Advertisement

ಡೆಂಗ್ಯೂ ವಿರುದ್ಧ ಆಂದೋಲನಕ್ಕೆ ಜನರ ಸಹಕಾರ ಅಗತ್ಯ: ಡಾ|ಸೆಲ್ವಮಣಿ

08:40 PM Jul 28, 2019 | Sriram |

ಮಹಾನಗರ: ಲಾರ್ವಾ ಮುಕ್ತ ಪ್ರದೇಶವನ್ನಾಗಿಸುವ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳು ಸೇರಿದಂತೆ ಸಾರ್ವ ಜನಿಕರು ಕೂಡ ಕೈಜೋಡಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್‌ ಸಿಇಒ ಡಾ| ಆರ್‌. ಸೆಲ್ವಮಣಿ ಹೇಳಿದರು.


Advertisement

ಡೆಂಗ್ಯೂ ತಡೆಯಲು ಡೆಂಗ್ಯೂ ಡ್ರೈವ್ ಡೇ ಅಭಿಯಾನಕ್ಕೆ ದ.ಕ.ಜಿ.ಪಂ.ನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಡೆಂಗ್ಯೂ ಸೊಳ್ಳೆ ಶುದ್ಧ ನೀರಿನಲ್ಲಿ ಉತ್ಪತ್ತಿಯಾಗುತ್ತದೆಯೇ ವಿನಃ ಕೊಳಚೆ ನೀರು, ಮೋರಿಯಿಂದ ಉತ್ಪತ್ತಿಯಾಗುವುದಿಲ್ಲ. ಕೇವಲ ಫಾಗಿಂಗ್‌ ಮೂಲಕ ಡೆಂಗ್ಯೂ ನಿರ್ಮೂಲನೆ ಸಾಧ್ಯ ವಿಲ್ಲ. ಇದರಿಂದ ಪರಿಸರ ಹಾಳಾಗುತ್ತದೆ. ಇದರ ಬದಲು ವಾರದಲ್ಲಿ ಒಂದು ಗಂಟೆಗಳ ಕಾಲ ತಮ್ಮ ಮನೆಗಳಲ್ಲಿ ಲಾರ್ವಾ ಹುಳು ಇದೆಯೇ ಎಂದು ಪರಿಶೀಲಿಸಿ, ಇದ್ದರೆ ನಾಶ ಮಾಡಬೇಕು ಎಂದರು.
ಜಿ.ಪಂ. ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಲಾರ್ವಾಗಳ ಪತ್ತೆ ಹಚ್ಚಿ ಅವುಗಳನ್ನು ನಾಶಪಡಿಸಲಾಯಿತು. ಕಾರ್ಯಕ್ರಮದಲ್ಲಿ ಮನಪಾ ಉಪಾಯುಕ್ತೆ ಗಾಯತ್ರೀ ನಾಯಕ್‌, ಸಚಿನ್‌ ಸಹಿತ ಮೊದ ಲಾದವರು ಉಪಸ್ಥಿತರಿದ್ದರು.

ಮನೆ ಸ್ವಚ್ಛ ವಾಗಿರಲಿ
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನೆ ಸ್ವಚ್ಛ ವಾಗಿಡಬೇಕು. ಟಯರ್‌, ಮನೆಯ ಟೆರೇಸ್‌, ನೀರು ನಿಲ್ಲುವ ಜಾಗಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next