Advertisement

ಮತದಾನ ಮಾಡದವರಿಗೆ ಮಂಗಳಾರತಿ

10:34 AM Apr 19, 2019 | Team Udayavani |

ಚಿಕ್ಕಮಗಳೂರು: ಮತ ಚಲಾಯಿಸದೆ ಮೋಜು ಮಸ್ತಿಗಾಗಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಹಾರ ಹಾಕಿ, ಶಹಬ್ಟಾಸ್‌ ಗಿರಿ ನೀಡಿ ಸನ್ಮಾನಿಸುವ
ಮೂಲಕ ಅವರ ಮುಖಕ್ಕೆ ಮಂಗಳಾರತಿ ಮಾಡಿದೆ.

Advertisement

ಕಳೆದ ಕೆಲ ದಿನಗಳಿಂದ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಲ್ಲಿ “ಮತದಾನ ಮಾಡಿ’ ಎಂದು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದರು.

ಮತದಾನದ ದಿನ ರಜಾ ಇರುವುದರಿಂದ ಪ್ರವಾಸಕ್ಕೆ ಆಗಮಿಸದೆ ಮತ ಚಲಾಯಿಸಿದ ನಂತರ ಪ್ರವಾಸಕ್ಕೆ ಬರುವಂತೆ ಮನವಿ ಮಾಡಿದ್ದರು. ಹೀಗಾಗಿ ಗುರುವಾರ ಮಾಗಡಿ ಹ್ಯಾಂಡ್‌ ಪೋಸ್ಟ್‌ ಮತ್ತು ಗಿರಿ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿ ನಿಂತು ಪ್ರವಾಸಿಗರ ವಾಹನಗಳನ್ನು ತಡೆದು ಮತದಾನ ಮಾಡಿ ಬಂದಿರುವ ಬಗ್ಗೆ ಪರಿಶೀಲಿಸಿದರು. ಈ ವೇಳೆ 200ಕ್ಕೂ ಅಧಿಕ ಪ್ರವಾಸಿಗರು ಮತ ಚಲಾಯಿಸದೇ
ಬಂದಿರುವುದು ಬೆಳಕಿಗೆ ಬಂತು. ಅವರಲ್ಲಿಬೆಂಗಳೂರಿನ ಐಟಿಬಿಟಿ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚಿತ್ತು. ಹಲವರಿಗೆ ಇದೀಗ ನಡೆಯುತ್ತಿರುವುದು ಯಾವ ಚುನಾವಣೆ ಎಂಬುದೇ ತಿಳಿದಿರಲಿಲ್ಲ. ಇನ್ನೂ ಕೆಲವರಿಗೆ ಮತದಾನದ ದಿನಾಂಕವೂ ಗೊತ್ತಿಲ್ಲದಿರುವುದು ದಂಗುಬಡಿಸಿತು.

ಈ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳುಅವರಿಗೆ ಶಹಬ್ಟಾಸ್‌ಗಿರಿ ನೀಡಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌,ಎಟಿಎಂ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಜೆರಾಕ್ಸ್‌ ಪ್ರತಿಯ ಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಮುಂದಿನ ಬಾರಿ ಮತದಾನ ಮಾಡದೇ ಆಗಮಿಸುವ ಪ್ರವಾಸಿಗರನ್ನು ವಾಪಸ್‌ ಕಳುಹಿಸುವ ಎಚ್ಚರಿಕೆ ನೀಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್‌, ಪ್ರಧಾನ ಕಾರ್ಯದರ್ಶಿ ಬ್ಯಾಲದಾಳ್‌ ಕುಮಾರ್‌, ಕಾರ್ಯದರ್ಶಿ ವಿ.ಜೆ. ರಾಜೇಶ್‌, ಪುರುಷೋತ್ತಮ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next