ ಕ್ವಾರಂಟೈನ್ ಸೆಂಟರ್ ಆಗಿ ಪರಿವರ್ತಿಸಿ ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆಜಿಲ್ಲಾಡಳಿತದಿಂದಲೇ 3 ಹೊತ್ತು ಊಟ, ಮನ ರಂಜನೆಗೆ ಟೀವಿ, ಓದಲು ಪತ್ರಿಕೆ, ಒಳಾಂಗಣ ಆಟದಂತ ಸವಲತ್ತು ನೀಡಲಾಯಿತು.
Related Articles
ಜಿಲ್ಲೆಗೆ ಹೊಂದಿಕೊಂಡಿರುವ ಮೈಸೂರು ಜಿಲ್ಲೆ ನಂಜನಗೂಡು, ಮಂಡ್ಯ ಜಿಲ್ಲೆಯ ಮಳವಳ್ಳಿ ಇದೆ. ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಜಿಲ್ಲೆಯ 56 ಮಂದಿ ಕೆಲಸ ಮಾಡುತ್ತಿದ್ದು, ಅವರ್ಯಾರಿಗೂ ಕೋವಿಡ್-19 ಪಾಸಿಟಿವ್ ಆಗಲಿಲ್ಲ. ನಿಜಾಮುದ್ದೀನ್‌ಗೆ ಜಿಲ್ಲೆಯ 90 ಜನರು ಹೋಗಿದ್ದರು. ಇವರಲ್ಲಿ ಓರ್ವ ಮಾತ್ರ ಮಾರ್ಚ್‌ನಲ್ಲಿ ಹೋಗಿದ್ದು, ಇನ್ನುಳಿದವರು ಜನವರಿ, ಫೆಬ್ರವರಿಯಲ್ಲಿ ಹೋಗಿ ಬಂದವರು! ಹೀಗಾಗಿ ಅದೃಷ್ಟದ ಬಲವೂ ಜಿಲ್ಲೆಗಿದೆ!
Advertisement
ಜನರ ಸಹಕಾರ ಮುಖ್ಯಇದೊಂದು ದೊಡ್ಡ ವಿಪತ್ತು. ಇದನ್ನು ಎದುರಿಸಲು ಸಮುದಾಯವನ್ನು ಮಾನಸಿಕವಾಗಿ ಸಿದ್ಧಪಡಿಸಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಆಗ ಜನರು
ನಮಗೆ ಸ್ಪಂದಿಸುತ್ತಾರೆ. ನಮ್ಮ ಜನ ಮಾನಸಿಕವಾಗಿ ಸಿದ್ಧರಾದರು. ಆಡಳಿತದ ಎಲ್ಲ ಕ್ರಮಗಳನ್ನು ಅನುಮೋದಿಸುತ್ತಾ ಬಂದರು ಎಂದು ಜಿಲ್ಲಾಧಿಕಾರಿ ಡಾ. ಎಂ.
ರವಿ ಉದಯವಾಣಿಗೆ ತಿಳಿಸಿದರು. ಸೂಕ ಸಮಯದಲ್ಲಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಚೆಕ್‌ಪೋಸ್ಟ್‌ನಲ್ಲಿ ತೀವ್ರ ನಿಗಾ
ಇರಿಸಿದೆವು. ರಸ್ತೆಗಳಲ್ಲಿ ಸುಮ್ಮನೆ ಓಡಾಡುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಯಿತು. 535 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂತಾರಾಜ್ಯ ಗಡಿ ಬಂದ್ ಆಗಿದೆ. ಜೀವನಾವಶ್ಯಕ ಸಾಮಗ್ರಿಗಳ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ.
● ಆನಂದಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ● ಕೆ.ಎಸ್. ಬನಶಂಕರ ಆರಾಧ್ಯ