ಕನಕಪುರ: ಕೋವಿಡ್ 19 ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕದಲ್ಲಿದ್ದ ಶಂಕಿತರು ಮತ್ತು ಸ್ವಯಂ ಪ್ರೇರಿತರಾಗಿ ಸಾರ್ವಜನಿಕರು ಸೇರಿದಂತೆ 70 ಮಂದಿ ಜಿಲ್ಲಾ ಆರೋಗ್ಯ ಇಲಾಖೆ ಸಂಚಾರ ಮೊಬೈಲ್ ಫೀವರ್ ಕ್ಲಿನಿಕ್‌ನಲ್ಲಿ ಕೋವಿಡ್-19 ಪರೀಕ್ಷೆಗೆ ಮುಂದಾದರು.
ಜಿಲ್ಲಾ ಆರೋಗ್ಯ ಇಲಾಖೆ ತೆರೆದಿರುವ ಸಂಚಾರಿ ಮೊಬೈಲ್ ಫೀವರ್ ಕ್ಲಿನಿಕ್‌ಗೆ ಮಂಗಳವಾರ, ತಾಲೂಕಿನ ಮರಳವಾಡಿ ಆರೋಗ್ಯ ಕೇಂದ್ರದ ಸುತ್ತಲಿನ ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಿತರು ಮತ್ತು ಕೋವಿಡ್-19 ಪರೀಕ್ಷೆಗೆ ಒಳಪಡುವ ಅವಕಾಶ ಕಲ್ಪಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಮರಳವಾಡಿಯ ಇಂದಿರನಗರದ (60) ವೃದ್ಧೆಯ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕದಲ್ಲಿದ್ದ 20 ಹಾಗೂ ಸ್ವಯಂ ಪ್ರೇರಿತರಾಗಿ ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು ಸೇರಿ 50 ಜನರು ಒಟ್ಟು 70 ಮಂದಿ ಕೋವಿಡ್-19 ಪರೀಕ್ಷೆಗೆ ತಮ್ಮ ಗಂಟಲು ದ್ರವದ ಮಾದರಿ ಕೊಟ್ಟರು.
ಮರಳವಾಡಿ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಆಶಾಕಾರ್ಯಕರ್ತೆಯರು ಪರೀಕ್ಷೆಗೆ ಒಳಪಟ್ಟರು. ಮರಳವಾಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾಸ್ಕರನಾಥ್ ಮಾತನಾಡಿ, ಕೋವಿಡ್ 19 ನಿಯಂತ್ರಣಕ್ಕೆ ಸಂಚಾರಿ ಫೀವರ್ ಕ್ಲಿನಿಕ್ ಸಹಕಾರಿಯಾಗಲಿದೆ.
ಕೆಲವು ಶಂಕಿತರು ಪರೀಕ್ಷೆಗೆ ಹಿಂದೇಟು ಹಾಕುತ್ತಾರೆ. ಸ್ಥಳೀಯ ಆರೋಗ್ಯ ಕೇಂದ್ರದಿಂದ ಸಂಚಾರಿ ಫೀವರ್ ಕ್ಲಿನಿಕ್‌ನಲ್ಲಿ ಶಂಕಿತರು, ಆತಂಕವಿಲ್ಲದೆ ಕೋವಿಡ್-19 ಪರೀಕ್ಷೆಗೆ ಒಳಪಡಬಹುದು. ಇದರಿಂದ ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಬಹುದು ಎಂದರು. ಸ್ಥಳೀಯ ಜಿಪಂ ಸದಸ್ಯರು, ಮಾಜಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಕೋವಿಡ್-19 ಪರೀಕ್ಷೆಗೆ ಸ್ವಯಂ ಪ್ರೇರಿತರಾಗಿ ಒಳಪಟ್ಟರು.