Advertisement

ಜೇವರ್ಗಿಯಲ್ಲೂ ಜನಾಶೀರ್ವಾದ ಯಾತೆ

10:09 AM Feb 12, 2018 | Team Udayavani |

ಜೇವರ್ಗಿ: ಎಐಸಿಸಿ ಅಧ್ಯಕ್ಷ ಮತ್ತು ಸಂಸದ ರಾಹುಲ್‌ ಗಾಂಧಿ ಅವರು ಫೆ.12ರಂದು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸ್ವತ್ಛತೆ ಕಾರ್ಯ ಪೂರ್ಣಗೊಂಡಿದೆ. ಸಮಾವೇಶ ನಡೆಯುವ ವೇದಿಕೆ ಸಿದ್ಧಗೊಂಡಿದೆ. 

Advertisement

ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಆಗಮಿಸುತ್ತಿರುವ ರಾಹುಲ್‌ ಗಾಂಧಿ  ಸ್ವಾಗತಕ್ಕೆ ಜೇವರ್ಗಿ ಹಾಗೂ ಯಡ್ರಾಮಿ ಬ್ಲಾಕ್‌ ಕಾಂಗ್ರೆಸ್‌ ಘಟಕಗಳ ಮುಖಂಡರು ಸಜ್ಜಾಗಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್‌ ಅವರನ್ನು ಸನ್ಮಾನಿಸಲಾಗುತ್ತಿದೆ. ತಾಲೂಕು ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆ ಸಿದ್ಧವಾಗಿದೆ. 50 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಆಗಮಿಸುವ ಜನರಿಗೆ ಊಟ, ಕುಡಿಯುವ ನೀರು ಹಾಗೂ ಪದವಿ ಕಾಲೇಜಿನ ಮೈದಾನದಲ್ಲಿ ಪಾಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಯುವ ಕಾಂಗ್ರೆಸ್‌ ಕಾರ್ಯಕರ್ತರು ಅವರಾದ ಕ್ರಾಸ್‌ನಿಂದ ವೇದಿಕೆ ವರೆಗೆ 5 ಕಿಮೀ ಬೈಕ್‌ ರ್ಯಾಲಿ ನಡೆಸಲಿದ್ದಾರೆ. ಪಟ್ಟಣದ ರಿಲಾಯನ್ಸ್‌ ಪೆಟ್ರೋಲ್‌ ಬಂಕ್‌ನಿಂದ ಬಸವೇಶ್ವರ ವೃತ್ತದವರೆಗೆ ಗಿಡ ನೆಡಲಾಗಿದೆ. ಕಂಬಗಳಿಗೆ ಹೊಸ ವಿದ್ಯುತ್‌ ಬಲ್ಬ್ ಹಾಕಿ ರಸ್ತೆ ದುರಸ್ತಿ ಮಾಡಲಾಗಿದೆ.
 
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾದ ವೇದಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಐಟಿಬಿಟಿ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ಡಾ| ಅಜಯಸಿಂಗ್‌ ರವಿವಾರ ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ, ಸೋಮವಾರ ಮಧ್ಯಾಹ್ನ 2:00ಕ್ಕೆ ರಾಹುಲ್‌ ಗಾಂಧಿ ಪಟ್ಟಣಕ್ಕೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಸೇರಿದಂತೆ ವಿವಿಧ ಸಚಿವರು, ಶಾಸಕರು, ಜಿಲ್ಲೆಯ, ತಾಲೂಕಿನ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ರಾಹುಲ್‌ ಭಾಷಣ ಮಾಡುವ ವೇದಿಕೆ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರವಿವಾರ ಬೆಳಗ್ಗೆ ಪೋಲೀಸ್‌ ಇಲಾಖೆ ಸೇರಿದಂತೆ ಎಸ್‌ಜಿಪಿ ಪ್ರತಿಯೊಂದು ಹಂತದಲ್ಲಿ ಪರಿಶೀಲಿಸಿದೆ. ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರ ಪಟ್ಟಿ ಎಸ್‌ಜಿಪಿ ಪಟ್ಟಿ ಪಡೆದಿದೆ. ವೇದಿಕೆಯಲ್ಲಿ ಜೇವರ್ಗಿ ಕ್ಷೇತ್ರದ ಪ್ರಮುಖ ಮುಖಂಡರನ್ನು ಮತ್ತು ಜನಪ್ರತಿನಿಧಿ ಗಳನ್ನು ಕರೆತರುವ ಯತ್ನಕ್ಕೆ ಎಸ್‌ಜಿಪಿ ಬ್ರೇಕ್‌
ಹಾಕುವ ಸಾದ್ಯತೆ ಹೆಚ್ಚಿದೆ. ಆದರೂ ಹೆಚ್ಚು ಜನರನ್ನು ವೇದಿಕೆ ಮೇಲೆ ಕೂಡಿಸುವ ಪ್ರಯತ್ನ ನಡೆದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next