Advertisement
ಇದು ಪ್ರಸಿದ್ಧ ಗಿರಿಧಾಮವಾಗಿರುವ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಸೋಲಿಗ ಜನಾಂಗ ವಾಸಿಸುವ ಪುರಾಣಿ ಪೋಡಿನ ಜನರ ಕಣ್ಣೀರಿನ ಕಥೆ. ಕಾಡುಪ್ರಾಣಿಗಳ ಭಯದಲ್ಲೇ ಕಡಿದಾದ 2 ಕಿ.ಮೀ. ಕಚ್ಚಾ ರಸ್ತೆಯಲ್ಲೇ ನಡೆದು ಪಡಿತರ ತರಬೇಕಿದೆ. ಒಟ್ಟು ಹೋಗುವ, ಬರುವ ದೂರ ಸೇರಿದರೆ ನಾಲ್ಕು ಕಿ.ಮೀ. ನಡೆದರೆ ಮಾತ್ರ ಪಡಿತರ ಸಿಗುತ್ತದೆ.
Related Articles
Advertisement
ಈ ರಸ್ತೆ ಕಲ್ಲು ಮಣ್ಣು, ಹಳ್ಳ ದಿಣ್ಣೆಗಳಿಂದ ಕೂಡಿದೆ. ಇಲ್ಲಿ ಅಲ್ಪ ಆಯತಪ್ಪಿದರೂ ಬಿದ್ದುಮೂಳೆಮುರಿಯುವ ಸಾಧ್ಯತೆ ಇದೆ. ಮಹಿಳೆಯರು ಹಾಗೂ ವೃದ್ಧರು ನಡೆಯುವುದೇಕಷ್ಟವಾಗಿದ್ದು, ಭಾರಹೊತ್ತ ಮೂಟೆಗಳನ್ನು ಹೊತ್ತುಸಾಗುವುದು ಮತ್ತಷ್ಟುಕಷ್ಟವಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಪ್ರತಿ ಬಾರಿ ಚುನಾವಣೆ ನಡೆದಾಗಲೂ ಇಲ್ಲಿಗೆ ರಸ್ತೆ, ವಿದ್ಯುತ್, ನೀರು ನೀಡುವ ಭರವಸೆ ನೀಡಿದ್ದ ಶಾಸಕರು ಗೆದ್ದ ನಂತರ ಇತ್ತ ತಿರುಗಿನೋಡೇ ಇಲ್ಲ. ಚುನಾವಣೆಗೆ ಮುಂಚೆ ಮತಯಾಚನೆಗೆ ಮೂರ್‍ನಾಲ್ಕು ಬಾರಿ ಬಂದಿದ್ದ ಇವರು ಗೆದ್ದನಂತರ ಇತ್ತ ತಿರುಗೇ ನೋಡಿಲ್ಲ ಎಂದು ಇಲ್ಲಿನವಾಸಿಗಳಾದ ಸಿದ್ದೇಗೌಡ, ಮಾದೇಗೌಡ, ರಂಗಮ್ಮ, ಕೇತಮ್ಮ, ದೈತಮ್ಮ ಮತ್ತಿತರರು ದೂರಿದ್ದಾರೆ.
ಪಡಿತರ ವಾಹನ ತೆರಳಲು ಸಾಧ್ಯವಿಲ್ಲ :
ಈ ಹಿಂದೆ ಪುರಾಣಿ ಪೋಡಿನ ಆಶ್ರಮ ಶಾಲೆಯ ಬಳಿ ನಾವು ಪಡಿತರ ವಿತರಿಸುವ ಪಾಯಿಂಟ್ ಇಟ್ಟುಕೊಂಡಿದ್ದೆವು. ಒಟ್ಟು 105 ಪಡಿತರದಾರರು ಇದ್ದಾರೆ. ಆದರೆ, ಮಳೆಯಿಂದ ಇಲ್ಲಿನ ರಸ್ತೆಹಾಳಾಗಿದೆ. ಇಲ್ಲಿಗೆ ತೇಗದಕಟ್ಟೆ ತನಕ ಮಾತ್ರವಾಹನ ತೆರಳುತ್ತದೆ. ಹಾಗಾಗಿ ಕಳೆದ ಮೂರು ತಿಂಗಳಿಂದ ಇಲ್ಲೇ ಪಡಿತರವನ್ನು ವಿತರಿಸ ಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ ರಸ್ತೆ ದುರಸ್ತಿ ಮಾಡಿದರೆ ಅಲ್ಲೇ ಪಡಿತರ ವಿತರಣೆ ಮಾಡಲುಕ್ರಮ ವಹಿಸಲಾಗುವುದು ಎಂದು ಲ್ಯಾಂಪ್ಸ್ ಸೊಸೈಟಿಯ ಸೇಲ್ಸ್‌ಮನ್ ಪರಶಿವಮೂರ್ತಿ ಮಾಹಿತಿ ನೀಡಿದರು.
ಮಳೆ ಬಂದು ಈ ರಸ್ತೆ ಹಾಳಾಗಿದೆ.ಈ ಬಗ್ಗೆ ಇಲಾಖೆಯ ವತಿಯಿಂದದುರಸ್ತಿ ಮಾಡಲು ಸಂಬಂಧಪಟ್ಟ ಮೇಲಧಿಕಾರಿ ಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ತಕ್ಷಣ ಇದನ್ನು ಆದಷ್ಟು ಬೇಗ ದುರಸ್ತಿ ಮಾಡಲು ಕ್ರಮ ವಹಿಸಲಾಗುವುದು. – ಲೋಕೇಶ್ ಮೂರ್ತಿ, ಆರ್‌ಎಫ್ಒ
– ಫೈರೋಜ್ ಖಾನ್